ಸಾರಾಂಶ
ನೆಚ್ಚಿನ ನಟನ ಹುಟ್ಟುಹಬ್ಬಆಚರಿಸಲು ಲಿಂಗಸುಗೂರಿನ ಭದ್ರಿ ಎಂಬುವವರಿಂದ 500 ಕಿ.ಮೀ. ಕಾಲ್ನಡಿಗೆ. ಗುರುಗುಂಟಾ ಅಮರೇಶ್ವರ ದೇವರಿಗೆ ರುದ್ರಾಭಿಷೇಕ ಕೈಗೊಂಡು ಪಾಡಯಾತ್ರೆ ಶುರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಅವರ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗುರುಗುಂಟಾ ಅಮರೇಶ್ವರ ದೇವರಿಗೆ ರುದ್ರಾಭಿಷೇಕ ಕೈಗೊಂಡು ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾನೆ.ತಾಲೂಕಿನ ಗೌಡೂರು ಗ್ರಾಮದ ಭದ್ರಿ (ವೀರಭದ್ರ), ಬಹುತೇಕ ವಿದ್ಯಾಭ್ಯಾಸ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪೂರೈಸಿದ್ದಾರೆ. ಅಲ್ಲದೇ ಅಲ್ಲಿಯೇ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೆ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಗನಮ ಸೆಳೆದಿರುವ ಭದ್ರಿ ಈಗ ದರ್ಶನ್ ಹುಟ್ಟುದ ಹಬ್ಬದ ನಿಮಿತ್ತ 500 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಸುಕ್ಷೇತ್ರ ಅಮರೇಶ್ವರದಿಂದ ಬೆಂಗಳೂರಿಗೆ ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡಿದ್ದಾನೆ.ಇದೇ 16ರಂದು ದರ್ಶನ್ ಹುಟ್ಟುಹಬ್ಬವಿದೆ. ಹುಟ್ಟುಹಬ್ಬದ ದಿನದ ಒಳಗೆ ಬೆಂಗಳೂರಿಗೆ ತೆರಳು ಸಾಧ್ಯವಿಲ್ಲ ಆದರೂ ಪ್ರಯತ್ನ ಮಾಡುವೆ. ದರ್ಶನ ಅಭಿಮಾನಿಯಾಗಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಉನ್ನತ ಸಿನಿಮಾಗಳು ದೊರೆಯುವ ಶಕ್ತಿ ನೀಡಲಿ ಎಂದು ಪಾದಯಾತ್ರೆ ಕೈಗೊಂಡಿರುವುದಾಗಿ ಹೇಳಿದ್ದಾನೆ.
ಉತ್ತರ ಕರ್ನಾಟಕದಿಂದ ದರ್ಶನ ಅಭಿಮಾನಿಯೊಬ್ಬ ಪಾದಯಾತ್ರೆ ಕೈಗೊಂಡಿರುವುದು ವಿಶಿಷ್ಟವಾಗಿದೆ. ಸುಕ್ಷೇತ್ರ ಗುರುಗುಂಟಾ ಅಮರೇಶ್ವರದಿಂದ ಲಿಂಗಸುಗೂರು, ಸಿಂಧನೂರು, ಬಳ್ಳಾರಿ, ಚಳ್ಳಕೇರಿ, ತುಮಕೂರು ಮೂಲಕ ಬೆಂಗಳೂರು ತಲುಪಲಿದ್ದಾನೆ. ಕಾಟೇರಾ ಸಿನಿಮಾದ ಸಕ್ಸಸ್ ಹಾಗೂ ಕೊರೋನಾ ಸಮಯದಲ್ಲಿ ದರ್ಶನ್ ಕೈಗೊಂಡ ಕಾಳಜಿ ಕೆಲಸಗಳು ನನಗೆ ಪ್ರೇರಣೆಯಾಗಿದೆ. ಸಿನಿಮಾ ಕ್ಷೇತ್ರದಲ್ಲಿ ನಕ್ಷತ್ರದಂತೆ ದರ್ಶನ್ ಅವರ ವರ್ಚಸ್ಸು ಬೆಳಗಬೇಕೆಂದು ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿರುವೆ.- ಭದ್ರಿ (ವೀರಭದ್ರ), ಪಾದಯಾತ್ರಿ, ಲಿಂಗಸುಗೂರು.