ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ: ಸಚಿವ ವಿ ಸೋಮಣ್ಣ

| Published : Oct 27 2024, 02:07 AM IST

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ: ಸಚಿವ ವಿ ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ನಿಂತ ನೀರಲ್ಲ ಹರಿಯುವ ನೀರು ಕೆಲಸ ಮಾಡಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು. ಗುಬ್ಬಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಪರಿಶೀಲಿಸಿ ಮಾತನಾಡಿದರು.

ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಹೇಳಿಕೆ । ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಚಿಂತನೆ

ಗುಬ್ಬಿ: ನಾನು ನಿಂತ ನೀರಲ್ಲ ಹರಿಯುವ ನೀರು ಕೆಲಸ ಮಾಡಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು.

ನಾನು ನಿಂತ ನೀರಲ್ಲ ಹರಿಯುವ ನೀರು ಕೆಲಸ ಮಾಡಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು. ಗುಬ್ಬಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಪರಿಶೀಲಿಸಿ ಮಾತನಾಡಿದರು.ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಪರಿಶೀಲಿಸಿ ಮಾತನಾಡಿ, 4 ತಿಂಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಡಿ ಕೆಲಸಗಳು ಜಿಲ್ಲೆಯಲ್ಲಿ ನಡೆಸುತ್ತೇನೆ. ಹೆದ್ದಾರಿ ಅಭಿವೃದ್ಧಿ ಬಗ್ಗೆ ಕೇಂದ್ರದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ. ಸ್ಥಳೀಯ ತೊರೇಹಳ್ಳಿ ಗ್ರಾಮದ ಅಣೆ ರಸ್ತೆಗೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರಿಂದ ಅರ್ಜಿ ಬಂದಿದೆ. ಈ ಕಾರ್ಯ ಕೂಡಾ ಶೀಘ್ರ ಮಾಡಿಸುವ ಭರವಸೆ ನೀಡಿದರು.

ಪಟ್ಟಣದಿಂದ ಚೇಳೂರು ರಸ್ತೆ ಮಾರ್ಗ ಸೇರಲು ಅಂಡರ್ ಪಾಸ್ ರಸ್ತೆ ನಾಗರೀಕರ ಶಾಪಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈಲ್ವೆ ಬೋರ್ಡ್ ಅಧಿಕಾರಿಗಳು ನಿಯಮಾನುಸಾರ 5.5 ಮೀ. ರಸ್ತೆಗೆ ನಕ್ಷೆ ತಯಾರಿಸಿದ್ದಾರೆ. ಆದರೆ ಸಾರ್ವಜನಿಕರ ಹಿತಕ್ಕೆ 7.5 ಮೀ. ರಸ್ತೆ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದು, ವರ್ಷದಲ್ಲಿ ಈ ಕೆಲಸ ಪೂರ್ಣ ಮಾಡಿಕೊಡುವ ಭರವಸೆ ನೀಡಿದರು.ಮಾಜಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ಎಸ್. ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ ,ಜಿ.ಆರ್.ಶಿವಕುಮಾರ್, ಹಿತೇಶ್, ಸುರೇಶ್ ಗೌಡ, ರೈಲ್ವೆ ಉನ್ನತ ಅಧಿಕಾರಿಗಳಾದ ತ್ರಿನೇತ್ರ, ರಾಜುಶರ್ಮ, ಹರೀಶ್ ಗುಪ್ತಾ, ಗುಲ್ ಅಶ್ರಫ್ ಇದ್ದರು.