ಎಲ್ಲರೂ ಒನಕೆ ಓಬವ್ವ ತತ್ವಾದರ್ಶ ಅಳವಡಿಸಿಕೊಳ್ಳಿ: ಶಿಕ್ಷಕಿ ವಿ.ಸಿಂಧು

| Published : Dec 01 2024, 01:35 AM IST

ಸಾರಾಂಶ

ಚಿತ್ರದುರ್ಗದ ಒನಕೆ ಓಬವ್ವ ಕರ್ನಾಟಕದ ವೀರ ವನಿತೆಯಾಗಿದ್ದು, ಅವರು ಹೆಸರು ಇತಿಹಾಸದಲ್ಲಿ ಮರೆಯಲಾಗದು ಎಂದು ಶಿಕ್ಷಕಿ ವಿ. ಸಿಂಧು ಹೇಳಿದರು. ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪನ್ಯಾಸ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಿತ್ರದುರ್ಗದ ಒನಕೆ ಓಬವ್ವ ಕರ್ನಾಟಕದ ವೀರ ವನಿತೆಯಾಗಿದ್ದು, ಅವರು ಹೆಸರು ಇತಿಹಾಸದಲ್ಲಿ ಮರೆಯಲಾಗದು ಎಂದು ಶಿಕ್ಷಕಿ ವಿ. ಸಿಂಧು ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ 28ನೇ ದಿನದ ಕಾರ್ಯಕ್ರಮದಲ್ಲಿ ವೀರವನಿತೆ ಒನಕೆ ಓಬವ್ವ ಕುರಿತು ಮಾತನಾಡಿದರು. ಒನಕೆಯನ್ನೇ ಆಯುಧವನ್ನಾಗಿ ಹಿಡಿದು ಹೈದರಾಲಿ ಸೈನ್ಯವನ್ನು ಸದೆಬಡೆದು ಚಿತ್ರದುರ್ಗದ ಕೋಟೆ ರಕ್ಷಿಸಿದ ಕೀರ್ತಿ ವೀರ ವನಿತೆ ಒನಕೆ ಓಬವ್ವಗೆ ಸಲ್ಲುತ್ತದೆ. ರಾಜವೀರ ಮದಕರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಚಿತ್ರದುರ್ಗದ ಕೋಟೆಗೆ ಒದಗಿ ಬಂದ ಆಪತ್ತನ್ನು ಓರ್ವ ಸಾಮಾನ್ಯ ಮಹಿಳೆಯಾದ ಓಬವ್ವ ತನ್ನ ಮನೆಯಲ್ಲಿದ್ದ ಓನಕೆಯಿಂದ ಶತ್ರು ಸೈನ್ಯ ಸದೆಬಡಿದು ನಾಡಿನ ಕೋಟೆ ರಕ್ಷಿಸಿದ್ದಾಳೆ. ಸ್ವಾಮಿ ನಿಷ್ಟೆಗೆ ಹೆಸರುವಾಸಿಯಾದ ಓಬವ್ವ ಕರ್ನಾಟಕದ ಹೆಮ್ಮೆ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ. ಪ್ರಜ್ಞೆಯಧ್ಯೋತಕ ಓಬವ್ವರ ಆದರ್ಶ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರಜೆಗಳ ರಕ್ಷಣೆಗಾಗಿ ಏಳುಸುತ್ತಿನ ಕೋಟೆಯನ್ನು ನಿರ್ಮಿಸಿದ ಕನ್ನಡಿಗ ವೀರ ಮದಕರಿ ನಾಯಕರು. ಇಂತಹ ಕೋಟೆ ದಕ್ಷಿಣ ಭಾರತದಲ್ಲಿ ಇಲ್ಲ ಎಂಬುವುದು ಇತಿಹಾಸದ ಇದೆ. ಇಂತಹ ಕೋಟಿಯೊಳಗೆ ಹೈದರಾಲಿ ಸೈನಿಕರು ನುಸುಳುವ ಸಂದರ್ಭದಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಒನಕೆ ಹಿಡಿದು ಶತ್ರು ಸೈನಿಕರು ಸದೆಬಡಿದ ವೀರಪಾತಕೆ ಹಾರಿಸಿದ ಕನ್ನಡ ವೀರ ಮಹಿಳೆ ಒನಕೆ ಒಬವ್ವ. ಕನ್ನಡನಾಡಿನ ಬಹುದೊಡ್ಡ ಶಕ್ತಿಯಾಗಿದ್ದಾರೆ ಎಂದರು.

ನಿವೃತ್ತ ಶಿಕ್ಷಕಿ ಎನ್.ಸರಸ್ವತಿ, ಕನ್ನಡದ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಣ್ಯದಹುಂಡಿ ರಾಜು, ಮಹೇಶ್ ಗೌಡ, ಬಸವರಾಜನಾಯಕ, ಶಿವಲಿಂಗಮೂರ್ತಿ, ನಂಜುಂಡಶೆಟ್ಟಿ, ರಾಚಪ್ಪ, ಓಂಶಾಂತಿ ಆರಾಧ್ಯ ಇತರರು ಹಾಜರಿದ್ದರು.