ಸಾರಾಂಶ
ನಿಮ್ಮ ಗುರಿಯತ್ತ ನಿಮ್ಮ ದೃಷ್ಠಿ ಇರಬೇಕು. ಶಾಲೆಯಲ್ಲಿ ಒಳ್ಳೆಯ ಟೀಚರ್ ಇರುತ್ತಾರೆ. ಕಲಿಯುವ ಆಸಕ್ತಿ ನಿಮ್ಮಲ್ಲಿ ಇರಬೇಕು. ಓದುವ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಸೆಳೆಯದ ಆಗೇ ನೋಡಿಕೊಳ್ಳುವುದು ನಿಮ್ಮ ಕೈಲಿ ಇರುತ್ತದೆ. ನಿಮ್ಮನಿಮ್ಮ ಮನಸ್ಸನ್ನು ಯಾವ ರೀತಿ ಸಿದ್ಧಪಡಿಸಿಕೊಂಡಿದ್ದೀರಿ, ಇಂತಹ ಮನಸ್ಸನ್ನು ಸರಿಯಾಗಿ ಇಟ್ಟುಕೊಂಡು ಹೋಗುತ್ತದೆ. ನಮ್ಮ ಮನಸ್ಸುಗಳಲ್ಲಿ ಬೇಕು ಬೇಡವಾದವು ಅಲ್ಲೆಕೊಳೆಯುತ್ತಿರುತ್ತದೆ. ಓದುವ ವೇಳೆ ಮನಸ್ಸು ಯಾವ ರೀತಿ ಇರುತ್ತದೆ ಎಂಬುದು ಓದುವುದನ್ನು ನಿರ್ಧರಿಸುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ಕೊಳೆ ತೆಗೆಯಲು ಆಗುವುದಿಲ್ಲವೂ ಅವರು ಜೀವನದಲ್ಲಿ ಸಮಸ್ಯೆ ಎದುರಿಸುತ್ತಾರೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಸಾಧನೆ ಎಂಬುದು ನಿಮ್ಮ ಮನಸ್ಸಿನ ನಿರ್ಧಾರದಲ್ಲಿ ಅಡಗಿರುತ್ತದೆ. ಓದುವ ಸಮಯದಲ್ಲಿ ಮನಸ್ಸನ್ನು ಉತ್ತಮ ದಾರಿಯತ್ತ ಕೊಂಡೊಯ್ದರೇ ಮುಂದಿನ ಭವಿಷ್ಯ ಒಳ್ಳೆಯದಾಗಿರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀರಂಗ ವಿದ್ಯಾಸಂಸ್ಥೆ, ಬ್ರಿಲಿಯಂಟ್ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದ ಅವರು, ಸಾಧನೆಗಾಗಿ ನೀವು ಬಂದಿದ್ದು, ನಿಮ್ಮ ಗುರಿಯತ್ತ ನಿಮ್ಮ ದೃಷ್ಠಿ ಇರಬೇಕು. ಶಾಲೆಯಲ್ಲಿ ಒಳ್ಳೆಯ ಟೀಚರ್ ಇರುತ್ತಾರೆ. ಕಲಿಯುವ ಆಸಕ್ತಿ ನಿಮ್ಮಲ್ಲಿ ಇರಬೇಕು. ಓದುವ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಸೆಳೆಯದ ಆಗೇ ನೋಡಿಕೊಳ್ಳುವುದು ನಿಮ್ಮ ಕೈಲಿ ಇರುತ್ತದೆ. ನಿಮ್ಮನಿಮ್ಮ ಮನಸ್ಸನ್ನು ಯಾವ ರೀತಿ ಸಿದ್ಧಪಡಿಸಿಕೊಂಡಿದ್ದೀರಿ, ಇಂತಹ ಮನಸ್ಸನ್ನು ಸರಿಯಾಗಿ ಇಟ್ಟುಕೊಂಡು ಹೋಗುತ್ತದೆ. ನಮ್ಮ ಮನಸ್ಸುಗಳಲ್ಲಿ ಬೇಕು ಬೇಡವಾದವು ಅಲ್ಲೆಕೊಳೆಯುತ್ತಿರುತ್ತದೆ. ಓದುವ ವೇಳೆ ಮನಸ್ಸು ಯಾವ ರೀತಿ ಇರುತ್ತದೆ ಎಂಬುದು ಓದುವುದನ್ನು ನಿರ್ಧರಿಸುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ಕೊಳೆ ತೆಗೆಯಲು ಆಗುವುದಿಲ್ಲವೂ ಅವರು ಜೀವನದಲ್ಲಿ ಸಮಸ್ಯೆ ಎದುರಿಸುತ್ತಾರೆ ಎಂದರು.ಶ್ರೀರಂಗ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಚ್.ಎಸ್. ಅನಿಲ್ ಕುಮಾರ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಹಿಂದಿನ ಓದುವಿನ ಗ್ರಹಿಕ ಮಟ್ಟಕ್ಕೂ ಪ್ರಸ್ತುತದಲ್ಲಿ ಮಕ್ಕಳ ಗ್ರಹಿಕ ಮಟ್ಟಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ತಲೆಮಾರಿಗಿಂತ ಇಂದು ಗ್ರಹಿಸುವ ಶಕ್ತಿ ಬಹುದೊಡ್ಡ ಪ್ರಮಾಣದಲ್ಲಿದೆ. ಆದರೆ ದುರಂತ ಯಾವುದನ್ನು ಗ್ರಹಿಸಬೇಕು ಎಂಬುದನ್ನು ಕಳೆದುಕೊಂಡಿದ್ದೇವೆ. ವಿವೇಚನೆ ಇದ್ದರೆ ಸನ್ಮಾರ್ಗದಲ್ಲಿ ಹೋಗುತ್ತೇವೆ. ಅದರ ಪುನಶ್ಚೇತನ ಆಗಬೇಕಾಗಿದೆ. ನಿಮ್ಮ ಎದುರು ಶಾರದೆಯ ಸುಪುತ್ರರು ಇದ್ದು, ಅವರ ಪ್ರತಿ ಉಪನ್ಯಾಸವು ಹೃದಯದಲ್ಲಿ ಹೊಸ ಅಲೆ ನಿಮ್ಮಲ್ಲಿ ಬರುತ್ತದೆ ಎಂದರು. ಆಧ್ಯಾತ್ಮ ಎಂಬುದು ಒಂದು ಮಗುವಿನ ಅಳುವಿನಲ್ಲಿ ಗುರುತಿಸಬಹುದು. ಇಂತಹ ಮಹನೀಯರ ಮಾತುಗಳು ಕೇಳಿದರೇ ಹೊಸ ಚಿಂತನೆಗಳು ನಿಮ್ಮಲ್ಲಿ ಹುಟ್ಟುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಮಠದ ಸ್ವಾಮೀಜಿಗಳಾದ ಕೈಲಾಸನಾಥ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಸಂಸ್ಥೆಯ ಜವರಾಜೇಗೌಡ, ಪುಷ್ಪ, ನವೀನ್, ರಘು ಇತರರು ಉಪಸ್ಥಿತರಿದ್ದರು.