ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಸಮಾಜದಲ್ಲಿ ಅಂಧಶ್ರದ್ಧೆ, ಮೂಢನಂಬಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಕೆಲವರು ನಿಲುವು ಹೊಂದಿದ್ದಾರೆ. ನಾಗರಪಂಚಮಿಯ ವೈಚಾರಿಕ ನೆಲೆಗಟ್ಟಿನ ಮೇಲೆ ಬಸವ ಪಂಚಮಿಯನ್ನಾಗಿ ಆಚರಿಸಬೇಕು ಎಂದು ಮಾನವ ಬಂಧುತ್ವ ಸಂಚಾಲಕ ವಿಠ್ಠಲ ಮಾದರ ಹೇಳಿದರು.ಹಿಡಕಲ್ ಡ್ಯಾಮಿನ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ದಲಿತ ಸೇನೆ ಮತ್ತು ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಬಸವ ಪಂಚಮಿ ನಿಮಿತ್ತ ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು ನೀಡುವುದರ ಮೂಲಕ ಮೌಢ್ಯ ವಿರೋಧಿ ತೊಡೆದು ಹಾಕಲು ಹಾಕಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಕೃತಿ ಕೂಡ ಒಂದು ಧರ್ಮವಾಗಿದ್ದು, ಅದನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಪ್ರಗತಿಪರ ವಿಚಾರಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಕರೆಪ್ಪಾ ಗುಡೆನ್ನವರ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ಅವರು ಮೂಢನಂಬಿಕೆ, ಕಂದಾಚಾರ ಶೋಷಣೆಗೆ ಒಳಗಾಗಿದ್ದ ಈ ಸಮಾಜವನ್ನು ಹೊರತರಲು ಮತ್ತು ಯಶಸ್ವಿ ಜೀವನ ಸಾಗಿಸಲು ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಆಚರಿಬೇಕೆಂದು ಸಂದೇಶ ನೀಡಿದ್ದಾರೆ ಎಂದರು.ಈ ವೇಳೆ ಹೊಸಪೇಟೆ ಗ್ರಾಪಂ ಸದಸ್ಯ ಸದಾನಂದ ಮಾಳ್ಯಾಗೋಳ, ದಲಿತ ಸೇನೆ ತಾಲೂಕಾಧ್ಯಕ್ಷ ಬಂಡೆಪ್ಪಾ ಮಾದರ, ಲಕ್ಷ್ಮಣ ಪೂಜಾರ, ಕರಗುಪ್ಪಿ ದಲಿತ ಸೇವೆ ಅಧ್ಯಕ್ಷ ಮಲ್ಲೇಶಿ ಹರಿಜನ, ದಲಿತಸೇನೆ ಪದಾಧಿಕಾರಿಗಳು ಬಾಳಪ್ಪ ದಾರನಕೊಳ್ಳ, ಅಡಿವೆಪ್ಪಾ ಹರಿಜನ, ಯಲ್ಲಪ್ಪಾ ಭಜಂತ್ರಿ, ಪ್ರಕಾಶ ಹರಿಜನ (ಹಗೆದಾಳ) ಸುರೇಶ ಗುಟಗುದ್ದಿ, ರಾಮಚಂದ್ರ ಹಗೇದಾಳ, ಸಣ್ಣಪ್ಪಾ ಹಗೇದಾಳ, ಶ್ರೀಕಾಂತ ಹಟ್ಟಿಆಲೂರ ಮುಂತಾದವರು ಉಪಸ್ಥಿತರಿದ್ದರು.