ಅಂತರಗಂಗೆ ಕ್ಷೇತ್ರಕ್ಕೆ ರಸ್ತೆ ನಿರ್ಮಿಸಲು ಕ್ರಮ

| Published : Feb 27 2025, 12:30 AM IST

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ ಎರಡು ತಿಂಗಳಿನ ಒಟ್ಟಾಗಿ ಅಕ್ಕಿ ವಿತರಿಸಲಾಗುವುದು, ಕೇಂದ್ರ ಮತ್ತು ರಾಜ್ಯ ಸೇರಿದಂತೆ ತಲಾ ೫ ಕೆ.ಜಿ.ಯಲ್ಲಿ ಒಟ್ಟು ಒಬ್ಬರಿಗೆ ೧೦ ಕೆ.ಜಿ. ಅಕ್ಕಿ ವಿತರಿಸಲಾಗುವುದು, ಬ್ಯಾಂಕ್ ಖಾತೆಗೆ ಹಣವನ್ನು ಹಾಕುವುದಿಲ್ಲ, ಈಗಾಗಲೇ ೨.೧೦ ಲಕ್ಷ ಮೆಟ್ರಿಕ್ ಟನ್ ಅಕ್ಕಿ ತಿಂಗಳಿಗೊಮ್ಮೆ ಖರೀದಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರಸಾರ್ವಜನಿಕರ ಕೆಲಸ ದೇವರ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಿದಾಗ ಮಾತ್ರ ಅರ್ಥಪೂರ್ಣವಾಗಲು ಸಾಧ್ಯ ಎಂದು ರಾಜ್ಯ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಗರದ ಹೊರವಲಯದ ದಕ್ಷಿಣ ಕಾಶೀ ಎಂದೇ ಪ್ರಚಲಿತದಲ್ಲಿರುವ ಅಂತರಗಂಗೆಯ ಶ್ರೀ ಕಾಶೀ ವಿಶ್ವನಾಥ ಸ್ವಾಮಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಸ್ತೆ ನಿರ್ಮಾಣಕ್ಕೆ ಮಾತುಕತೆ

ಈ ಕ್ಷೇತ್ರವು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವಾಗಿದೆ. ಮೆಟ್ಟಲು ಹತ್ತಿಕೊಂಡು ಬರಲು ವಯೋವೃದ್ದರಿಗೆ ಅನಾರೋಗ್ಯದವರಿಗೆ ಸಾಧ್ಯವಾಗುತ್ತಿಲ್ಲ. ಈ ಕುರಿತು ದೇವಾಲದವರೆಗೆ ರಸ್ತೆಯನ್ನು ಮಾಡಲು ಸಂಬಂಧಪಟ್ಟ ಅರಣ್ಯ ಇಲಾಖೆ, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ ಎರಡು ತಿಂಗಳಿನ ಒಟ್ಟಾಗಿ ಅಕ್ಕಿ ವಿತರಿಸಲಾಗುವುದು, ಕೇಂದ್ರ ಮತ್ತು ರಾಜ್ಯ ಸೇರಿದಂತೆ ತಲಾ ೫ ಕೆ.ಜಿ.ಯಲ್ಲಿ ಒಟ್ಟು ಒಬ್ಬರಿಗೆ ೧೦ ಕೆ.ಜಿ. ಅಕ್ಕಿ ವಿತರಿಸಲಾಗುವುದು, ಬ್ಯಾಂಕ್ ಖಾತೆಗೆ ಹಣವನ್ನು ಹಾಕುವುದಿಲ್ಲ, ಈಗಾಗಲೇ ೨.೧೦ ಲಕ್ಷ ಮೆಟ್ರಿಕ್ ಟನ್ ಅಕ್ಕಿ ತಿಂಗಳಿಗೊಮ್ಮೆ ಖರೀದಿಸಲಾಗುತ್ತಿದೆ ಎಂದರು. ಮೂರೂ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ

ಈ ಭಾರಿಯ ಬಜೆಟ್‌ನಲ್ಲಿ ಅಭಿವೃದ್ದಿ ಕೆಲಸಗಳ ಬಗ್ಗೆ ಈಗಾಗಲೇ ಬೇಡಿಕೆ ಸರ್ಕಾರದ ಮುಂದೆ ಪ್ರಸ್ತಾಪಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮೂರು ಜಿಲ್ಲೆಗಳ ಅಭಿವೃದ್ದಿ ಮಾಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಕ್ಷದ ಸಿದ್ಧಾಂತ ಪಾಲಸಬೇಕು

ಬಂಗಾರಪೇಟೆ ಶಾಸರ ಎಸ್,ಎನ್.ನಾರಾಯಣಸ್ವಾಮಿ ಅವರ ಅರೋಪಕ್ಕೆ ಪ್ರತಿಕ್ರಿಯಿಸಿ, ನಾವು ಒಂದೇ ಪಕ್ಷದವರಾಗಿದ್ದರೂ ಕೆಲವೊಮ್ಮೆ ಅಭಿಪ್ರಾಯಗಳು ಮೂಡುತ್ತವೆ. ಅದನ್ನು ಪಕ್ಷದ ಸಮ್ಮುಖದಲ್ಲಿ ಸರಿಪಡಿಸಿ ಕೊಂಡು ಎಲ್ಲರೂ ಕಾಂಗ್ರೆಸ್ ಪಕ್ಷದ ಸಿದ್ಧಾಂತದಡಿಯಲ್ಲಿ ಹೋಗಬೇಕು, ಅಭಿವೃದ್ದಿಗೆ ಜನರು ನೀಡಿರುವ ಜನಾದೇಶವನ್ನು ಬೆಳೆಸಿಕೊಂಡು ಮುನ್ನಡೆಯ ಬೇಕಾಗಿದೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧಕ್ಷ ಪ್ರಸಾದಬಾಬು, ಎಸ್.ಸಿ.ಘಟಕದ ಅಧ್ಯಕ್ಷ ಜಯದೇವ, ಮಾಜಿ ನಗರಸಭಾ ಸದಸ್ಯ ಸಿ.ಸೋಮಶೇಖರ್, ಕ್ರೈಸ್ತ ಸಮುದಾಯದ ಮುಖಂಡ ಸುಧೀರ್ ಇದ್ದರು.