ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನ್ಯಾಯಾಲಯದ ಪ್ರಕಟಣೆಗಳ ಅಳತೆ ಕೆಲಸವನ್ನು ಕಾಲಮಿತಿಯೊಳಗೆ ಆದ್ಯತೆ ಮೇರೆಗೆ ಪೂರೈಸಬೇಕು. ಆದಷ್ಟು ಶೀಘ್ರವಗಿ ಕಡತ ತಯಾರಿಸಿ ಕಚೇರಿಗೆ ನೀಡಬೇಕು. ಈ ಸಂಬಂಧ ಬೇಜವಾಬ್ದಾರಿ ತೋರಿದರೇ ಅಂತಹ ಭೂಮಾಪಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭೂ ದಾಖಲೆಗಳ ಉಪ ನಿರ್ದೇಶಕಿ ಕೆ. ರಮ್ಯಾ ಎಚ್ಚರಿಸಿದರು.ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮೈಸೂರು ಎಡಿಎಲ್ಆರ್ ಕಚೇರಿಯ ಮೊಜಿಣಿ, ಆಕಾರ್ ಬಂದ್ ಗಣಕೀಕರಣ, ಹಿಸ್ಸಾ ಮ್ಯಾಪಿಂಗ್, ಈ ಆಫೀಸ್, ದರಖಾಸ್ತು, ನ್ಯಾಯಾಲಯ ಪ್ರಕರಣ, ರೀ- ಇಷ್ಯೂ ಕಡತ, ಎಲ್‌ಎನ್ ಡಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲಸದ ವೇಳೆಯಲ್ಲಿ ಕೆಲ ಭೂಮಾಪಕರು ಕಚೇರಿಯಲ್ಲಿಲ್ಲದೆ, ಯಾವುದೇ ಮಾಹಿತಿ ನೀಡದೆ ಹೊರಗುಳಿದು ರೈತರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದೆ. ಶೀಘ್ರದಲ್ಲೇ ಕಚೇರಿಗೆ ದಿಢೀರ್ ಭೇಟಿ ನೀಡಲಾಗುವುದು. ಆ ಸಮಯದಲ್ಲಿ ಯಾವುದೇ ಕಾರಣವಿಲ್ಲದೇ ಕಚೇರಿಯಲ್ಲಿಲ್ಲದ ಭೂಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಕಂದಾಯ ಸಚಿವರ ನಿರ್ದೇಶನದಂತೆ ಯಾವುದೇ ಅರ್ಜಿಗಳನ್ನು ಈ ಆಫೀಸ್ ತಂತ್ರಾಂಶದ ಮೂಲಕವೇ ವಿಲೇಗೊಳಿಸಬೇಕು ಎಂದರು.
ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಂ. ಮಂಜುನಾಥ್, ಅಧೀಕ್ಷಿಕ ನಾಗೇಶ್, ಸರ್ವೆ ಪರ್ಯಾವೇಕ್ಷರಾದ ಸ್ವಾಮಿ, ನಾಗರಾಜು, ಕೀರ್ತಿಕುಮಾರ್, ಅನಿಲ್ ಆಂಥೋನಿ, ಭೂಮಾಪಕರಾದ ಎಂ.ಕೆ. ಪ್ರಕಾಶ್, ಶಂಕರಪ್ಪ, ದಿನಕರ್, ಕಂಚಿನಕೆರೆ ಇ. ದೇವರಾಜು, ಕಂಚೀರಾಯ, ಮಹದೇವಸ್ವಾಮಿ, ಶಾಂತಮಲ್ಲಪ್ಪ, ಶಶಿಧರ್ ಮೂರ್ತಿ, ಮಲ್ಲೇಶ್, ಶ್ಯಾನ್ ವಜ್, ಬಿಂದು, ಲಕ್ಷ್ಮೀ, ಕಾವ್ಯಶ್ರೀ, ಎಂ. ಮಹದೇವಸ್ವಾಮಿ, ನಿಂಗಪ್ಪನಾಯಕ, ಲೋಕೇಶ್, ಪರವಾನಗಿ ಭೂಮಾಪಕರು ಮತ್ತು ಸಿಬ್ಬಂದಿ ಇದ್ದರು.ನಾಳೆಯಿಂದ ದಿನ ಬಿಟ್ಟು ದಿನ ವಿದ್ಯುತ್ ವ್ಯತ್ಯಯಮೈಸೂರು: ಸೆಸ್ಕ್ ಹೂಟಗಳ್ಳಿ ಉಪ ವಿಭಾಗ ವ್ಯಾಪ್ತಿಯ 11 ಕೆ.ವಿ ಎನ್.ಜೆ.ವೈ ಯಾಚೇಗೌಡನಹಳ್ಳಿ ಮತ್ತು 11 ಕೆ.ವಿ ಎಡ್ಡೆಹಳ್ಳಿ ಲಿಫ್ಟ್ ಇರಿಗೇಷನ್ ವಿದ್ಯುತ್ ಮಾರ್ಗಗಳಲ್ಲಿ ಲಿಂಕ್ ಲೈನ್ ಕೆಲಸದ ನಿಮಿತ್ತ ಡಿ.1, 3, 5, 7, 9, 11, 13 ಮತ್ತು 15 ರಂದು (ದಿನ ಬಿಟ್ಟು ದಿನ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗುಂಗ್ರಾಲ್ ಛತ್ರ, ಯಡ್ಡಹಳ್ಳಿ, ಯಾಚೇಗೌಡನಹಳ್ಳಿ, ಹೊಸಕೋಟೆ, ದಡದಕಲ್ಲಹಳ್ಳಿ, ಛತ್ರದಕೊಪ್ಪಲು, ರಾಮೇನಹಳ್ಳಿ, ಕಲ್ಲೂರು ನಾಗನಹಳ್ಳಿ, ಕಲ್ಲೂರು, ಮೀನಾಕ್ಷಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಈ ಮೇಲ್ಕಂಡ ಪ್ರದೇಶಗಳ ವ್ಯಾಪ್ತಿಯಲ್ಲಿನ ಕೃಷಿ ಪಂಪ್ ಸೆಟ್ ಗಳಿಗೆ ಸದರಿ ದಿನಗಳಂದು ರಾತ್ರಿ 10 ರಿಂದ ಮಾರನೇ ದಿನದ ಬೆಳಗ್ಗೆ 10 ಗಂಟೆಯವರೆಗೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸೆಸ್ಕ್ ವಿವಿ ಮೊಹಲ್ಲಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.