12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಸಿದ್ದರಾಮೇಶ್ವರರು ಒಬ್ಬರು

ಕುಕನೂರು: ಯೋಗಿ ಸಿದ್ದರಾಮೇಶ್ವರರಂತೆ ಆಗಬೇಕು ಎಂದು ಭೋವಿ ಸಮಾಜದ ಯುವ ಮುಖಂಡ ಮುತ್ತಣ್ಣ ಡಿ. ತಿರ್ಲಾಪುರ ಹೇಳಿದರು.

ತಾಲೂಕಿನ ತಹಸಿಲ್ದಾರ್ ಕಚೇರಿಯಲ್ಲಿ ಜರುಗಿದ ಸಿದ್ದರಾಮೇಶ್ವರರ 853 ನೆಯ ಜಯಂತ್ಯತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಿದ್ದರಾಮೇಶ್ವರರ ಜೀವನದ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಹಾಗೂ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಸಿದ್ದರಾಮೇಶ್ವರರು ಒಬ್ಬರು.ಇವರ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರ ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ ಎಂದರು.

ಭೋವಿ ಸಮಾಜದ ಹಿರಿಯ ಮುಖಂಡ ಹುಲಗಪ್ಪ, ಶೆಟ್ಟಪ್ಪ ತೊಂಡಿಹಾಳ, ಹನುಮಪ್ಪ, ಯಲ್ಲಪ್ಪ, ಹುಲುಗಪ್ಪ, ಮುತ್ತಣ್ಣ,ವೀರೇಶ್, ಅಡಿವೆಪ್ಪ, ಲಕ್ಷ್ಮಣ, ಯಮನೂರಪ್ಪ, ಮಂಜುನಾಥ, ವೀರೇಶ್, ದುರ್ಗಪ್ಪ, ತರುಣ ಇತರರು ಇದ್ದರು.