ನಿಷ್ಪಕ್ಷಪಾತ ಚುನಾವಣೆಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ

| Published : Mar 29 2024, 12:52 AM IST

ನಿಷ್ಪಕ್ಷಪಾತ ಚುನಾವಣೆಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಷ್ಪಕ್ಷಪಾತ, ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಿಷ್ಪಕ್ಷಪಾತ, ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಚುನಾವಣೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಿಗೆ ಅವರ ಸಮಿತಿ ಹೊಣೆಗಾರಿಕೆ ಮತ್ತು ತಮ್ಮ ಜವಾಬ್ದಾರಿಗಳ ಕುರಿತು ಸಂಪೂರ್ಣ ಅರಿವಿರಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಸಾರ್ವಜನಿಕರು ವಿವಿಧ ಕೌಟುಂಬಿಕ ಕಾರ್ಯಕ್ರಮಗಳಾದ ಮದುವೆ, ಗೃಹ ಪ್ರವೇಶ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಬಟ್ಟೆ ಖರೀದಿ, ಆಭರಣಗಳ ಖರೀದಿ. ರೈತರು ದನ ಕರಗಳನ್ನು ಖರೀದಿ ಹಾಗೂ ಮಾರಾಟ, ಬೆಳೆಗಳ ಮಾರಾಟ ಮತ್ತು ಸಾರ್ವಜನಿಕರು ಗೃಹ ನಿರ್ಮಾಣಕ್ಕಾಗಿ ಅವಶ್ಯಕ ವಸ್ತುಗಳ ಖರೀದಿ ಸಲುವಾಗಿ ತೆಗೆದುಕೊಂಡು ಹೋಗುವ ಹಣದ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ದಾಖಲೆಗಳನ್ನು ನೀಡಿ ಸಹಕರಿಸಬೇಕು. ₹50 ಸಾವಿರ ಮೇಲ್ಪಟ್ಟ ಹಣವನ್ನು ದಾಖಲೆ ಇಲ್ಲದೇ ಸಾಗಾಟ ಮಾಡುವಂತಿಲ್ಲ ಎಂದು ತಿಳಿಸಿದರು.

ಬ್ಯಾಂಕ್‌ಗಳಲ್ಲಿ ಹಣ ತೆಗೆದುಕೊಳ್ಳುವುದು, ವರ್ಗಾವಣೆ ಹಾಗೂ ಸಾಗಾಟದಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಲಕ್ಷಗಿಂತ ಹೆಚ್ಚಿನ ಹಣದ ಚಟುವಟಿಕೆಗಳು ನಡೆದಲ್ಲಿ ವ್ಯವಸ್ಥಾಪಕರು ತಕ್ಷಣ ಮಾಹಿತಿ ನೀಡಬೇಕು. ಹೆಚ್ಚಿನ ಹಣ ವರ್ಗಾವಣೆಯ ಸಂಶಯಾಸ್ಪದ ಬ್ಯಾಂಕ್ ಖಾತೆಗಳಿದ್ದಲ್ಲಿ ಅವುಗಳ ಮಾಹಿತಿಯನ್ನು ಐಟಿ ಇಲಾಖೆಗೆ ತಿಳಿಸಬೇಕು ಎಂದರು.

ದಕ್ಷತೆ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಲು ಎಸ್ಎಸ್ಟಿ ಮತ್ತು ಎಫ್ಎಸ್ಟಿ ತಂಡಗಳ ಕಾರ್ಯನಿರ್ವಹಣೆ ತಿಳಿಸಿದರು. ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ಮಾಡುವುದನ್ನು ತಡೆಗಟ್ಟಲು ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಬರುವ ವಾಹನವನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕ್ರಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ಹಾಗೂ ಇಡೀ ಸಂಗತಿಯಯನ್ನು ವಿಡಿಯೋ ರೆಕಾರ್ಡ್‌ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿಪಂ ಮುಖ್ಯ ಯೋಜಾಧಿಕಾರಿ ಪುನಿತ್, ಜಂಟಿ ಕೃಷಿ ನಿರ್ದೇಶಕ ಎಲ್.ಎಸ್.ಕಳ್ಳೇನ್ನವರ, ಇಲಾಖೆ ಉಪನಿರ್ದೇಶಕ ಎಲ್.ಐ.ರೂಢಗಿ, ಎನ್ಐಸಿಯ ಗಿರಯಾಚಾರ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕೋರೆ, ಲೀಡ್ ಬ್ಯಾಂಕ್ ಮ್ಯಾನೇಜರ್‌ ಮದುಸೂಧನ ಸೇರಿದಂತೆ ಇತರರು ಇದ್ದರು.

----------

ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ಮಾಡುವುದನ್ನು ತಡೆಗಟ್ಟಲು ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಬರುವ ವಾಹನವನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕ್ರಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಹಣ ತೆಗೆದುಕೊಳ್ಳುವುದು, ವರ್ಗಾವಣೆ ಹಾಗೂ ಸಾಗಾಟದಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು.

- ಜಾನಕಿ ಕೆ.ಎಂ ,

ಜಿಲ್ಲಾ ಚುನಾವಣಾಧಿಕಾರಿ.