ಅಂಬೇಡ್ಕರ್‌ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ

| Published : Apr 16 2025, 12:31 AM IST

ಸಾರಾಂಶ

ಪಟ್ಟಣದಲ್ಲಿ ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಸಂಭ್ರಮದಿಂದ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪಟ್ಟಣದಲ್ಲಿ ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಸಂಭ್ರಮದಿಂದ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ಅಡವಿಸಿದ್ದೇಶ್ವರ ಮಠದಿಂದ ಆರಂಭವಾದ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆಗೆ ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ತಾಪಂ ಇಒ ಟಿ.ಆರ್.ಮಲ್ಲಾಡದ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಕೋರ್ಟ್ ಸರ್ಕಲ್‌ನಲ್ಲಿ ಸಮಾವೇಶಗೊಂಡಿತು. ಅಂಬೇಡ್ಕರ್‌ ಉದ್ಯಾನವನ ಬಳಿ ನಡೆದ ಸಮಾರಂಭದಲ್ಲಿ ಸಾಹಿತಿ ಸುಬ್ರಾವ್ ಎಂಟೆತ್ತಿನವರ ಉಪನ್ಯಾಸ ನೀಡಿ, ದೇಶದ ಪ್ರತಿಯೊಬ್ಬರೂ ಅಂಬೇಡ್ಕರರ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಬೇಕಿದೆ. ಒಡೆದು ಹೋಗಿರುವ ಶೋಷಿತ ಸಮುದಾಯಗಳ ಮನಸ್ಸುಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಬೇಕಿದೆ ಎಂದರು.ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್‌ ಮಂಜುಳಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿಪಿಐ ಮಹಾಂತೇಶ ಬಸಾಪೂರ, ಮುಖಂಡರಾದ ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ರಮೇಶ ಹುಂಜಿ, ಬಸವರಾಜ ತಳವಾರ, ಅಕ್ಷಯ ವೀರಮುಖ, ಕೆಂಪಣ್ಣ ಶಿರಹಟ್ಟಿ, ಸುನೀಲ ಬೈರಣ್ಣವರ, ಪ್ರಮೋದ ಕೂಗೆ, ಕೆ.ವೆಂಕಟೇಶ, ಸದಾಶಿವ ಕಾಂಬಳೆ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ, ಪ್ರಕಾಶ ಮೈಲಾಖೆ, ವಿಠ್ಠಲ ಮಾದರ, ರೇಖಾ ಬಂಗಾರಿ, ಕವಿತಾ ಬೇವಿನಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಎಲ್.ಬಿ.ಮಾಲದಾರ, ಎಸ್.ಎಂ.ಶೆಟ್ಟೆನ್ನವರ, ಶ್ರೀಧರ ನಡುಮನಿ, ಶಭಾನಾ ಮುಲ್ಲಾ, ರಾಜಶ್ರೀ ಪಾಟೀಲ, ಎನ್.ಬಿ.ಹೊಳೆಯಾಚೆ, ಎಂ.ಬಿ.ಕೊಟಬಾಗಿ, ಎಂ.ಬಿ.ಕಾಂಬಳೆ, ಎಸ್.ಆರ್.ಮಾಸ್ತಿಹೊಳಿ, ಅರುಣಾ ಇಂಗಳೆ, ಆರ್.ಎ.ಜಕಬಾಳ, ಮತ್ತಿತರರು ಉಪಸ್ಥಿತರಿದ್ದರು.ಶಿಕ್ಷಕ ಎಸ್.ಆರ್.ಗಸ್ತಿ ನಿರೂಪಿಸಿದರು. ಇದೇ ವೇಳೆ ವಿವಿಧ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.