ಸಾರಾಂಶ
ಕಾಂತಾರ ಪಾರ್ಟ್-೨ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಶೂಟಿಂಗ್ ಗೆ ಕೊಂಚ ಬ್ರೇಕ್ ಹಾಕಿ ದೇಗುಲ ಯಾತ್ರೆ ಕೈಗೊಂಡಿದ್ದಾರೆ. ರಿಷಬ್ ಪತ್ನಿ, ತಾಯಿ ಹಾಗೂ ಮಕ್ಕಳ ಸಮೇತ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿದ್ದರು.
ಕೊಪ್ಪ: ಕಾಂತಾರ ಪಾರ್ಟ್-೨ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಶೂಟಿಂಗ್ ಗೆ ಕೊಂಚ ಬ್ರೇಕ್ ಹಾಕಿ ದೇಗುಲ ಯಾತ್ರೆ ಕೈಗೊಂಡಿದ್ದಾರೆ. ರಿಷಬ್ ಪತ್ನಿ, ತಾಯಿ ಹಾಗೂ ಮಕ್ಕಳ ಸಮೇತ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಿಷಭ್ ಶೆಟ್ಟಿ ದಂಪತಿ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದರು. ಅಲ್ಲದೇ ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ತುಂಗಾ ನದಿ ತಟದಲ್ಲಿರುವ ಈ ದೇಗುಲ ಭಾರೀ ಐತಿಹ್ಯ ಹೊಂದಿದ್ದು ನಿತ್ಯ ಸಹಸ್ರರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಅಗಮಿಸುತ್ತಾರೆ. ಇನ್ನು ಮಠದ ಆವರಣದ ಶ್ರೀ ಇಷ್ಟಸಿದ್ದಿ ಭಕ್ತಾಂಜನೇಯ ಸ್ವಾಮಿಗೆ ಬಳಿ ಅಭಿಮಾನಿಗಳು ರಿಷಭ್ ಜೊತೆ ಫೋಟೋಗಾಗಿ ಮುಗಿಬಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ರಿಷಭ್ ಫೋಟೋಗೆ ಪೋಸ್ ಕೊಟ್ಟರು.