ಸಂಚಾರ ನಿಯಮ ಪಾಲನೆ ಅಗತ್ಯ: ಚಿದಾನಂದ ಸೌದಿ

| Published : Jun 09 2024, 01:35 AM IST

ಸಾರಾಂಶ

ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಅದೊಂದು ಜೀವನದ ವಿಧಾನವಾಗಬೇಕು ಎಂದು ಕಮಲಾಪುರ ಪಿಎಸ್ಐ ಚಿದಾನಂದ ಸೌದಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಅದೊಂದು ಜೀವನದ ವಿಧಾನವಾಗಬೇಕು ಎಂದು ಕಮಲಾಪುರ ಪಿಎಸ್ಐ ಚಿದಾನಂದ ಸೌದಿ ಹೇಳಿದ್ದರು.

ಕಮಲಾಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಕಮಲಾಪುರ ಠಾಣೆ ವೃತ್ತದಿಂದ ಆಯೋಜಿಸಿದ್ದ ವಾಹನ ಸವಾರರ ಸುರಕ್ಷತೆ ನಮ್ಮ ಆದ್ಯತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎನ್ನುವ ಜಾಗೃತಿ ಸಪ್ತಾಹ ಅಭಿಯಾನ ಉದ್ದೇಶಿಸಿ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಕೇವಲ ಪೊಲೀಸರ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಆಧುನಿಕ ತಂತ್ರಜ್ಞಾನಗಳು ಅಳವಡಿಸುವುದರಿಂದ ಅಪಘಾತ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದಾದರೂ ಪೂರ್ತಿ ಪ್ರಮಾಣದಲ್ಲಿ ಕಡಿಮೆಯಾಗಲು ಪ್ರತಿಯೋಬ್ಬರಲ್ಲಿ ಸಂಚಾರ ನಿಯಮ ಪಾಲನೆ ಅವಶ್ಯ ಎಂದರು.

ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಯಮ ಪಾಲಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಚಾರ ನಿಯಮ ಪಾಲಿಸಲು ಮತ್ತು ಸುರಕ್ಷಾ ನಿಯಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳಿಸಲಾಗಿದೆ ಎಂದು ಸಾರ್ವಜನಿಕರಿಗೆ ಪಟ್ಟಣದ ಆಟೋ ಚಾಲಕರಿಗೆ ಅರಿವು ಮೂಡಿಸಿದರು.

ಕ್ರೈಂ ಪಿಎಸ್ಐ ಮಲ್ಲಿಕಾರ್ಜುನ, ಸಿಬ್ಬಂದಿ ರಾಜಶೆಖರ ನಾಶಿ, ಅಶ್ವಿನಿ, ಲಕ್ಷ್ಮಿ, ರಾಮಚಂದ್ರ, ರಾಜಶೆಖರ ರೆಡ್ಡಿ, ಸಿದ್ದು, ಮತ್ತಿತರರಿದ್ದರು.