ಕೆಸಿಸಿಐಗೆ ಆದಪ್ಪಗೌಡರ ನೂತನ ಅಧ್ಯಕ್ಷ

| Published : Sep 30 2025, 12:00 AM IST

ಸಾರಾಂಶ

ಸೋಮವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಈ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ.

ಹುಬ್ಬಳ್ಳಿ:

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಗದಗಿನ ಜಿ.ಕೆ. ಆದಪ್ಪಗೌಡರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ಪ್ರವೀಣ ಅಗಡಿ, ಎಸ್.ಜಿ. ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿಯಾಗಿ ಉದಯ ರೇವಣಕರ, ಜಂಟಿ ಗೌರವ ಕಾರ್ಯದರ್ಶಿಯಾಗಿ ಪ್ರಕಾಶ ಶೃಂಗೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಆಡಳಿತ ಮಂಡಳಿ ಸದಸ್ಯರಾಗಿ ಹು-ಧಾ ಮಹಾನಗರ ಪಾಲಿಕೆ ಕ್ಷೇತ್ರದಿಂದ ಕಾಂತಿಲಾಲ ಪುರೋಹಿತ, ಅಶೋಕ ಎನ್. ಲದವಾ, ಗಂಗನಗೌಡ ಎಸ್. ಪಾಟೀಲ, ಗಿರಿಧರಲಾಲ ಬಾಫ್ನಾ, ಶಶಿಧರ ಶೆಟ್ಟರ , ನೀಲಕಂಠಪ್ಪ ಎಸ್. ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟಿ, ಮಲ್ಲಿಕಾರ್ಜುನ ಎ.ಕಂಬಳ್ಯಾಳ ಆಯ್ಕೆಯಾಗಿದ್ದಾರೆ.

ಇನ್ನು ಪಾಲಿಕೆ ಹೊರತುಪಡಿಸಿ ಗದಗಿನ ಮುರುಘರಾಜೇಂದ್ರ ಬಿ.ಬಡ್ನಿ,, ಹೊನ್ನಾವರದ ಮಂಜುನಾಥ ಹೆಗಡೆ, ಬೆಳಗಾವಿಯ ಬಸವರಾಜ ಎಸ್. ಜವಳಿ, ಬ್ಯಾಡಗಿಯ ರಾಜಶೇಖರ ಎಸ್. ಮಾಗನೂರ, ಹೊಸಪೇಟೆಯ ಗುರುಸಿದ್ದೇಶ ಎಚ್. ಕೋತಂಬ್ರಿ, ಬಾಗಲಕೋಟೆಯ ರವಿ ಬಿ. ಕುಮತಗಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಎಲ್ಲರನ್ನು ಸೋಮವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಈ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ. ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದ ಶಂಕರಣ್ಣ ಮುನವಳ್ಳಿ, ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸಕರ. ಇದರಿಂದ ಸದಸ್ಯರಲ್ಲಿ ವೈಮನಸು ಬರುವುದಿಲ್ಲ. . ಈ ಪರಂಪರೆ ಹೀಗೆ ಮುಂದುವರಿಯಲಿ ಎಂದರು.

ನೂತನ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಮಾತನಾಡಿ, ನನ್ನ ಈ ಆಯ್ಕೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಈ ವೇಳೆ ಮಾಜಿ ಅಧ್ಯಕ್ಷರಾದ ಎಂ.ಸಿ. ಹಿರೇಮಠ, ವ್ಹಿ.ಪಿ. ಲಿಂಗನಗೌಡರ, ರಮೇಶ ಎ. ಪಾಟೀಲ, ಹಾಗೂ ವಿನಯ ಜೆ. ಜವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.