ರಾಮನಗರ: ನಗರದ ಹೊರ ವಲಯದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಿಡದಿಯ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಹಲವಾರು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ
ರಾಮನಗರ: ನಗರದ ಹೊರ ವಲಯದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಿಡದಿಯ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಹಲವಾರು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಟಿ.ಎಸ್.ಶ್ರೇಯಸ್‌ಗೌಡ ಟಿ.ಎಸ್ 200 ಮೀ. ಓಟದಲ್ಲಿ ಪ್ರಥಮ, ಚಂದನ್‌ಗೌಡ 400 ಮೀ.ನಲ್ಲಿ ಪ್ರಥಮ, ಪಿ.ಪೂರ್ವಿಕ್ 800 ಮೀ. ಪ್ರಥಮ, ಎಂ.ವಿ.ತರುಣ್ 800ಮೀ. ದ್ವಿತೀಯ, ಸಿ.ಲಿಖಿತ್ 1500 ಮೀ. ತೃತೀಯ ಮತ್ತು 3 ಸಾವಿರ ಮೀ. ಪ್ರಥಮ, ಜೆ.ಚಂದನಾ 3 ಸಾವಿರ ಮೀ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಗುಡ್ಡಗಾಡು ಓಟದಲ್ಲಿ ಸಿ.ಲಿಖಿತ್, ಲಿಖಿತ್‌ಗೌಡ, ನಿತಿನ್, ಹರ್ಷಿತ್‌ಗೌಡ ಎಸ್ ಪ್ರಥಮ ಸ್ಥಾನ. ಲಾಂಗ್‌ಜಂಪ್ ನಲ್ಲಿ ಎ.ಆರ್.ಸುರಭಿ ಪ್ರಥಮ, ಚಕ್ರ ಎಸೆತದಲ್ಲಿ ಸಿ.ಎನ್.ಪರಿಣಿತ್ ದ್ವಿತೀಯ, ಎಂ.ಎನ್.ಪರಿಣಿತ್ ತೃತೀಯ, ಜಾವೆಲಿನ್ ಥ್ರೋನಲ್ಲಿ ಸಿ.ಎನ್.ಪರಿಣಿತ್ ಪ್ರಥಮ, ಶಾಟ್‌ಪುಟ್ ಸ್ಪರ್ಧೆಯಲ್ಲಿ ಟಿ.ಎಸ್.ಶ್ರೇಯಸ್‌ಗೌಡ ಪ್ರಥಮ, ಎಚ್.ಎಸ್.ಮೋನಿಷಾ ದ್ವಿತೀಯ, ಸರಪಳಿ ಎಸೆತದಲ್ಲಿ ಚಿರಂತನ್ ತೃತೀಯ. 4x400 ಮೀ.ರಿಲೆಯಲ್ಲಿ ನಿತಿನ್ ಮತ್ತು ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ.
ಕರಾಟೆ ಸ್ಪರ್ಧೆಯಲ್ಲಿ ಅರ್ಹಾನ್ ಮತ್ತು ತನುಶ್ರೀ ಪ್ರಥಮ. ಟೆಕೊಂಡೊ ಸ್ಪರ್ಧೆಯಲ್ಲಿ ಸುಲ್ತಾನ ಫಿರ್ದೋಸ್ ಮತ್ತು ತಂಡ. ಯೋಗ ಸಾಂಪ್ರದಾಯಿಕ-ಪೂರ್ವಿ ಜಿ ಪ್ರಥಮ. ಪುಟ್ಟರಾಜ ಶರಣಪ್ಪ ಕುರಿ ಪ್ರಥಮ, ಯೋಗ ರಿಸ್ಟಿಕ್- ಆರ್.ವಿದ್ಯಾಶ್ರೀ ಮತ್ತು ಎನ್. ಸೃಜನ್ ಪ್ರಥಮ, ಚೆಸ್ ನಲ್ಲಿ ಎಂ.ವಿ.ತರುಣ್ ಪ್ರಥಮ ಗಳಿಸಿದ್ದಾರೆ.ಗುಂಪು ಆಟಗಳು: ಕಬಡ್ಡಿ-ಸಾಗರ್ ಮತ್ತು ತಂಡ, ಹ್ಯಾಂಡ್‌ಬಾಲ್-ತೋಷಿತ್ ಮತ್ತು ತಂಡ ಪ್ರಥಮ, ಫುಟ್ಬಾಲ್- ಮಹಮದ್ ಅರ್ಹಾನ್ ಮತ್ತು ತಂಡ ಪ್ರಥಮ, ನೆಟ್‌ಬಾಲ್- ಆಕಾಶ್ ಮತ್ತು ತಂಡ ದ್ವಿತೀಯ, ಬಾಸ್ಕೆಟ್‌ಬಾಲ್-ವಿಜಯಪ್ರಕಾಶ್ ಮತ್ತು ತಂಡ ದ್ವಿತೀಯ ಪಡೆದಿದ್ದಾರೆ.
ಬಾಲಕಿಯರ ಗುಂಪು ಆಟಗಳು: ಬಾಸ್ಕೆಟ್‌ಬಾಲ್- ಸೋನಿತ್ ಮತ್ತು ತಂಡ ದ್ವಿತೀಯ, ನೆಟ್‌ಬಾಲ್ ದೃತಿ ಮತ್ತು ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ದಿನೇಶ್ ಅವರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಪ್ರಾಂಶುಪಾಲರಾದ ಎಂ.ಸಿ.ಸುರೇಶ ಅಭಿನಂದನೆ ಸಲ್ಲಿಸಿದ್ದಾರೆ.5ಕೆಆರ್ ಎಂಎನ್ 4.ಜೆಪಿಜಿ
ಬಿಡದಿಯ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಗಳಿಸಿರುವ ರಾಮನಗರದ ಹೊರ ವಲಯದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.