ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಡ್ರೀಮ್ ಸಿಟಿಯಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ನೀಡಿ ಇಲ್ಲಿನ 54ಕ್ಕೂ ಹೆಚ್ಚು ಬಾಲಕಿಯರೊಂದಿಗೆ ಒಂದು ಗಂಟೆಗೂ ಹೆಚ್ಚುಕಾಲ ಮಕ್ಕಳು ಮತ್ತು ಅಧಿಕಾರಿಗಳ ಜನತೆ ಮಾತುಕತೆ ನಡೆಸಿದರು.ನಗರದ ಬಿಬಿ ರಸ್ತೆಯಲ್ಲಿರುವ ಬಾಲಕಿಯ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ್ದ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ನೆಲೆಸಿರುವ ಮೇಘಾಲಯದ ಮಕ್ಕಳೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಈ ವೇಳೆ, ಮಕ್ಕಳು ನಮ್ಮನ್ನು ಆದಷ್ಟು ಬೇಗ ನಮ್ಮ ರಾಜ್ಯಕ್ಕೆ ಕಳಿಸಿಕೊಡಿ ಎಂದು ಬೇಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು 8ರಿಂದ 10 ದಿನಗಳ ಒಳಗೆ ನಿಮ್ಮನ್ನು ನಿಮ್ಮ ರಾಜ್ಯಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.ಈ ವೇಳೆ ಬಾಲಕಿಯರ ಬಾಲಮಂದಿರಲ್ಲಿ ಮಕ್ಕಳಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳು ಇವೆಯೇ ಇಲ್ಲವೆ ಎಂಬುದರ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಅಡುಗೆ ಮನೆಗೆ ತೆರಳಿದ ಅಪರ ಜಿಲ್ಲಾಧಿಕಾರಿಗಳು ಬಾಲಮಂದಿರದ ಮಕ್ಕಳಿಗಾಗಿ ಸಿದ್ಧಪಡಿಸಿರುವ ಆಹಾರವನ್ನು ತಾವು ಸವಿಯುವ ಮೂಲಕ ಗುಣಮಟ್ಟದ ಪರೀಕ್ಷೆ ನಡೆಸಿದರು. ಬಾಲಮಮಂದಿರದ ಮೇಲ್ವಿಚಾರಕರ ಸಮ್ಮುಖದಲ್ಲಿ ಆಹಾರ ಪದಾರ್ಥ ಇತ್ಯಾದಿ ದಿನಸಿ ಸಾಮಾನುಗಳನ್ನಿಟ್ಟಿರುವ ಕೊಠಡಿಗೆ ತೆರಳಿ ಅಲ್ಲಿ ದಾಸ್ತಾನು ಪರಿಶೀಲನೆ ಕೂಡ ನಡೆಸಿದರು.ಅಪರ ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಇಲ್ಲಿ ನೆಲೆಸಿರುವ 54 ಮಕ್ಕಳ ಪೈಕಿ ಒಂದು ಮಗುವಿನ ಹುಟ್ಟಿದ ದಿನದ ಇವತ್ತಿದೆ ಎಂಬ ಮಾಹಿತಿ ಪಡೆದ ಕೂಡಲೇ ಹಣ ನೀಡಿ ಕೇಕ್ ತರಿಸಿ ಮಕ್ಕಳ ಸಮ್ಮುಖದಲ್ಲಿಯೇ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಶುಭಾಶಯ ಕೋರುವ ಮೂಲಕ ಮಕ್ಕಳು ಸಂತೋಷಪಡುವಂತೆ ಮಾಡಿದರು. ಅಪರ ಜಿಲ್ಲಾಧಿಕಾರಿಗಳ ಈ ನಡೆ ಬಾಲಕಿಯರ ಬಾಲಮಂದಿರದ ಅಧಿಕಾರಿಗಳು ಮತ್ತು ಮಕ್ಕಳ ಮೊಗದಲ್ಲಿ ಸಂತಸ ತಂದಿತು.ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ಬಾಲಕಿಯರ ಬಾಲಮಂದಿರದ ನಿರ್ವಹಣೆ ಚೆನ್ನಾಗಿದೆ. ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದ್ದು, ಸ್ವಚ್ಛತೆ ಮತ್ತು ಭದ್ರತೆಗೆ ಆಧ್ಯತೆ ನೀಡಲಾಗಿದೆ. ನನ್ನ ಭೇಟಿಯ ಅವಧಿಯಲ್ಲಿ ಎಲ್ಲವೂ ತೃಪ್ತಿಕರವಾಗಿರುವುದು ಕಂಡಿದೆ. ಯಾವ ಕೊರತೆಗಳು ನನ್ನ ಗಮನಕ್ಕೆ ಬಂದಿಲ್ಲ, ಮಕ್ಕಳೂ ಹೇಳಿಲ್ಲ ಎಂದರು.ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್.ಬಿ.,ಬಾಲನ್ಯಾಯ ಸಮಿತಿ ಸದಸ್ಯೆ ಎನ್.ಶೋಭಮ್ಮ, ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಸಂತೋಷ್ ಬಾಬು.ಜಿ.ವಿ., ನಂದಿ ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ.ಹೇಮಂತ್ ಕುಮಾರ್,ಜಿ., ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮರಾಜೇ ಅರಸ್, ಸೌಂದರ್ಯ ಗ್ರಾಮೀಣ ಮತ್ತು ಪಟ್ಟನ ಅಭಿವೃದ್ದಿ ಸಂಸ್ಥೆಯ ಮುಖ್ಯಸ್ಥೆ ಡಾ.ಎಂ.ವಿಜಯಮ್ಮ, ಮೇಲ್ವಚಾರಕಿ ಗಾಯಿತ್ರಿ ಮತ್ತಿತರರು ಇದ್ದರು.
ಸಿಕೆಬಿ-1 ನಗರದ ಬಿಬಿ ರಸ್ತೆಯಲ್ಲಿರುವ ಬಾಲಕಿಯ ಬಾಲಮಂದಿರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.