ದಾವಣಗೆರೆ ಚೆನ್ನಯ್ ಶಾಪಿಂಗ್ ಮಾಲ್‌ಗೆ ನಟಿ ರಚಿತಾ ರಾಮ್ ಚಾಲನೆ

| Published : Mar 02 2025, 01:18 AM IST

ಸಾರಾಂಶ

ಚೆನ್ನಯ್ ಶಾಪಿಂಗ್ ಮಾಲ್‌ ಅನ್ನು ನಗರದಲ್ಲಿ ಶನಿವಾರ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ರಚಿತಾ ರಾಮ್ ಉದ್ಘಾಟಿಸಿದರು.

ದಾವಣಗೆರೆ ಜನರ ಪ್ರೀತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು । ದುಗ್ಗಮ್ಮ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಚೆನ್ನಯ್ ಶಾಪಿಂಗ್ ಮಾಲ್‌ ಅನ್ನು ನಗರದಲ್ಲಿ ಶನಿವಾರ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ರಚಿತಾ ರಾಮ್ ಉದ್ಘಾಟಿಸಿದರು.

ನಗರದ ಹಳೆ ಪಿಬಿ ರಸ್ತೆಯ ಅರುಣ ಚಿತ್ರ ಮಂದಿರ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಚೆನ್ನಯ್ ಶಾಪಿಂಗ್ ಮಾಲ್‌ ಅನ್ನು ಉದ್ಘಾಟಿಸಿ, ಹಲವಾರು ಕಾರ್ಯಕ್ರಮಗಳಿಗೆ ಇಲ್ಲಿಗೆ ಬಂದಿದ್ದೇನೆ. ದಾವಣಗೆರೆ ಜನರನ್ನು ನೋಡಲು ನನಗೆ ತುಂಬಾ ಖುಷಿಯಾಗಿದ್ದು, ನಾನು ಯಾವಾಗ ಬಂದರೂ ಇಷ್ಟೊಂದು ಪ್ರೀತಿ ತೋರಿಸುತ್ತಾರೆ. ಇವರ ಪ್ರೀತಿಗೆ ನಾನೆಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದ ಹೇಳಿದರು.

ದಾವಣಗೆರೆ ಚೆನ್ನಯ್ ಶಾಪಿಂಗ್ ಮಾಲ್‌ನಲ್ಲಿ ವಿವಿಧ ರೀತಿಯ ಸೀರೆ, ಬಟ್ಟೆಗಳು ಕೇವಲ 99 ರು.ನಿಂದ ಆರಂಭವಾಗುತ್ತವೆ. ಇಲ್ಲಿ ಅದ್ಭುತ ಆಯ್ಕೆಯ ಬಟ್ಟೆ ಇವೆ. ನನಗೋಸ್ಕರ ಒಂದು ಸಣ್ಣದಾದರೂ ಶಾಪಿಂಗ್ ಮಾಡಿ. ಇಂದು ಮಾತ್ರ ಅಲ್ಲ, ಪ್ರತಿದಿನ ಇಲ್ಲಿ ಆಫರ್ ಇರುತ್ತವೆ. ಆರಾಮವಾಗಿ ಎಲ್ಲರೂ ಇಲ್ಲಿ ಬಂದು ಶಾಪಿಂಗ್ ಮಾಡಿರಿ. ಎಲ್ಲ ವರ್ಗದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪುರುಷರು, ಮಹಿಳೆಯರು, ಮಕ್ಕಳಿಗೆ ಬೇಕಾದ ಬಟ್ಟೆಗಳು ಇಲ್ಲಿ ಸಿಗುತ್ತವೆ ಎಂದು ಹೇಳಿದರು.

