ನಟ ಡಾ.ಪುನೀತ್ ಯುವಕರಿಗೆ ಸ್ಫೂರ್ತಿ

| Published : Mar 18 2025, 12:36 AM IST

ಸಾರಾಂಶ

ದಾವಣಗೆರೆ: ಇಲ್ಲಿಯ ಕೆಟಿಜೆ ನಗರದ ಡಾ.ರಾಜಕುಮಾರ ಅಭಿಮಾನಿಗಳ ಸಂಘ ವತಿಯಿಂದ ಸೋಮವಾರ ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ಪುನೀತ್ ರಾಜಕುಮಾರ್ ಹಾಗೂ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ 62ನೇ ಜನ್ಮ ದಿನ ಆಚರಿಸಲಾಯಿತು.

ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಚೈತನ್ಯದ ಬೆಳಕು ಮೂಡಿಸಿದ ಪುನಿತ್ ರಾಜಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಎಂಥಹ ಪಾತ್ರವಿದ್ದರೂ ಸಹಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಯುವಕರಿಗೆ ಸ್ಪೂರ್ತಿಯಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಲತಿಕಾ ದಿನೇಶ ಶೆಟ್ಟಿ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಕೇರಂ ಗಣೇಶ್, ನಾಗೇಂದ್ರ ಬಂಡೀಕಾರ್, ಯೋಗೇಶ್, ಚೇತನ್‌ಕುಮಾರ್, ಶೇಖರಪ್ಪ, ಗೋಣಪ್ಪ, ಎಸ್.ಮಾನು, ನಾಗರಾಜ್ , ಶಾಂತಕುಮಾರ್, ಶ್ರೀನಿವಾಸ್ ಕಲ್ಪತರು, ಲೋಕೇಶ್, ಕೆ.ಎಸ್.ವಿಜಯಕುಮಾರ್, ಆನಂದ್, ಗುರು, ಚಂದ್ರು, ರಿಯಾಜ್ (ಗಿಡ್ಡಣ್ಣ), ರುದ್ರಮುನಿ, ಅಕ್ಬರ್ ಬಾಷಾ, ಮಂಜುನಾಥ್ ಕ್ಯಾನ್‌ಪಿನ್ ಹಾಗೂ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.