ಸಿದ್ದೇಶ್ವರ ಶ್ರೀಗಳ ಆದರ್ಶ ಅಳವಡಿಸಿಕೊಳ್ಳಿ

| Published : Jan 05 2024, 01:45 AM IST

ಸಾರಾಂಶ

ಅವರು 14 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದರು. ವಿಜಯಪುರದಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಈ ಬಾಲಕನನ್ನು ನೋಡಿದಾಗ ಈ ವ್ಯಕ್ತಿ ನಾಡಿನಲ್ಲಿ ಹೆಸರು ತರಲಿದ್ದಾನೆ ಎಂದು ಗುರುತಿಸಿಕೊಂಡರು.

ಕನ್ನಡಪ್ರಭ ವಾರ್ತೆ ಐಗಳಿ ಸಿದ್ದೇಶ್ವರ ಶ್ರೀಗಳು ಬಿಜ್ಜರಗಿ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿದರು. ಆ ಸಮಯದಲ್ಲಿ ಗ್ರಾಮದಲ್ಲಿರುವ ಚಿಕ್ಕ ಗುಡಿಯಲ್ಲಿ ಬಿಡುವಿನ ವೇಳೆ ಜ್ಞಾನ ಮಾಡುವದನ್ನು ಪ್ರಾರಂಭಿಸಿದರು. ಅವರು 14 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದರು. ವಿಜಯಪುರದಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಈ ಬಾಲಕನನ್ನು ನೋಡಿದಾಗ ಈ ವ್ಯಕ್ತಿ ನಾಡಿನಲ್ಲಿ ಹೆಸರು ತರಲಿದ್ದಾನೆ ಎಂದು ಗುರುತಿಸಿಕೊಂಡರು. ನಂತರ ಅವರ ಮಾರ್ಗದರ್ಶನದಲ್ಲಿ ನಡೆದುಕೊಂಡರು ಎಂದು ಯಕ್ಕಂಚಿಯ ಗುರುದೇವ ತಪೋವನದ ಪೂಜ್ಯ ಗುರುಪಾದೇಶ್ವರ ಸ್ವಾಮೀಜಿ ನುಡಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಲಿಂ.ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಐಗಳಿ ಗ್ರಾಪಂ ಆವರಣದಲ್ಲಿ ಶ್ರೀಗಳ ಭಾವಚಿತ್ರದ ಪೂಜೆ ಮಾಡಿದ ನಂತರ ಅವರು ಮಾತನಾಡಿದರು. ಯುವ ನಾಯಕ ಶಿವಾನಂದ ಸಿಂಧೂರ ಮಾತನಾಡಿ ಲಿಂ.ಸಿದ್ದೇಶ್ವರ ಸ್ವಾಮಿಗಳ ತ್ಯಾಗ ಮನೋಭಾವ ಎಲ್ಲರೂ ಅವಡಿಸಿಕೊಳ್ಳಿ. ಶ್ರೀಗಳು ಐಗಳಿ ಗ್ರಾಮಕ್ಕೆ 3 ಸಾರಿ ಬಂದಿದ್ದರು. ಸರ್ಕಾರದಿಂದ ಪ್ರಶಸ್ತಿ ನೀಡಿದರೂ ಕೂಡಾ ಸ್ವೀಕರಿಸಲಿಲ್ಲ. ಬ್ಯಾಂಕಿನಲ್ಲಿ ಪಾಸ್ ಬುಕ್ ಇಲ್ಲ , ಆಧಾರ ಕಾರ್ಡ ಇಲ್ಲ, ಮತದಾನದ ಗುರುತಿನ ಪತ್ರ ಇಲ್ಲವೇ ಇಲ್ಲ. ಹೆಣ್ಣು ನೋಡಲಿಲ್ಲ, ಹೊನ್ನ ಮುಟ್ಟಲಿಲ್ಲ, ಮಣ್ಣು ಖರೀದಿಸಲಿಲ್ಲ. ಇವರು ನಿಜವಾದ ರಾಷ್ಟ್ರ ಸಂತರು ಎಂದರು.ಅನ್ನದಾತ ಶಿವಲಿಂಗ ಅರಟಾಳ ಹಾಗೂ ಪೊಲೀಸರನ್ನು ಸತ್ಕರಿಸಲಾಯಿತು. ಪ್ರಾಸ್ತಾವಿಕವಾಗಿ ಹಿರಿಯ ಶಿಕ್ಷಕ ಅಪ್ಪಾಸಾಬ ತೆಲಸಂಗ ಮಾತನಾಡಿದರು. ಅಪ್ಪು ಮಾಳಿ, ಅಣ್ಣಾಸಾಬ ಪಾಟೀಲ, ಗ್ರಾ.ಪಂ ಸದಸ್ಯರು, ರೈತರು, ಸಾವಿರಾರು ಸಂಖ್ಯೆಯಲ್ಲಿ ಯುವಕರು ಪೂಜ್ಯರಿಗೆ ನುಡಿ ನಮನ ಸಲ್ಲಿಸಿದರು. ಗಣ್ಯರಾದ ಸಿ.ಎಸ್.ನೇಮಗೌಡ, ನಿಂಗನಗೌಡ ಪಾಟೀಲ, ಎ.ಎಸ್.ನಾಯಿಕ, ಅಪ್ಪಾಸಾಬ ಪಾಟೀಲ, ಈರಗೌಡ ಪಾಟೀಲ ಇದ್ದರು.