ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾಕಷ್ಟು ದಾಸ್ತಾನು ಲಭ್ಯವಿದ್ದು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
- ಇಂಧನ ಪೂರೈಕೆಯಲ್ಲಿ ಕೊರತೆಯಿಲ್ಲ; ಸಾಕಷ್ಟು ದಾಸ್ತಾನು ಲಭ್ಯ
- ಜಿಲ್ಲೆಯ ೧೮೨ ಬಂಕ್‌ಗಳಲ್ಲಿ ನಿತ್ಯ ೨.೩೧ ಲಕ್ಷ ಲೀಟರ್ ಇಂಧನ ಬಳಕೆ- ೧೧.೮೧ ಲಕ್ಷ ಲೀಟರ್ ಪೆಟ್ರೋಲ್, ೧೮ ಲಕ್ಷ ಲೀಟರ್ ಡೀಸೆಲ್ ಸಂಗ್ರಹಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾಕಷ್ಟು ದಾಸ್ತಾನು ಲಭ್ಯವಿದ್ದು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಧನ ವಿತರಕ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಸುರಕ್ಷಿತ ಸಂಗ್ರಹವು ಭೀಕರ ಅಗ್ನಿ ಅವಘಡಗಳಿಗೆ ಕಾರಣವಾಗಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧೮೨ ಪೆಟ್ರೋಲ್ ಬಂಕ್‌ಗಳಿದ್ದು ಜಿಲ್ಲೆಯಲ್ಲಿ ಪ್ರತಿ ನಿತ್ಯ ೨.೩೧ (ಲಕ್ಷ) ಲೀಟರ್ ಇಂಧನ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ೧೧.೮೧ ಲಕ್ಷ ಲೀಟರ್ ಪೆಟ್ರೋಲ್ ಸಂಗ್ರಹಣೆ ಇದೆ ಹಾಗೂ ೧೮ ಲಕ್ಷ ಲೀಟರ್ ಡೀಸೆಲ್ ಸಂಗ್ರಹಣೆ ಇದೆ ಸಾರ್ವಜನಿಕರು ಆತಂಕ ಪಟ್ಟು ಅನಗತ್ಯವಾಗಿ ಕ್ಯಾನ್, ಬಾಟಲ್‌ನಲ್ಲಿ ತುಂಬಿಸಿ ಶೇಖರಣೆ ಮಾಡಬೇಡಿ ಎಂದು ಹೇಳಿದರು.ಸಾರ್ವಜನಿಕರು ಪೆಟ್ರೋಲಿಯಂ ಉತ್ಪನ್ನಗಳನ್ನು ಅನಾವಶ್ಯಕವಾಗಿ ಸಂಗ್ರಹಿಸಿಡುವುದು ಕಾನೂನುಬಾಹೀರ ಮತ್ತು ಅಸುರಕ್ಷಿತ. ಅಧಿಕಾರಿಗಳು ಇದನ್ನು ತಡೆಗಟ್ಟಿ ಅಗ್ನಿ ಅವಘಡಗಳು ಉಂಟಾಗದಂತೆ ಗಮನಹರಿಸಬೇಕು ಮತ್ತು ಅನಗತ್ಯವಾಗಿ ಕ್ಯಾನ್ ಮತ್ತು ಬಾಟಲ್‌ಗಳಲ್ಲಿ ತುಂಬಿಸುವವರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ವದಂತಿಗಳಿಂದಾಗಿ ಮಂಡ್ಯದ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರು ದೀರ್ಘಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಅನಗತ್ಯವಾಗಿ ಇಂಧನವನ್ನು ಸಂಗ್ರಹಣೆ ಮಾಡದಂತೆ ಕ್ಯಾನ್‌ಗಳಿಗೆ ಇಂಧನವನ್ನು ತುಂಬಿಸದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.ಪೆಟ್ರೋಲ್ ಬಂಕ್ ಮಾಲೀಕರು ಕಾನೂನು, ನಿಯಮ ಹಾಗೂ ಸುತ್ತೋಲೆಗಳನ್ನು ಅನುಸರಿಸಬೇಕು ಹಾಗೂ ಇಂಧನವನ್ನು ಕ್ಯಾನ್ ಅಥವಾ ಬಾಟಲ್ ಗಳಲ್ಲಿ ತುಂಬಿಸುವ ಪ್ರಕ್ರಿಯೆ ನಿರ್ಬಂಧಿಸಬೇಕು ಎಂದು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ ಶೋಭಾರಾಣಿ, ಆಹಾರ ಇಲಾಖೆ ಉಪ ನಿರ್ದೇಶಕರು ಪ್ರತಿಕ್ ಹೆಗ್ಡೆ, ಪೆಟ್ರೋಲಿಯಂ ಉತ್ಪನ್ನಗಳ ಮಾಲೀಕರು ಭಾಗವಹಿಸಿದ್ದರು.೨ಕೆಎಂಎನ್‌ಡಿ-೨ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂಧನ ವಿತರಕ ಮಾಲೀಕರೊಂದಿಗೆ ಸಭೆ ನಡೆಸಿದರು.