ಶಾಂತಿಯುತ ಚುನಾವಣೆಗೆ ಪೂರಕ ಸಿದ್ಧತೆ

| Published : Apr 26 2024, 12:52 AM IST / Updated: Apr 26 2024, 12:53 AM IST

ಸಾರಾಂಶ

ಇಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆಗೆ ಗುರುವಾರ ಪೂರಕ ಸಿದ್ಧತೆಗಳು ನಡೆದವು. ಕ್ಷೇತ್ರದಲ್ಲಿ ಪುರುಷ ಮತದಾರರು 1,03774, ಮಹಿಳಾ ಮತದಾರರು 1,04474 ಹಾಗು ಇತರೆ 5 ಸೇರಿದಂತೆ ಒಟ್ಟು 2,08253 ಮತದಾರರು ಇದ್ದಾರೆ.

1,03774 ಪುರುಷ - 1,04474 ಮಹಿಳಾ ಮತದಾರರು । ಇತರೆ 5 ಸೇರಿ ಒಟ್ಟು 2,08253 ಮತದಾರರು

ಕನ್ನಡಪ್ರಭ ವಾರ್ತೆ, ಕಡೂರು

ಇಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆಗೆ ಗುರುವಾರ ಪೂರಕ ಸಿದ್ಧತೆಗಳು ನಡೆದವು. ಕ್ಷೇತ್ರದಲ್ಲಿ ಪುರುಷ ಮತದಾರರು 1,03774, ಮಹಿಳಾ ಮತದಾರರು 1,04474 ಹಾಗು ಇತರೆ 5 ಸೇರಿದಂತೆ ಒಟ್ಟು 2,08253 ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಭಾರಿಗೆ 3201 ಯುವ ಮತದಾರರು ಮತ ಚಲಾಯಿಸಲಿದ್ದಾರೆ.1144 ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರ-127 ರ ಸಹಾಯಕ ಚುನಾವಣಾಧಿಕಾರಿಯಾದ ಯೋಗಾನಂದ್ ಮತ್ತು ಎಂ.ಪಿ.ಕವಿರಾಜ್ ಅವರ ಉಪಸ್ಥಿತಿಯಲ್ಲಿ ಭದ್ರತಾ ಕೊಠಡಿ ಪರಿಶೀಲನೆ ನಡೆಸಿದರು. ಆನಂತರ ಮತಗಟ್ಟೆ ಅಧಿಕಾರಿಗಳಿಗೆ ಮತ ಯಂತ್ರ ಮತ್ತು ವಿ.ವಿ. ಪ್ಯಾಟ್‌ ಗಳನ್ನು ವಿತರಿಸಲಾಯಿತು. ಆನಂತರ ಮತಗಟ್ಟೆ ಸಿಬ್ಬಂದಿ ಮತಯಂತ್ರ ಮತ್ತಿತರ ಪರಿಕರ ಗಳೊಡನೆ ವಾಹನದಲ್ಲಿ ನಿಯೋಜಿತ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.

253 ಮತಗಟ್ಟೆಗಳಲ್ಲಿ ಕಡೂರು-ಬೀರೂರು ಸೇರಿದಂತೆ ಅತಿಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ 6 ಮತಗಟ್ಟೆ ಗಳನ್ನು ಪಿಂಕ್ ಮತಗಟ್ಟೆಗಳಾಗಿ ಮಾಡಲಾಗಿದೆ. 91 ವೆಲ್‌ನರೆಬಲ್ ಮತಗಟ್ಟೆಗಳಿದ್ದು, ಗ್ರಾಮೀಣ ಭಾಗದ ಬೂತ್ ಗಳ ಸಾಗಾಣಿಕೆಗೆ ಮತ್ತು ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 37 ಸಾರಿಗೆ ಬಸ್, 18 ಜೀಪ್ಗಳನ್ನು ಬಳಸಿಕೊಳ್ಳಲಾಗಿದೆ.

ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಯುತ ಮತದಾನ ಪ್ರಕ್ರಿಯೆ ಪೂರ್ಣ ಗೊಳಿಸಲು ಸನ್ನದ್ಧ ರಾಗಿರುವಂತೆ ಡಿಮಸ್ಟರಿಂಗ್ ಕೇಂದ್ರಕ್ಕೆ ಹಾಸನ ಜಿಲ್ಲಾಧಿಕಾರಿ ಜಿ.ಸತ್ಯಭಾಮ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ವೀಕ್ಷಿಸಿದರು. ಈ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆಸಲು ಆಯೋಗದ ಮಾರ್ಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಡೂರು ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ್ ತಿಳಿಸಿದರು. ತಾ.ಪಂ. ಇಒ ಸಿ.ಆರ್. ಪ್ರವೀಣ್ ಹಾಗು ಚುನಾವಣಾ ಶಾಖಾ ವಿಭಾಗದ ಸಿಬ್ಬಂದಿಗಳು ಇದ್ದರು.

ಬಾಕ್ಸ್ ಸುದ್ದಿಗೆ---

ಪ್ರತಿ ಮತಗಟ್ಟೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಆಯಾ ಭಾಗದ ಮತದಾರರ ಸಂಖ್ಯೆ ಆಧರಿಸಿ ನಿಯೋಜಿಸಲಾಗಿದೆ ಶಾಂತಿಯುತ ಮತದಾನಕ್ಕಾಗಿ ಒರ್ವರು ಡಿವೈಎಸ್ಪಿ,4 ವೃತ್ತ ನಿರೀಕ್ಷಕರು, 29 ಪಿಎಸೈ, ಪೋಲೀಸರು, ಹೋಂ ಗಾರ್ಡ್ ಸೇರಿದಂತೆ 500 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಕೆ.ಎಸ್,ಆರ್,ಪಿ.ತುಕಡಿ ನಿಯೋಜಿಸಲಾಗಿದೆ.--- ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್.25ಕೆಕೆಡಿಯು1.ಕಡೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಲೋಕಸಭಾ ಚುನಾವಣೆಯ ಡಿಮಸ್ಟರಿಂಗ್ ಕೇಂದ್ರಕ್ಕೆ ಹಾಸನ ಜಿಲ್ಲಾಧಿಕಾರಿ ಜಿ.ಸತ್ಯಭಾಮ ಭೇಟಿ ನೀಡಿದರು. ಚುನಾವಣಾಧಿಕಾರಿ ಯೋಗಾನಂದ್, ಎಂ.ಪಿ.ಕವಿರಾಜ್, ಶಿವಪ್ರಕಾಶ್ ಮತ್ತಿತರಿದ್ದರು.

25ಕೆಕೆಡಿಯ1ಎ.ಮತಗಟ್ಟೆಗೆ ಬೂತ್ ಗಳನ್ನು ಕೊಂಡೊಯ್ಯಲು ಸಿದ್ದವಾಗಿರುವ ಬಸ್ಸುಗಳು,