ಆ್ಯಸಿಡ್ ದಾಳಿ ಪ್ರಕರಣ: ಕಡಬ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಪ್ರತಿಭಟನೆ

| Published : Mar 07 2024, 01:45 AM IST

ಆ್ಯಸಿಡ್ ದಾಳಿ ಪ್ರಕರಣ: ಕಡಬ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಉಪ ತಹಸೀಲ್ದರ್ ಮನೋಹರ್ ಕೆ.ಟಿ. ಮನವಿಯನ್ನು ಸ್ವೀಕರಿಸಿದರು

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಕೇರಳದ ಯುವಕನೋರ್ವ ಆ್ಯಸಿಡ್ ಎರಚಿದ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸುಬ್ರಹ್ಮಣ್ಯ ಇದರ ಕಡಬ ಶಾಖೆಯ ವತಿಯಿಂದ ಕಡಬ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಎಬಿವಿಪಿಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀರಾಂ ಅಂಗಿರಸ ಅವರು ಮಾತನಾಡಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿನಿಯರಿಗೆ ಒಂದು ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಬೇಕು ಮತ್ತು ಈ ದಾಳಿಗೆ ಮುಖ್ಯ ಕಾರಣವಾಗಿರುವುದು ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದು. ಕಾಲೇಜಿನ ಸುತ್ತಮುತ್ತ ಯಾವುದೇ ಕಾಂಪೌಂಡ್ ವ್ಯವಸ್ಥೆ ಇಲ್ಲ. ಈ ವಿಷಯವನ್ನು ಹಲವು ಬಾರಿ ಕಾಲೇಜಿನ ಪ್ರಾಂಶುಪಾಲರು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಈ ವಿಷಯವನ್ನು ಸರ್ಕಾರ ಆದಷ್ಟು ಬೇಗ ಮನವರಿಕೆ ಮಾಡಿಕೊಂಡು ಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.ಎ.ಬಿ.ವಿ.ಪಿ. ಕಾರ‍್ಯಕರ್ತೆ ಪುಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಬಿ.ವಿ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಂತ್ ಸುಬ್ರಹ್ಮಣ್ಯ ಸ್ವಾಗತಿಸಿದರು. ಸ್ಟೂಡೆಂಟ್ ಡೆವಲಪ್‌ಮೆಂಟ್ ಪ್ರಮುಖ್ ಚೈತ್ರಾ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಉಪ ತಹಸೀಲ್ದರ್ ಮನೋಹರ್ ಕೆ.ಟಿ. ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಎ.ಬಿ.ವಿ.ಪಿ. ತಾಲೂಕು ಸಂಚಾಲಕ ಸುಹಾಸ್ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಆ್ಯಸಿಡ್‌ ಪ್ರಕರಣ: ಮಾತೃಶಕ್ತಿ, ದುರ್ಗಾವಾಹಿನಿ ಘಟಕ ಖಂಡನೆಉಪ್ಪಿನಂಗಡಿ: ಕಡಬ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಯುವಕ ಆ್ಯಸಿಡ್ ಎರಚಿರುವುದು ಖಂಡನಿಯವಾಗಿದ್ದು, ಈ ಪೈಶಾಚಿಕ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಸಿ ಘಟನೆಯಲ್ಲಿ ಗಾಯಗೊಂಡ ಮೂವರು ವಿದ್ಯಾರ್ಥಿಗಳಿಗೆ ತಲಾ ೧೦ ಲಕ್ಷ ರು. ಪರಿಹಾರ ನೀಡಬೇಕು ಎಂದು ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷದ್ , ಮಾತೃಶಕ್ತಿ , ದುರ್ಗಾವಾಹಿನಿ ಘಟಕ ಆಗ್ರಹಿಸಿದೆ.

ಕಡಬದಲ್ಲಿ ಬುಧವಾರ ಪತ್ರೀಕಾಗೋಷ್ಠಿ ನಡೆಸಿ ಮಾತನಾಡಿದ ಮಾತೃಶಕ್ತಿ ಕಡಬ ಪ್ರಖಂಡ ಪ್ರಮುಖ್ ಪ್ರೇಮಲತಾ ವಾಸುದೇವ ಕೇಪುಂಜ, ವಿದ್ಯಾರ್ಥಿಗಳ ಕುಟುಂಬ ಘಟನೆಯಿಂದ ಮಾನಸಿಕವಾಗಿ ಘಾಸಿಗೊಂಡಿದೆ. ಸರ್ಕಾರದಿಂದ ಧೈರ್ಯ ತುಂಬುವ ಕೆಲಸವಾಗಬೇಕು. ಸರ್ಕಾರ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಮುತುವರ್ಜಿವಹಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತೃಶಕ್ತಿ ಪ್ರಮುಖ್ ವೀಣಾ ರಮೇಶ್ ಕೇಪುಂಜ, ವಿಶ್ವ ಹಿಂದೂ ಪರಿಷದ್ ಜೊತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ದುರ್ಗಾವಾಹಿನಿ ಸಂಯೋಜಕಿ ದೇವಕಿ ಯಶೊಧರ ಪೂವಳ, ವಿಶ್ವ ಹಿಂದೂ ಪರಿಷದ್ ಮುಖಂಡ ಪ್ರಮೋದ್ ರೈ ನಂದುಗುರಿ ಇದ್ದರು.