ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆನಾವು ಬದುಕುವ ಸಮಾಜದಲ್ಲಿ ಅನ್ನ ಮತ್ತು ಅಕ್ಷರಕ್ಕೆ ಹೆಚ್ಚಿನ ಮಹತ್ವವಿದ್ದು, ಪ್ರತಿಯೊಬ್ಬರು ಅನ್ನಕ್ಕೆ ನೀಡುವ ಸ್ಥಾನಮಾನ ಅಕ್ಷರಕ್ಕೂ ಸಹ ನೀಡಬೇಕು ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿ.ವಿಜಯ್ ಕುಮಾರ್ ತಿಳಿಸಿದರು ನಗರದ ಪಾರ್ವತಿಪುರದಲ್ಲಿರುವ ಗಾಯತ್ರಿ ವಿದ್ಯಾಮಂದಿರದಲ್ಲಿ ದಿ. ಮುನಿನೈನಪ್ಪ ೧೫ನೇ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.ಪರೋಪಕಾರದಿಂದ ಪುಣ್ಯ ಸಂಪಾದನೆ ಸಾಧ್ಯವಿದೆ. ದೊಡ್ಡ ಕಟ್ಟಡ ಕಟ್ಟುವ ಮೊದಲು ದೊಡ್ಡ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಹಣದ ಬದಲಾಗಿ ಅನ್ನ ಮತ್ತು ಅಕ್ಷರಕ್ಕೆ ಮಹತ್ವವನ್ನು ಕೊಟ್ಟರೆ ಬದುಕು ಸಾರ್ಥಕವಾಗುತ್ತದೆ. ಆದ್ದರಿಂದ ಸಮಾಜ ಸೇವಕ ದಿ. ಮುನಿನೈನಪ್ಪ ಸಮಾಜಮುಖಿ ಚಿಂತನೆಯ ಹಾದಿಯಲ್ಲಿ ನಾವು ಕೂಡ ಸಾಗುತ್ತಿದ್ದು, ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದರು. ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದಾನಿಗಳು ನೀಡುವ ಕಲಿಕಾ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ನಿರಂತರ ಓದು, ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧನೆ ಮಾಡಬಹುದಾಗಿದೆ ಎಂದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆಮಿನಿ ಸತೀಶ್, ಸೇರಿದಂತೆ ಗಾಯತ್ರಿ ವಿದ್ಯಾ ಮಂದಿರದ ಸಿಬ್ಬಂದಿ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))