ಸಾರಾಂಶ
ರಾಮನಗರ ಜಿಲ್ಲೆ ಚನ್ನಪಟ್ಟಣ ಮೂಲದವರಾದ ನಂದಿನಿ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದು ವೃತ್ತಿ ನಿರತರಾಗದೆ ಪ್ರವೃತ್ತಿಯಾದ ನಟನೆಯಲ್ಲಿ ತೊಡಗಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಯಶಸ್ವಿ ನಟಿ ಎನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘದ ವತಿಯಿಂದ ಸೆ.೧೪ರಂದು ಸಂಜೆ ೫ ಗಂಟೆಗೆ ಎಂ.ರವಿಪ್ರಸಾದ್ ರಂಗಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯನವರು ಖ್ಯಾತನಟಿ ನಂದಿನಿ ಗುರು ಅವರಿಗೆ ರಂಗ ಪ್ರಶಸ್ತಿ ನೀಡಿ ಗೌರವಿಸುವರು. ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ವಹಿಸುವರು. ಮುಖ್ಯ ಅತಿಥಿಗಳಾಗಿ ರಂಗಾಯಣ ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿ.ಪಿ.ಒ. ಚಂದ್ರು ಭಾಗವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಉಪಸ್ಥಿತರಿರುವರು ಎಂದು ಹೇಳಿದರು.ನಂದಿನಿ ಗುರು ಪರಿಚಯ:
ರಾಮನಗರ ಜಿಲ್ಲೆ ಚನ್ನಪಟ್ಟಣ ಮೂಲದವರಾದ ನಂದಿನಿ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದು ವೃತ್ತಿ ನಿರತರಾಗದೆ ಪ್ರವೃತ್ತಿಯಾದ ನಟನೆಯಲ್ಲಿ ತೊಡಗಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಯಶಸ್ವಿ ನಟಿ ಎನಿಸಿದ್ದಾರೆ. ಇತಿಹಾಸ, ಬೆಳದಿಂಗಳಾಗಿ ಬಾ, ಅರ್ಧಸತ್ಯ, ಮುಕ್ತ ಮುಕ್ತ, ಕ್ಷಣ ಕ್ಷಣ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಷ್ಟೇ ಅಲ್ಲದೇ, ಪ್ರೇಮ ಪ್ರೇಮ ಪ್ರೇಮ, ಹೃದಯ ಹೃದಯ, ತಾಯಿ, ಜನಪದ ಚಿತ್ರಗಳಲ್ಲೂ ನಟಿಸಿದ್ದಾರೆ. ಮಂಥನ ಧಾರಾವಾಹಿ ಅಭಿನನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ನಂದಿನಿ ಅವರಿಗೆ ನೀಡಲಾಗುತ್ತಿರುವ ರಂಗಪ್ರಶಸ್ತಿಯು ೧೦ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.