ಶಾಂತಿ ಕದಡಲು ಮುಂದಾದರೆ ಕ್ರಮ: ಗೃಹ ಸಚಿವ

| Published : Feb 10 2024, 01:47 AM IST

ಸಾರಾಂಶ

ದಾಬಸ್‌ಪೇಟೆ: ಕೋಮುಸೌಹಾರ್ದತೆ ಕದಡುವವರ ನೋಡಿ ಸುಮ್ಮನೆ ಕೂರಲಾಗಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ದಾಬಸ್‌ಪೇಟೆ: ಕೋಮುಸೌಹಾರ್ದತೆ ಕದಡುವವರ ನೋಡಿ ಸುಮ್ಮನೆ ಕೂರಲಾಗಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಜನತೆ ಶಾಂತಿ, ನೆಮ್ಮದಿ, ಸೌಹಾರ್ದತೆಯಿಂದ ಇರಬೇಕು. ಆದರೆ ಕೆಲವರು ಶಾಂತಿ ಕದಡಲು ಮುಂದಾದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಇದೀಗ ಶಾಂತಿ ಕದಡಿದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಕ್ರವರ್ತಿ ಸೂಲಿಬೆಲೆ ಅಲ್ಲಾ ಯಾರೇ ಈ ರೀತಿ ಹೇಳಿಕೆ ಕೊಟ್ಟರೂ ಅವರ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

ಹುಕ್ಕಾಬಾರ್‌ ನಿಷೇಧ:

ಹುಕ್ಕಾಬಾರ್ ಗಳಲ್ಲಿ ಡ್ರಗ್ ಸಪ್ಲೈ ಮಾಡ್ತಾರೆ ಎಂಬುದು ಅನೇಕ ಕಡೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹುಕ್ಕಾಬಾರ್ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹುಕ್ಕಾಬಾರ್ ಗಳನ್ನು ನಿಷೇಧ ಮಾಡಿತ್ತು. ಇದು ನಮ್ಮ ಸರ್ಕಾರದ ಉತ್ತಮ ನಿರ್ಧಾರದಲ್ಲಿ ಒಂದಾಗಿದೆ ಎಂದರು.

ವೈಯಕ್ತಿಕ ವಿಚಾರ:

ಭದ್ರತಾ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಅವರ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ ವಿಚಾರವಾಗಿ ಮಾತನಾಡಿ ಅದು ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಪ್ರತ್ಯೇಕ ಕಾನೂನು ಮಾಡಲಿ : ದೇಶ ವಿಭಜನೆ ಮಾಡುವ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಪ್ರತ್ಯೇಕ ಕಾನೂನು ಮಾಡುವಂತೆ ಪ್ರಧಾನಿ ಮೋದಿಯರಿಗೆ ಹೇಳಲಿ, ಕಾನೂನು ಮೀರಿ ವರ್ತಿಸಲು ಯಾರಿಗೂ ಆಗೋದಿಲ್ಲ ಎಂದರು.