ಕೇವಲ ದಾವಣಗೆರೆಯಷ್ಟೇ ಅಲ್ಲ ಸುತ್ತಮುತ್ತಲಿನ ಜಿಲ್ಲೆಗಳ ಜನರು ಇಲ್ಲಿ ಶಾಪಿಂಗ್ ಮಾಡಿ. ನಗರ ದೇವತೆ ತಾಯಿ ಶ್ರೀ ದುಗ್ಗಮ್ಮನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ, ಆ ತಾಯಿ ಎಲ್ಲರಿಗೂ ಒಳ್ಳೆಯ ಆರೋಗ್ಯ, ಸುಖ, ಶಾಂತಿ, ಆರೋಗ್ಯ, ಸಂಪತ್ತನ್ನು ಕೊಟ್ಟು ಖುಷಿ, ನೆಮ್ಮದಿ ನೀಡಲಿ ಎಂಬುದಾಗಿ ತಾಯಿ ಶ್ರೀ ದುರ್ಗಾಂಬಿಕಾ ದೇವಿಗೆ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ನಮ್ಮ ಜಿ.ಎಂ.ಹಾಲ್‌ನಲ್ಲಿಂದು ಚೆನ್ನಯ್ ಶಾಪಿಂಗ್ ಮಾಲ್ ಪ್ರಾರಂಭವಾಗಿದೆ. ಚೆನ್ನಯ್ ಶಾಪಿಂಗ್ ಮಾಲ್ ಹವಾ ನಿಯಂತ್ರಿತ, ಅತ್ಯಂತ ಆಧುನಿಕ, ಸುಸಜ್ಜಿತವಾಗಿ ಡೆಕೋರೇಷನ್, ಇಂಟೀರಿಯರ್ಸ್ ಮಾಡಿದ್ದಾರೆ. ಚೆನ್ನೈ, ಮುಂಬೈ, ಬೆಂಗಳೂರಿನ ಮಾಲ್‌ಗಳಿಗಿಂತ ಇದು ಉತ್ತಮವಾಗಿದೆ. ಈ ಶಾಪಿಂಗ್ ಮಾಲ್‌ನಲ್ಲಿ ಅತಿ ಕಡಿಮೆ ಹಾಗೂ ಎಲ್ಲ ವರ್ಗದ ಜನರಿಗೆ ಕೈಗೆಟುಕುವ ಹಾಗೂ ಬೆಲೆ ಬಾಳುವ ಬಟ್ಟೆಗಳು ಸಿಗಲಿವೆ ಎಂದು ಶ್ಲಾಘಿಸಿದರು.

ಈಗಾಗಲೇ ಚೆನ್ನಯ್ ಗ್ರೂಪ್ ಹಲವಾರು ವರ್ಷಗಳಿಂದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಅನೇಕ ಶೋ ರೂಂ ನಡೆಸುತ್ತಿದ್ದಾರೆ. ಇಲ್ಲಿ 99 ರು.ನಿಂದ 2 ಲಕ್ಷ ರು.ವರೆಗಿನ ಮೆಟಿರಿಯಲ್ ಇಟ್ಟಿದ್ದಾರೆ. ದಾವಣಗೆರೆ ಸುತ್ತಲಿನ ಜನತೆ ಮಾಲ್‌ಗೆ ಬಂದು ಖರೀದಿಸುವಂತಾಗಲಿ. ಚೆನ್ನಯ್ ಶಾಪಿಂಗ್ ಮಾಲ್ ಉತ್ತಮವಾಗಿದೆ. ನಿಮ್ಮ ಮಾಧ್ಯಮಗಳ ಮೂಲಕ ಪ್ರಚಾರವಾದರೆ ಸಂಸ್ಥೆ ಬೆಳೆಯುತ್ತದೆ ಎಂದು ಹಾರೈಸಿದರು.

ಸಂಸ್ಥೆಯ ಮಲ್ಲಿಕಾರ್ಜುನ ಮಾತನಾಡಿ, ಕರ್ನಾಟಕದ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ 42 ಚದುರ ಅಳತೆಯ ಕಟ್ಟಡದಲ್ಲಿ ಚೆನ್ನಯ್ ಶಾಪಿಂಗ್ ಮಾಲ್ ಇಂದು ಆರಂಭಗೊಂಡಿದ್ದು, 84 ರೂಪಾಯಿಗಳಿಂದ 1.5 ಲಕ್ಷದ ವರೆಗೆ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ವಿವಿಧೆಡೆ ನಮ್ಮ ಶಾಖೆಗಳನ್ನು ಆರಂಬಿಸಲು ವೀಕ್ಷಣೆ ಮಾಡಲಾಗುತ್ತಿದೆ. ಇದೇ 8 ರಂದು ರಾಯಚೂರಿನಲ್ಲಿ ನಂತರ ಗುಲ್ಬರ್ಗ, ಬಳ್ಳಾರಿ ಸೇರಿ ಸುಮಾರು 10 ಶೋರೂಂಗಳನ್ನು ಮಾಡುವ ಯೋಜನೆ ಇದೆ ಎಂದರು.

ದಾವಣಗೆರೆ ವಿಭಾಗದ ವ್ಯವಸ್ಥಾಪಕ ಅನಂತ ರೆಡ್ಡಿ, ಸಂಸ್ಥೆಯ ಮಾಲೀಕರಾದ ಮರಿ ವೆಂಕಟರೆಡ್ಡಿ, ಮರಿ ಜನಾರ್ಧನ ರೆಡ್ಡಿ , ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ಯೋಗೇಶ್ವರ, ಮುರುಗೇಶ ಆರಾಧ್ಯ ಇತರರು ಇದ್ದರು.