ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ ಅವರಂತೆ ವೇಮನರು ವಚನಕಾರರು ಮಹಾ ಕವಿ ಮಹಾಯೋಗಿಯಾಗಿದ್ದಾರೆ. ತ್ರಿಪದಿಯ ಮೂಲಕ ಸಮಾಜದ ಅಂಕುಡೊಂಕು ತಿದ್ದಿ ಸರಿದಾರಿಗೆ ತರಲು ಯತ್ನಿಸಿದ ಒಬ್ಬ ಮಹಾ ಯೋಗಿ.

ಲಕ್ಷ್ಮೇಶ್ವರ: ಯೋಗಿ ವೇಮನರು 15ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ. ಅವರು ಸಮಾಜ ಚಿಂತಕರಾಗಿ ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು ಎಂದು ಪ್ರಧಾನ ಗುರು ಬಸವರಾಜ ಕುಂಬಾರ ತಿಳಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಸೋಮವಾರ ಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ ಅವರಂತೆ ವೇಮನರು ವಚನಕಾರರು ಮಹಾ ಕವಿ ಮಹಾಯೋಗಿಯಾಗಿದ್ದಾರೆ. ತ್ರಿಪದಿಯ ಮೂಲಕ ಸಮಾಜದ ಅಂಕುಡೊಂಕು ತಿದ್ದಿ ಸರಿದಾರಿಗೆ ತರಲು ಯತ್ನಿಸಿದ ಒಬ್ಬ ಮಹಾ ಯೋಗಿ ಎಂದರು.

ಶಿಕ್ಷಕಿ ಎಚ್.ಡಿ. ನಿಂಗರೆಡ್ಡಿ ಮಾತನಾಡಿ, ವೇಮನರು ಚಿಕ್ಕ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗಿ ಅವನ ಸಹೋದರನ ಹೆಂಡತಿ ಮಲ್ಲಮ್ಮನಿಂದ ಮುಕ್ತಿ ಪಡೆದು ನಗ್ನನಾಗಿ ದೇಶ ಪರ್ಯಟನೆ ಮಾಡುತ್ತಾ ಭಿಕ್ಷಾನ್ನವನ್ನುಂಡು ಜನರ ನೋವು ನಲಿವುಗಳನ್ನು ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಅವರ ಕಾವ್ಯದಲ್ಲಿ ಸತ್ವ ಅಡಗಿದೆ. ತೆಲುಗು ಸಾಹಿತ್ಯದಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಯೋಗ ಬುದ್ಧಿವಂತಿಕೆ ಮತ್ತು ನೈತಿಕತೆಯ ವಿಷಯಗಳನ್ನು ಹೆಚ್ಚಾಗಿ ಪ್ರತಿಪಾದಿಸಿದ ಯೋಗಿ ವೇಮನರು ಭಾರತೀಯ ತತ್ವಜ್ಞಾನಿಗಳ ಸಾಲಿನಲ್ಲಿ ಒಬ್ಬರು. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜನ್ಮದಿನಾಚರಣೆ ಮಾಡುವುದು ಸಾರ್ಥಕವಾಗುತ್ತದೆ ಎಂದರು.

ಈ ವೇಳೆ ಶಿಕ್ಷಕ ಆರ್.ಎಂ. ಶಿರಹಟ್ಟಿ, ಎಲ್.ಎ. ಬಣಕಾರ, ಆರ್.ಕೆ. ಉಪನಾಳ, ನೇತ್ರಾವತಿ ಕುಂಬಾರ, ಗೀತಾ ಗುರಿಕಾರ ಹಾಗೂ ಎನ್ ಟಿಸಿ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಇಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಜ. 20ರಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.ಮಂಗಳವಾರ ಮಧ್ಯಾಹ್ನ 2.30ಕ್ಕೆ ನಗರದ ಗಂಗಿಮಡಿಯಲ್ಲಿ ಕರ್ನಾಟಕ ಮೌಲಾನಾ ಆಜಾದ ಮಾದರಿ ಶಾಲೆ(ಆಂಗ್ಲ ಮಾಧ್ಯಮ) ನೂತನ ಕಟ್ಟಡ ಉದ್ಘಾಟನೆ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.ಮಧ್ಯಾಹ್ನ 3.45ಕ್ಕೆ ನಗರದ ಹಾಕಿ ಸ್ಟೇಡಿಯಂ ಹತ್ತಿರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಉದ್ಘಾಟನೆ ಕಾರ್ಯಕ್ರಮ, ಸಂಜೆ 5.15ಕ್ಕೆ ಅಬ್ದುಲ್ ಕಲಾಂ ಶಾದಿಮಹಲ್ ಹತ್ತಿರದ ಅಲ್ಪಸಂಖ್ಯಾತರ ಸಾಮಾನ್ಯ ವಸತಿನಿಲಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ, ಸಂಜೆ 5.45 ಕ್ಕೆ ಹರ್ತಿ ಗ್ರಾಮದಲ್ಲಿ ಹೆಣ್ಣುಮಕ್ಕಳ ಮೊರಾರ್ಜಿ ದೇಸಯಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ ಹಾಗೂ ಅಲ್ಪಸಂಖ್ಯಾತರ ನವೋದಯ ಮಾದರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಕು ಸ್ಥಾಪನೆ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.