ಯಲ್ಲಮ್ಮದೇವಿ, ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆಗೆ ಹೆಚ್ಚುವರಿ ಬಸ್‌

| Published : Jan 06 2024, 02:00 AM IST

ಸಾರಾಂಶ

ಯಲ್ಲಮ್ಮಾದೇವಿ ಜಾತ್ರೆ ಜ.6ರಿಂದ 12ರವರೆಗೆ ಹಾಗೂ ಮಲ್ಲಿಕಾರ್ಜುನ ಜಾತ್ರೆ ಜ.13ರಿಂದ 16 ರವರೆಗೆ ಜರುಗಲಿದೆ. ಜಾತ್ರೆಗೆ ಅಥಣಿ, ತೆಲಸಂಗ, ಕಾಗವಾಡ, ಸಾವಳಗಿ, ಬಬಲೇಶ್ವರ, ಮಿರಜ, ಸಾಂಗ್ಲಿ, ಜತ್ತ ಮುಂತಾದ ಸ್ಥಳಗಳಿಂದ ಚಿಕ್ಕೋಡಿ ವಿಭಾಗದ ಅಥಣಿ ಘಟಕದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಕೊಕಟನೂರದಿಂದ ನೇರವಾಗಿ ಪುಣೆ, ಮುಂಬೈ, ಬೋರಿವೆಲಿ, ಬಾರಾಮತಿವರೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು.

ಚಿಕ್ಕೋಡಿ: ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿ ಹಾಗೂ ಹುಕ್ಕೇರಿ ತಾಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ದೇವರ ಜಾತ್ರೆಗಳಿಗೆ ವಿಶೇಷ ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌.ಮುಂಜಿ ತಿಳಿಸಿದ್ದಾರೆ. ಯಲ್ಲಮ್ಮಾದೇವಿ ಜಾತ್ರೆ ಜ.6ರಿಂದ 12ರವರೆಗೆ ಹಾಗೂ ಮಲ್ಲಿಕಾರ್ಜುನ ಜಾತ್ರೆ ಜ.13ರಿಂದ 16 ರವರೆಗೆ ಜರುಗಲಿದೆ. ಜಾತ್ರೆಗೆ ಅಥಣಿ, ತೆಲಸಂಗ, ಕಾಗವಾಡ, ಸಾವಳಗಿ, ಬಬಲೇಶ್ವರ, ಮಿರಜ, ಸಾಂಗ್ಲಿ, ಜತ್ತ ಮುಂತಾದ ಸ್ಥಳಗಳಿಂದ ಚಿಕ್ಕೋಡಿ ವಿಭಾಗದ ಅಥಣಿ ಘಟಕದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಕೊಕಟನೂರದಿಂದ ನೇರವಾಗಿ ಪುಣೆ, ಮುಂಬೈ, ಬೋರಿವೆಲಿ, ಬಾರಾಮತಿವರೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು.

ಅಥಣಿ ಬಸ್ ನಿಲ್ದಾಣ, ಮಿರಜ ಬಿಂದು, ಹಾಗೂ ಕೊಕಟನೂರ ಜಾತ್ರಾ ಕೇಂದ್ರದಲ್ಲಿ ಪ್ರತ್ಯೇಕ ಜಾತ್ರಾ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಯಾತ್ರಿಕರು ವಿಶೇಷ ಬಸ್ಸಗಳ ಸದುಪಯೋಗ ಪಡೆಯುವಂತೆ ಕೋರಲಾಗಿದೆ. ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆಗೆ ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಹಾಗೂ ಶ್ರೀಕ್ಷೇತ್ರ ಅಮ್ಮಣಗಿ ಜಾತ್ರಾ ಕೇಂದ್ರದಲ್ಲಿ ಪ್ರತ್ಯೇಕ ಜಾತ್ರಾ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿನಿಯೋಜಿಸಿ ಪ್ರಯಾಣಿಕರಿಗೆ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.