ಸಾರಾಂಶ
ರಾಮನಗರ: ನಗರಸಭೆ ಅನುಮತಿ ಪಡೆಯದೆ ನಗರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಸಿದ್ದಾರೆ.
ನಗರಸಭೆಯ ಸಭಾಂಗಣದಲ್ಲಿ ಇ-ಖಾತಾ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ಲೆಕ್ಸ್ ಅಳವಡಿಕೆಯ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಯಾವುದೇ ಪಕ್ಷ, ಸಂಘಟನೆಯಾಗಲಿ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದ ಫ್ಲೆಕ್ಸ್‌ಗಳನ್ನು ತೆರುವುಗೊಳಿಸುವ ಜೊತೆಗೆನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸುವುದಾಗಿ ತಿಳಿಸಿದರು.ಫ್ಲೆಕ್ಸ್‌ಗಳನ್ನು ಮುದ್ರಣ ಮಾಡುವವರು ಕೂಡ ನಗರಸಭೆಯ ಅನುಮತಿ ಪಡೆದಿರುವುದನ್ನು ದೃಢೀಕರಿಸಿಕೊಳ್ಳಬೇಕು. ತದನಂತರವಷ್ಟೇ ಫ್ಲೆಕ್ಸ್ ಮುದ್ರಿಸಬೇಕು, ಇಲ್ಲದಿದ್ದರೆ ಮುದ್ರಣದಾರರ ವಿರುದ್ದವೂ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಇ-ಖಾತೆ ಸೃಜನೆಗೆ ಸರ್ವರ್ ಸಮಸ್ಯೆ:ತಾಂತ್ರಿಕ ಸಮಸ್ಯೆಯಿಂದ ಇ-ಖಾತಾಗಳ ಸೃಜನೆಗೆ ಸಮಸ್ಯೆಯಾಗಿದ್ದರೂ ಇಲ್ಲಿಯವರೆಗೆ ಎಂಟು ಸಾವಿರ ಇ-ಖಾತಾಗಳನ್ನು ಸೃಜಿಸಲಾಗಿದೆ. ಸರ್ವರ್ ಸಮಸ್ಯೆ ನಿವಾರಿಸುವಂತೆ ತಾವು ಪೌರಾಡಳಿತ ನಿರ್ದೆಶನಾಯಲದ ಅಧಿಕಾರಿಗಳ ಗಮನಕ್ಕೂ ಸೆಳೆಯಲಾಗಿದೆ. ಇ-ಖಾತಾ ವಿಳಂಭವಾಗುತ್ತಿರುವುದಕ್ಕೆ ಆಸ್ತಿ ಮಾಲೀಕರು ಸಹಕರಿಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ನಿವಾರಣೆಯಾಗುವವರೆಗೂ ಇವರ ಸಹಕಾರ ಬೇಕು ಎಂದು ಹೇಳಿದರು.
ನಿಯಮ ಉಲ್ಲಂಘಿಸಿದರೆ ದಂಡ:ಕೆಲವು ಪ್ರಜ್ಞಾವಂತರು, ವಿದ್ಯಾವಂತರೇ ತ್ಯಾಜ್ಯವನ್ನು ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಎಲ್ಲರೂ ತ್ಯಾಜ್ಯವನ್ನು ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ಕೊಡಬೇಕು. ನಗರಸಭೆಯ ಮೂಲಕ ಈ ವಿಚಾರದಲ್ಲಿ ದಿನನಿತ್ಯ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಸೇರಿದಂತೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದರು.
ನಗರಸಭೆಯ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷಾ, ಸದಸ್ಯರಾದ ಅಜ್ಮತ್, ಗಿರಿಜಮ್ಮ, ವಿಜಯಕುಮಾರಿ, ನಾಗಮ್ಮ, ನಗರಸಭೆ ಆಯುಕ್ತ ಡಾ.ಜಯಣ್ಣ ಮುಂತಾದವರು ಹಾಜರಿದ್ದರು.23ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ-ಖಾತಾ ವಿತರಣೆ ಮಾಡಿದರು.;Resize=(128,128))
;Resize=(128,128))
;Resize=(128,128))