ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಆದಿಉಡುಪಿಯ ಪ್ರಜ್ವಲ್ ನಗರದ ಶ್ರೀ ಅಯ್ಯಪ್ಪ ಭಕ್ತವೃಂದದ ನೂತನ ಭಜನಾ ಮಂದಿರ ಹಾಗೂ ಸಭಾಂಗಣಕ್ಕೆ ಶಿಲಾನ್ಯಾಸ ಮತ್ತು ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವ್ರತಗಳಲ್ಲಿ ಅಯ್ಯಪ್ಪ ಸ್ವಾಮಿ ವ್ರತ ಅತ್ಯಂತ ಕಠಿಣವಾದುದು. ಅದನ್ನು ಕಟ್ಟುನಿಟ್ಟಾಗಿ ಮಾಡಿದವರು, ನಿರಂತರ ಭಜನೆ ಮಾಡಿ ದೇವರೊಲುಮೆಗೆ ಪಾತ್ರರಾದವರು, ಅಪರಾಧ ಕೃತ್ಯಗಳನ್ನು ಎಸಗುವುದು ಬಹಳ ವಿರಳ. ಅಂತಹ ಭಕ್ತರ ಈ ಭಜನಾ ಮಂದಿರ ನಿರ್ಮಾಣಕ್ಕೆ ಭಕ್ತರಿಂದ ಆರ್ಥಿಕ ನೆರವು ಹರಿದು ಬರಲಿ ಎಂದು ಆಶಿಸಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದೈವ, ದೇವತಾರಾಧನೆ, ಭೂತಾರಾಧನೆ, ಧಾರ್ಮಿಕ ಆಚರಣೆಗಳಿಂದ ಇಲ್ಲಿನವರು ಬಹು ಎತ್ತರಕ್ಕೆ ಬೆಳೆಯಲು ಶಕ್ತಿ ತುಂಬಿದೆ. ಹಿಂದುತ್ವದ ಒಗ್ಗಟ್ಟಿಗೆ ಅಯ್ಯಪ್ಪ ಮಂದಿರ ಸಾಕ್ಷಿಯಾಗಲಿ ಎಂದರು.ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರವರ್ತಕ ಡಾ.ಜಿ. ಶಂಕರ್ ಶಿಲಾನ್ಯಾಸ ನೆರವೇರಿಸಿ, ಕ್ಲಪ್ತ ಸಮಯದಲ್ಲಿ ಮಂದಿರ ನಿರ್ಮಾಣವಾಗಿ ಪೂಜೆ, ಪುನಸ್ಕಾರ ನಡೆಯಲಿ. ನಿರ್ಮಾಣ ಕಾರ್ಯದಲ್ಲಿ ಸಹಕರಿಸುವುದಾಗಿ ತಿಳಿಸಿದರು.ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನಿ.ಬೀ. ವಿಜಯ ಬಲ್ಲಾಳ್ ಆಶೀರ್ವಚನ ನೀಡಿದರು.
ಮಂಗಳೂರಿನ ಡಿವೈಎಸ್‌ಪಿ ಜೈಶಂಕರ್, ಎ.ಜಿ. ಅಸೋಸಿಯೇಟ್ಸ್‌ನ ಯೋಗೀಶ್ಚಚಂದ್ರಧರ, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಉದ್ಯಮಿಗಳಾದ ಪ್ರಖ್ಯಾತ ಶೆಟ್ಟಿ ತೆಂಕನಿಡಿಯೂರು, ಉದಯ ಎನ್., ಕಂಗಾರುಮನೆ, ಕೇದಾರನಾಥ ಶೆಟ್ಟಿ, ಮಂಜುನಾಥ್, ವಿಶ್ವನಾಥ್ ರೆಡ್ಡಿ ಬಿರಾದಾರ್, ಸುರೇಶ್ ಎಸ್. ಕೋಟ್ಯಾನ್, ಗುರುಸ್ವಾಮಿಗಳಾದ ರಾಮಣ್ಣ, ಸೋಮಯ್ಯ, ಅರವಿಂದ್, ಹರೀಶ್, ದಿನಕರ, ಸಂಘ ಉಪಾಧ್ಯಕ್ಷ ಕೃಷ್ಣ ಅಂಬಲಪಾಡಿ, ಕಾರ್ಯದರ್ಶಿ ದೀಪಕ್ ಪೂಜಾರಿ, ಜತೆಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಯೋಗೀಶ್, ಲಕ್ಕಿಡಿಪ್ ಡ್ರಾ ಫಲಿತಾಂಶ ನೆರವೇರಿಸಿದರು. ಅಧ್ಯಕ್ಷ ಗೌರೀಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.