ಹೇಮರೆಡ್ಡಿ ಮಲ್ಲಮ್ಮ ತತ್ವಗಳನ್ನು ಅಳವಡಿಸಿಕೊಳ್ಳಿ: ಶಾಸಕ ಶರಣು ಸಲಗರ

| Published : May 14 2024, 01:00 AM IST

ಹೇಮರೆಡ್ಡಿ ಮಲ್ಲಮ್ಮ ತತ್ವಗಳನ್ನು ಅಳವಡಿಸಿಕೊಳ್ಳಿ: ಶಾಸಕ ಶರಣು ಸಲಗರ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಕಲ್ಯಾಣದಲ್ಲಿ ರೆಡ್ಡಿ ಸಮಾಜ ವತಿಯಿಂದ ನಗರದ ಬಂದವರ ಓಣಿ ಹತ್ತಿರ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 602ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಶರಣು ಸಲಗರ ಮಾತನಾಡಿದರು.

ಬಸವಕಲ್ಯಾಣ: ಹೇಮರೆಡ್ಡಿ ಮಲ್ಲಮ್ಮನವರು ಶರಣೆಯರಲ್ಲಿ ಒಬ್ಬ ಶ್ರೇಷ್ಠ ಶರಣೆಯಾಗಿದ್ದಾರೆ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲೂಕು ರೆಡ್ಡಿ ಸಮಾಜ ವತಿಯಿಂದ ನಗರದ ಬಂದವರ ಓಣಿ ಹತ್ತಿರ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 602ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ತತ್ವಗಳು ಜೀವನದಲ್ಲಿ ಎಲ್ಲರು ಆಳವಡಿಸಿಕೊಂಡು ಹೋಗಬೇಕು ಎಂದರು.

ತ್ರಿಪುರಾಂತನ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಜೀವನದಲ್ಲಿ ದೊಡ್ಡದಾದ ಸಾಧನೆ ಮಾಡಿದವರು. ಹೀಗಾಗಿ ಅವರ ಜಯಂತಿ ಆಚರಣೆ ಮಾಡುವುದರೊಂದಿಗೆ ಮುಂದಿನ ಯುವ ಪೀಳಿಗೆಗಳಿಗೆ ಅವರ ಜೀವನ ಸಾಧನೆ ಕುರಿತು ತಿಳಿವಳಿಕೆ ತರುವ ಪ್ರಯತ್ನ ಮಾಡಬೇಕು ಎಂದರು. ನ್ಯಾಯವಾದಿ ವೆಂಕರಡ್ಡಿ ಪೋಶೆಟ್ಟಿ ಯರಬಾಗ ಪ್ರಾಸ್ತಾವಿಕ ಮಾತನಾಡಿದರು.

ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ ರೆಡ್ಡಿ, ಪ್ರದೀಪ ವಾತಡೆ, ರೆಡ್ಡಿ ಸಮಾಜ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ ರೆಡ್ಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗೋವಿಂದ ರೆಡ್ಡಿ ಕೋತಾಪಲ್ಲೆ, ರಾಜರೆಡ್ಡಿ ಪಾಟೀಲ್, ಪ್ರಕಾಶ ರೆಡ್ಡಿ ನರಾಹರೆ, ಗುರುನಾಥ ರೆಡ್ಡಿ ಪಾಟೀಲ್ ಧನ್ನೂರ, ಗೋವಿಂದ ರೆಡ್ಡಿ ಎದಲೆ ಗದಲೇಗಾಂವ, ವಿರೇಂದ್ರ ರೆಡ್ಡಿ, ಮತ್ತು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.