ಸಾರಾಂಶ
ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿದ್ದು, ಪ್ರತಿ ಬೂತ್‌ಮಟ್ಟದಲ್ಲಿ ಬಿಜೆಪಿಗೆ ಕನಿಷ್ಠ 300ಕ್ಕೂ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ಗೋಕಾಕ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿದ್ದು, ಪ್ರತಿ ಬೂತ್‌ಮಟ್ಟದಲ್ಲಿ ಬಿಜೆಪಿಗೆ ಕನಿಷ್ಠ 300ಕ್ಕೂ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ಗೋಕಾಕ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.ನಗರ ಎಂಜೆ ಗಾರ್ಡನ್ ಸಭಾ ಭವನದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಚಾರ ಸಮಾಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಮೂಲಕ ಸದಸ್ಯರನ್ನಾಗಿ ಮಾಡಲು ಕಾರ್ಯಪ್ರವೃತ್ತರಾಗಬೇಕು. ಪ್ರಧಾನಿ ಮೋದಿಯವರ ಜನ್ಮದಿನವಾದ ಇಂದು ನಾವೆಲ್ಲರು ಸಂಕಲ್ಪ ಮಾಡುವ ಮೂಲಕ ಗೋಕಾಕ ಮತಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯರನ್ನು ಬಿಜೆಪಿ ಪಕ್ಷದಲ್ಲಿ ದಾಖಲಿಸುವ ಮೂಲಕ ಶಾಸಕ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸೋಣ ಎಂದು ಕೋರಿದರು.ವೇದಿಕೆಯ ಮೇಲೆ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಕೊಣ್ಣುರ ಪುರಸಭೆ ಅಧ್ಯಕ್ಷ ವಿನೋದ ಕರನಿಂಗ, ಬಿಜೆಪಿ ಮುಖಂಡರಾದ ಸುರೇಶ ಸನದಿ, ಮಲ್ಲಿಕಾರ್ಜುನ ಕೊಲಿನವರ, ಪುಂಡಲೀಕ ವಣ್ಣೂರ, ಪರಶುರಾಮ ಗೋಡಿ, ಜಯಾನಂದ ಹುಣಚ್ಯಾಳಿ, ಬಾಳೇಶ ಗಿಡ್ಡನವರ ಇದ್ದರು.