ಕನ್ನಡದಲ್ಲೇ ಆಡಳಿತ, ವ್ಯವಹಾರ ನಡೆದಲ್ಲಿ ಭಾಷೆಗೆ ಕಿಮ್ಮತ್ತು

| Published : Nov 02 2024, 01:40 AM IST

ಸಾರಾಂಶ

ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಗಳ ಮೇಲೆ ಭಾಷೆಗೆ ಧಕ್ಕೆಬಾರದಂತೆ ಭಾಷಾಭಿಮಾನ ಮೆರೆದರೆ, ನಮ್ಮ ಕರ್ನಾಟಕ ಮಾತ್ರ ಕನ್ನಡ ಮಾತನಾಡಲು ಓದಲು, ಬರೆಯಲು ಬರುತ್ತಿದ್ದರೂ, ಕನ್ನಡ ಭಾಷೆಯಲ್ಲಿ ವ್ಯವಹರಿಸದೇ ಇರುವುದು ಸರಿಯಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ರಾಜ್ಯೋತ್ಸವ ಸಮಾರಂಭದಲ್ಲಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಅಭಿಮತ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಗಳ ಮೇಲೆ ಭಾಷೆಗೆ ಧಕ್ಕೆಬಾರದಂತೆ ಭಾಷಾಭಿಮಾನ ಮೆರೆದರೆ, ನಮ್ಮ ಕರ್ನಾಟಕ ಮಾತ್ರ ಕನ್ನಡ ಮಾತನಾಡಲು ಓದಲು, ಬರೆಯಲು ಬರುತ್ತಿದ್ದರೂ, ಕನ್ನಡ ಭಾಷೆಯಲ್ಲಿ ವ್ಯವಹರಿಸದೇ ಇರುವುದು ಸರಿಯಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದ ಅನ್ಯಧರ್ಮೀಯರು ಮನೆಗಳಲ್ಲಿ ಅವರವರ ಯಾವುದೇ ಭಾಷೆಗಳನ್ನು ಮಾತನಾಡಲಿ, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಕನ್ನಡ ಭಾಷೆಗಳಲ್ಲಿ ವ್ಯವಹರಿಸಬೇಕು. ಆಗ ಕನ್ನಡ ಭಾಷೆಯ ಕಿಮ್ಮತ್ತು ಹೆಚ್ಚಲಿದೆ. ಆಡಳಿತ ನಡೆಸುವಂತಹ ಯಾವುದೇ ಸರ್ಕಾರಗಳಿರಲಿ, ಕನ್ನಡ ಭಾಷೆಯಲ್ಲಿ ಆಡಳಿತ ಎಂದು ಹೇಳುತ್ತವೆ. ಆದರೆ, ಪೂರ್ಣವಾದ ಕನ್ನಡ ಭಾಷೆ ಬಳಕೆಯಾಗುತ್ತಿಲ್ಲ ಎಂದು ವಿಷಾದಿಸಿದರು.

ಕನ್ನಡ ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ಬುಳ್ಳಿ ನಾಗರಾಜ್ ನೆರವೇರಿಸಿ ಮಾತನಾಡಿ, 34 ವರ್ಷಗಳಿಂದ ಸಂಘದ ವತಿಯಿಂದ ರಾಜ್ಯೋತ್ಸವ, ನಾಟಕೋತ್ಸವ, ನಾಡು, ನುಡಿಗೆ ಧಕ್ಕೆಯಾದ ಸಂದರ್ಭಗಳಲ್ಲಿ ಹೋರಾಟ, ಉರುಳು ಸೇವೆ ಪ್ರತಿಭಟನೆಗಳನ್ನು ಸಂಘಟನೆ ಮಾಡುತ್ತಿದೆ. ಯಾವುದೇ ಸಂದರ್ಭಗಳಲ್ಲಿಯೂ ಹೋರಾಟದ ಕಿಚ್ಚು ಕನ್ನಡಿಗರಲ್ಲಿರಬೇಕು ಎಂದರು.

ಸಂಘದ ಅಧ್ಯಕ್ಷ ನಿವೃತ್ತ ಪಿಡಿಒ ಗೌ.ಹಾಲೇಶ್ ಕನ್ನಡನಾಡಿನ ಇತಿಹಾಸ, ಭಾಷೆ, ಪರಂಪರೆಗಳು, ಕನ್ನಡಪರ ಸಂಘಟನೆಗಳ ಹೋರಾಟಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಗಾದ್ರಿ ರಾಜು, ಪಟ್ಲಿ ನಾಗರಾಜ್, ಸೈಯದ್ ಇಮ್ರಾನ್, ಎಪಿಎಂಸಿ ಮಾಜಿ ಅಧ್ಯಕ್ಷ ದಿಗ್ಗೇನಹಳ್ಳಿ ನಾಗರಾಜ್, ಶ್ರೀಕಾಂತ್, ಚ.ಮ. ಗುರುಸಿದ್ದಯ್ಯ, ಎಲ್.ಎಂ. ರೇಣುಕಾ, ರಾಜಸ್ಥಾನಿ ಕನ್ನಡಿಗ ಹನ್ಸ್ ರಾಮ್ ಬಿ.ಆರ್. ಮಹೇಶ್ವರಪ್ಪ ಉಪಸ್ಥಿತರಿದ್ದರು.

- - - -1ಕೆಸಿಎನ್‌ಜಿ1:

ರಾಜ್ಯೋತ್ಸವದಲ್ಲಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು.