ಅಡಿಗಾಸ್ ಯಾತ್ರಾದ 31ನೇ ವರ್ಷದ ಪ್ರವಾಸಿ ಕೈಪಿಡಿ ಅನಾವರಣ

| Published : Jan 20 2025, 01:33 AM IST

ಸಾರಾಂಶ

ಅಡಿಗಾಸ್ ಸಂಸ್ಥೆಯು ನವ ನವೀನ ಪ್ರವಾಸಿ ಯೋಜನೆಗಳನ್ನು ಜಾರಿಗೊಳಿಸಿ ಅದನ್ನು ಆಯೋಜಿಸಿ, ಯಶಸ್ವಿಯಾಗಿ ನಡೆಸುತ್ತಲೇ ಬಂದಿದೆ. 500ಕ್ಕೂ ಅಧಿಕ ವೈವಿಧ್ಯಮಯ ಆಕರ್ಷಕ ಪ್ರವಾಸಗಳು ಪ್ರವಾಸಿಗರಿಗೆ ಅನಾವರಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಧರ್ಮಸ್ಥಳ

ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸಂಸ್ಥೆಯಾದ ಅಡಿಗಾಸ್ ಯಾತ್ರಾದ 2025ರ ಕೈಪಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಕೈಪಿಡಿಯ ಪ್ರತಿ ಪುಟವನ್ನೂ ವೀಕ್ಷಿಸಿದ ಅವರು, ವಿವರಗಳನ್ನು ಕೇಳಿ ತಿಳಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಅಡಿಗಾಸ್ ಸಂಸ್ಥೆಯ ಸ್ಥಾಪಕ ನಾಗರಾಜ ಅಡಿಗ, ನಿರ್ದೇಶಕಿ ಆಶಾ ಅಡಿಗ, ಆದಿತ್ಯಾ ಅಡಿಗ, ಧರ್ಮಸ್ಥಳ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರಸನ್ನ ಕುಮಾರ್ ಐತಾಳ್, ಅಡಿಗಾಸ್ ಸಂಸ್ಥೆಯ ಆಡಳಿತ ಮಂಡಳಿಯ ನಾಗೇಂದ್ರ ಕೆ.ಎಸ್., ಪ್ರಸನ್ನ ಎಚ್.ಕೆ., ಮಹೇಶ್ ಎಚ್.ಜೆ., ಎಂ.ರಮೇಶ್, ಶಶಾಂಕ್ ಕುಮಾರ್ ಕೆ., ಎಚ್.ಕೆ. ನರೇಶ್, ಆದಿತ್ಯಾ ಭಟ್ ಮುಂತಾದವರು ಉಪಸ್ಥಿತರಿದ್ದರು.ಅಡಿಗಾಸ್ ಸಂಸ್ಥೆಯು ನವ ನವೀನ ಪ್ರವಾಸಿ ಯೋಜನೆಗಳನ್ನು ಜಾರಿಗೊಳಿಸಿ ಅದನ್ನು ಆಯೋಜಿಸಿ, ಯಶಸ್ವಿಯಾಗಿ ನಡೆಸುತ್ತಲೇ ಬಂದಿದೆ. 500ಕ್ಕೂ ಅಧಿಕ ವೈವಿಧ್ಯಮಯ ಆಕರ್ಷಕ ಪ್ರವಾಸಗಳು ಪ್ರವಾಸಿಗರಿಗೆ ಅನಾವರಣ ಮಾಡಲಾಗಿದೆ.ಪ್ರವಾಸಿ ಕೈಪಿಡಿ ಹಾಗೂ ಸಂಸ್ಥೆಯ ಬಗ್ಗೆ ಮಾಹಿತಿಯನ್ನು 080-26616678/ 9449478944 ಈ ದೂರವಾಣಿಯನ್ನು ಸಂಪರ್ಕಿಸುವ ಮೂಲಕ ಅಥವಾ website: www.adigasyatra.com ಅಥವಾ care@adigasyatra.com ಗೆ ಬರೆಯುವ ಮೂಲಕ ಪಡೆಯಬಹುದು ಎಂದು ಸಂಸ್ಥಾಪಕ ನಾಗರಾಜ್ ಅಡಿಗ ತಿಳಿಸಿದ್ದಾರೆ.