ಸಾರಾಂಶ
ಶಿಗ್ಗಾಂವಿ: ಕಾರ್ಮಿಕ ಇಲಾಖೆಯ ಕೆಲವು ಅಧಿಕಾರಿಗಳು ಕಮಿಷನ್ ಆಸೆಗೆ ಕಂಡ ಕಂಡವರಿಗೆ ಕಾರ್ಮಿಕರ ಕಾರ್ಡ್‌ಗಳನ್ನು ನೀಡಿದ್ದು, ಶಿಗ್ಗಾಂವಿ ಕ್ಷೇತ್ರವೊಂದರಲ್ಲಿಯೇ ೫೦ ಸಾವಿರ ಲೇಬರ್ ಕಾರ್ಡ್ ಮಾಡಿಕೊಡಲಾಗಿದ್ದು, ಅರ್ಹ ಬಡ ಕಾರ್ಮಿಕರು ಸೌಲಭ್ಯ ವಂಚಿತರಾಗಲು ಕಾರಣವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ತಿಳಿಸಿದರು.ಪಟ್ಟಣದ ಜೀತ ವಿಮುಕ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ೩ ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ಮಾಡಲಾಗಿದೆ. ಆದ್ದರಿಂದ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡ ಕಾರ್ಮಿಕ ಸಚಿವಾಲಯ ಸೋಸುವ ಕಾರ್ಯ ಮಾಡುತ್ತಿದೆ. ಅರ್ಹ ಕಾರ್ಮಿಕರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಅನರ್ಹರು ಕಾರ್ಮಿಕ ಕಾರ್ಡ್‌ಗಳನ್ನು ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.ಮುಖಂಡ ಡಿ.ಎಸ್. ಮಾಳಗಿ ಮಾತನಾಡಿ, ದುಡಿಯುವ ವರ್ಗವಾಗಿರುವ ಕಾರ್ಮಿಕ ವರ್ಗ ತನ್ನ ಕಾಯಕದಲ್ಲಿ ಕೈಲಾಸವನ್ನು ಕಾಣಬೇಕು. ಗಾಂಧೀಜಿಯವರು ಸಹ ಕಾರ್ಮಿಕರನ್ನು ದೇವರ ಮಕ್ಕಳು ಎಂದು ಹೇಳಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಹಲವಾರು ಸವಲತ್ತುಗಳಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ ಹರಿಜನ, ತಹಸೀಲ್ದಾರ್ ರವಿಕುಮಾರ ಕೊರವರ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸರಸ್ವತಿ ಘಜಕೋಶ, ಪುರಸಭೆಯ ಮುಖ್ಯಾಧಿಕಾರಿ ಮಲ್ಲೇಶ, ಅಶೋಕ ಕಾಳೆ, ಮಲ್ಲಿಕಾರ್ಜುನ ಈಳಿಗೇರ, ಎಚ್.ಐ. ಬೆಳಗಲಿ, ಮಾರುತಿ ವಡ್ಡರ, ಶಂಕರಗೌಡ್ರ ಪಾಟೀಲ, ಕರಿಯಪ್ಪ ಕಟ್ಟಿಮನಿ, ಅಬ್ದುಲ್ ಸತ್ತಾರ ತಿಳವಳ್ಳಿ ಇತರರಿದ್ದರು.ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆರಾಣಿಬೆನ್ನೂರು: ಗ್ರಾಮೀಣ ಭಾಗದ ಕುಶಲ ಕಾರ್ಮಿಕರಿಗೆ ಅವರಿದ್ದ ಸ್ಥಳದಲ್ಲಿಯೇ ಉದ್ಯೋಗ ನೀಡಲಾಗುವುದು ಎಂದು ತಾಪಂ ಇಒ ಪರಮೇಶ ತಿಳಿಸಿದರು.ತಾಲೂಕಿನ ನದಿಹರಳಹಳ್ಳಿ ಗ್ರಾಪಂ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದಲ್ಲಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಅವಧಿ ಇರುವುದರಿಂದ ತಾಲೂಕಿನ ಎಲ್ಲ 40 ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪಿಡಿಒ ಗೀತಾ ಟಿ. ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿ ಕೂಲಿ ಕೆಲಸ ನೀಡಲಾಗುತ್ತಿದ್ದು, ಯಾರು ವಲಸೆ ಹೋಗಬಾರದು. 2025- 26ನೇ ಸಾಲಿನಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.ವೈದ್ಯಾಧಿಕಾರಿ ಲೋಕೇಶ ವೈ., ಸೌಮ್ಯ ಉಪ್ಪೇರ, ಆರೋಗ್ಯ ಇಲಾಖೆಯ ಐಇಸಿ ಸಂಯೋಜಕ ದೇವೇಂದ್ರಪ್ಪ ಹಾಗೂ ನರೇಗಾ ಐಇಸಿ ಸಂಯೋಜಕ ಡಿ.ವಿ. ಅಂಗೂರ, ಬಿಎಫ್‌ಟಿ ಹನುಮಂತಗೌಡ ಭರಮಗೌಡ್ರ, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, 55 ಜನ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.