ಕೆರೆಗೆ ನೀರು ತುಂಬಿಸಲು ಕ್ರಮ: ಶಿವರಾಜ ತಂಗಡಗಿ

| Published : Aug 26 2024, 01:42 AM IST

ಸಾರಾಂಶ

ಕ್ಷೇತ್ರದ ಜೀರಾಳ, ಹಣವಾಳ ಹಾಗೂ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ₹೩೬ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.

₹36 ಕೋಟಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕನಕಗಿರಿ

ಕ್ಷೇತ್ರದ ಜೀರಾಳ, ಹಣವಾಳ ಹಾಗೂ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ₹೩೬ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ೧೮ ಗ್ರಾಮಗಳಿಗೆ ನೀರು ಪೂರೈಸಲು ₹೨೭.೮೯ ಕೋಟಿ ಮಂಜೂರಾಗಿದೆ. ೨೦ ಎಕರೆ ಪ್ರದೇಶದಲ್ಲಿ ವಿಶಾಲವಾದ ಕೆರೆ ನಿರ್ಮಿಸಿ ಇಲ್ಲಿಂದ ಹಲವು ಗ್ರಾಮಗಳಿಗೆ ನೀರು ಸರಬರಾಜುಗೊಳಿಸಲಾಗುವುದು. ಈ ಕಾಮಗಾರಿ ಪೂರ್ಣಗೊಂಡ ನಂತರ ಇನ್ನೂಳಿದ ೭೦ ಎಕರೆ ಪ್ರದೇಶ(ಸಣ್ಣ ಕೆರೆ)ದಲ್ಲಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮ ಒಂದು ವರ್ಷವಾದರೂ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದರು.

ಇನ್ನೂ ಕೆಕೆಆರ್‌ಡಿ ಯೋಜನೆಯಡಿ ಜೀರಾಳ ಗ್ರಾಮದಲ್ಲಿ ೨ನೇ ಅಂಗನವಾಡಿ ಕಟ್ಟಡ ಕಾಮಗಾರಿಗೆ ₹೧೬ ಲಕ್ಷ, ಜೀರಾಳದ ಎಸ್‌ಸಿ ಕಾಲನಿಯಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ ₹೩೦ ಲಕ್ಷ, ಜೀರಾಳದಿಂದ ಹಿರೇ ಡಂಕನಕಲ್ ಗ್ರಾಮಕ್ಕೆ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹೨.೧೦ ಕೋಟಿ, ಜೀರಾಳದಿಂದ ಹೊಸ ಜೀರಾಳ ಕಲ್ಗುಡಿ ಗ್ರಾಮದವರೆಗೆ ₹೧.೯೫ ಕೋಟಿ, ಮಸಾರಿ ಕ್ಯಾಂಪಿನ ಭೋವಿ ಕಾಲನಿಯಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ ₹೨೬ ಲಕ್ಷ, ಹಣವಾಳ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ಸಿಸಿರಸ್ತೆಗೆ ₹೩೦ ಲಕ್ಷ, ಹಣವಾಳದಿಂದ ಗಾಂಧಿನಗರದಿಂದ ವಾಯಾ ಹೊಸ ಜೀರಾಳ ಕಲ್ಗುಡಿವರೆಗಿನ ರಸ್ತೆ ಡಾಂಬರೀಕರಣಕ್ಕೆ ₹೨.೮೯ ಕೋಟಿ ಹಾಗೂ ಕೆ.ಹಂಚಿನಾಳದ ಪರಿಶಿಷ್ಟ ಪಂಗಡದ ಕಾಲನಿಯಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ ₹೨೦ ಲಕ್ಷ, ಒಟ್ಟು ₹೩೬.೫ ಕೋಟಿ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಕ್ಷೇತ್ರವನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ಪಿಐ ಎಂ.ಡಿ. ಫೈಜುಲ್ಲಾ, ಎಇಇ ವಿಜಯಕುಮಾರ, ತಾಪಂ ಇಒ ಟಿ. ರಾಜಶೇಖರ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಬೆಟ್ಟಪ್ಪ ಜೀರಾಳ, ನಿರುಪಾದೆಪ್ಪ ಸಿರಿವಾರ, ಶರಣಪ್ಪ ಸೋಮಸಾಗರ, ಜೀರಾಳ, ಚಿಕ್ಕಡಂಕನಕಲ್, ಹಣವಾಳ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.