ಬಾಳೆಹೊನ್ನೂರು, ಕಾಫಿ ಬೆಳೆಗಾರರು ಪುನಃರುತ್ಪಾದಕ ಕಾಫಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಎಸ್‌ಎಂ ಸೆಹಗಲ್ ಫೌಂಡೇಶನ್‌ನ ಸುಮಂತ್ ಹೇಳಿದರು.

ಸಣ್ಣ ಕಾಫಿ ಬೆಳೆಗಾರರಿಗೆ ಎಸ್‌ಎಂ ಸೆಹಗಲ್ ಫೌಂಡೇಶನ್ ನಿಂದ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಾಫಿ ಬೆಳೆಗಾರರು ಪುನಃರುತ್ಪಾದಕ ಕಾಫಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಎಸ್‌ಎಂ ಸೆಹಗಲ್ ಫೌಂಡೇಶನ್‌ನ ಸುಮಂತ್ ಹೇಳಿದರು.ಅಳೇಹಳ್ಳಿ ಗ್ರಾಮದ ಸಣ್ಣ ಕಾಫಿ ಬೆಳೆಗಾರರಿಗೆ ಎಸ್‌ಎಂ ಸೆಹಗಲ್ ಫೌಂಡೇಶನ್ ನಿಂದ ಮಂಗಳವಾರ ಆಯೋಜಿಸಿದ್ದ ಉಚಿತ ಮಣ್ಣಿನ ಪರೀಕ್ಷಾ ಶಿಬಿರದಲ್ಲಿ ಅವರು ಮಾತನಾಡಿದರು. ಕಾಫಿ ಬೆಳೆಗಾರರಿಗೆ ಉತ್ತಮ ಯೋಜನೆ ನೀಡಬೇಕು ಎಂಬ ಉದ್ದೇಶದ ಕಾರ್ಯಕ್ರಮಗಳ ಒಂದು ಭಾಗ ಮಣ್ಣಿನ ಪರೀಕ್ಷಾ ಶಿಬಿರ. ರೈತರಿಗೆ ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ತಮ್ಮ ತೋಟದಲ್ಲಿಯೇ ಸಿಗುವ ತ್ಯಾಜ್ಯ ಎಲೆ ಇತ್ಯಾದಿಗಳನ್ನು ಬಳಸಿಕೊಂಡು ಬೆಳೆಗೆ ಬೇಕಾಗುವ ಎನ್‌ಪಿಕೆ ಹಾಗೂ ಲಘು ಪೋಷಕಾಂಶಗಳನ್ನು ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸುವ ಉದ್ದೇಶ ಹೊಂದಿದೆ.

ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮುಖ್ಯ. ಮಣ್ಣನ್ನು ಕಾಪಾಡುವ ಜವಾಬ್ದಾರಿ ರೈತರದ್ದಾಗಿರುತ್ತದೆ. ಕೃಷಿ ರಾಸಾಯನಿಕ ಕಂಪನಿಗಳು ತಮ್ಮ ಲಾಭಕ್ಕಾಗಿ ಮಣ್ಣು ಹಾಗೂ ಮನುಷ್ಯರ ಆರೋಗ್ಯಕ್ಕೂ ಧಕ್ಕೆ ತರುವ ಔಷಧಿಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಇದನ್ನು ರೈತರು ತಿಳಿದಿರಬೇಕು ಹಾಗೂ ಬಳಕೆ ಕಡಿಮೆ ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ರೈತರಿಂದ ಜಮೀನಿನ ಮಣ್ಣನ್ನು ಪಡೆದು ಉಚಿತವಾಗಿ ಮಣ್ಣಿನ ಪರೀಕ್ಷೆ ನಡೆಸಿ ಅದರಲ್ಲಿರುವ ಅಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರಾದ ರಾಜೇಶ್, ಕೌಶಲ್ಯ, ಶ್ರೀಕಾಂತ್, ಶಿವಾನಂದ್ ಮತ್ತಿತರರು ಹಾಜರಿದ್ದರು.

೦೪ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಅಳೇಹಳ್ಳಿ ಗ್ರಾಮದಲ್ಲಿ ಎಸ್‌ಎಂ ಸೆಹಗಲ್ ಫೌಂಡೇಶನ್ ನಿಂದ ಸಣ್ಣ ಕಾಫಿ ಬೆಳೆಗಾರರಿಗೆ ಉಚಿತ ಮಣ್ಣಿನ ಪರೀಕ್ಷಾ ಶಿಬಿರ ನಡೆಸಲಾಯಿತು.