ಖಾಸಗಿ ಕಾಲೇಜುಗಳಿಗಿಂತ ಭಿನ್ನ ಶಿಕ್ಷಣ ನೀಡಲು ಕ್ರಮ: ಶಾಸಕ ಶರತ್ ಬಚ್ಚೇಗೌಡ

| Published : Aug 25 2024, 02:07 AM IST

ಖಾಸಗಿ ಕಾಲೇಜುಗಳಿಗಿಂತ ಭಿನ್ನ ಶಿಕ್ಷಣ ನೀಡಲು ಕ್ರಮ: ಶಾಸಕ ಶರತ್ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ೧೧ ಕೋಟಿ ರು. ವೆಚ್ಚದಲ್ಲಿ ಕಾಲೇಜಿನಲ್ಲಿ ಅತ್ಯಾಧುನಿಕ ಕೊಠಡಿಗಳನ್ನು ನಿರ್ಮಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗಿದೆ.

ಕನ್ನಡಪ್ರಭವಾರ್ತೆ ಹೊಸಕೋಟೆ

ಹೊಸಕೋಟೆ ಪ್ರಥಮ ದರ್ಜೆ ಕಾಲೇಜನ್ನು ಖಾಸಗಿ ಕಾಲೇಜಿಗಿಂತ ವಿಭಿನ್ನವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪಿಂಕ್ ಶೌಚಾಲಯ ಉದ್ಘಾಟನೆ, ಸಿಸಿ ರಸ್ತೆ, ಗ್ರಂಥಾಲಯ ಉನ್ನತೀಕರಣ, ಹೊಸ ಕೋರ್ಸ್ಗಳ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನಾನು ಕಿಯೋನಿಕ್ಸ್ ಅಧ್ಯಕ್ಷನಾಗಿ ಹೊಸಕೋಟೆ ಡಿಜಿಟಲ್ ಲೈಬ್ರರಿಗೆ ಅನುದಾನ ನೀಡಲು ಸಹಿ ಮಾಡಿದ್ದೇನೆ. ಪ್ರಮುಖವಾಗಿ ಸಂಪೂರ್ಣ ಸೆನ್ಸಾರ್ ಹೊಂದಿರುವ ಶೌಚಾಲಯವನ್ನು ಹೊಸಕೋಟೆ ಪ್ರಥಮ ದರ್ಜೆ ಕಾಲೇಜಿಗೆ ಕಲ್ಪಿಸಲಾಗಿದ್ದು, ಇದು ಭಾರತ ದೇಶದಲ್ಲೇ ಪ್ರಥಮ ಎಂದರೆ ತಪ್ಪಾಗಲಾರದು. ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿರುವ ತೃಪ್ತಿ ನಮಗಿದೆ ಎಂದರು.

ಪ್ರಾಂಶುಪಾಲರಾದ ಡೋರಿನ್ ಸ್ನೇಹಲತಾ ಕೋಟ್ಯಾನ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೧೧ ಕೋಟಿ ರು. ವೆಚ್ಚದಲ್ಲಿ ಕಾಲೇಜಿನಲ್ಲಿ ಅತ್ಯಾಧುನಿಕ ಕೊಠಡಿಗಳನ್ನು ನಿರ್ಮಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗಿದೆ ಎಂದರು.

ಬಿಎಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಎಚ್.ಎಂ. ಸುಬ್ಬರಾಜು, ಕೊರಳೂರು ಸುರೇಶ್, ಬಮುಲ್ ನಿರ್ದೇಶಕ ಎಲ್ ಎನ್ ಟಿ ಮಂಜುನಾಥ್, ಬೆಂಗಳೂರು ಉತ್ತರ ವಿವಿ ಡೀನ್ ಮುನಿನಾರಾಯಣ, ಜೀ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದ ಕಂಬದ ರಂಗಯ್ಯ ಸೇರಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.