ಸಾರಾಂಶ
ಮೈಸೂರು ; ಉತ್ತರಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ 41ನೇ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ಟೇಕ್ವಾಂಡೋ ಫೆಡರೇಷನ್ ಆಫ್ ಇಂಡಿಯಾದ ಮೈಸೂರು ವಿಭಾಗದ ಏಳು ಟೇಕ್ವಾಂಡೋ ಆಟಗಾರರು ಪದಕಗಳನ್ನು ಪಡೆಯುವ ಮೂಲಕ ಮೈಸೂರಿಗೆ ಕೀರ್ತಿ ತಂದಿದ್ದಾರೆ.
ಮಹಿಳೆಯರ 55 ಕೆ.ಜಿ ವಿಭಾಗದಲ್ಲಿ ನಕ್ಷತ್ರ, 47 ಕೆ.ಜಿ ವಿಭಾಗದಲ್ಲಿ ಎಂ. ಸಮೀಕ್ಷಾ ಅಸಾಧಾರಣ ಕೌಶಲ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿ ಚಿನ್ನದ ಪದಕಗಳನ್ನು ಗಳಿಸಿದದ್ದಾರೆ. 37 ಕೆ.ಜಿಯೊಳಗಿನ ವಿಭಾಗದಲ್ಲಿ ಲಿಪಿಕಾ ಎಸ್. ಕುಮಾರ್ ಬೆಳ್ಳಿ ಪದಕ ಪಡೆದಿದ್ದಾರೆ.
41 ಕೆ.ಜಿ ವಿಭಾಗದಲ್ಲಿ ದಿವ್ಯಾಂಶಿ, 35 ಕೆ.ಜಿ ವಿಭಾಗದಲ್ಲಿ ಪ್ರಣೀತಾರಾಜ್, 32 ಕೆ.ಜಿ ವಿಭಾಗದಲ್ಲಿ ಅದ್ವಿಕಾ ಅರುಣ್ ಕಂಚಿನ ಪದಕಗಳನ್ನು ಗಳಿಸಿದರು. ಪುರುಷರ 61 ಕೆ.ಜಿಯೊಳಗಿನ ವಿಭಾಗದಲ್ಲಿ ಇಹಿತ್ ಬೆಳ್ಳಿ ಪದಕ ಪಡೆದರು.
ಮಹಿಳಾ ವಿಭಾಗದಲ್ಲಿ ಕೀರ್ತನಾ ಮತ್ತು ಪುರುಷರ ವಿಭಾಗದಲ್ಲಿ ಪ್ರತ್ಯುಷ್ ರಾಜ್ ಮತ್ತು ಆದಿತ್ಯ ಎಸ್. ಕುಮಾರ್ ಅವರು ಚಾಂಪಿಯನ್ ಶಿಪ್ ನಲ್ಲಿ ವಿಶೇಷ ಪ್ರಶಂಸೆಗೆ ಅರ್ಹರಾದರು. ಡಿ.ವಿ. ಸಾಯಿಪ್ರತಾಪ್ ತರಬೇತುದಾರರಾಗಿದ್ದರು.