ಸಾರಾಂಶ
ಶ್ರೀರಾಘವೇಂದ್ರ ಗುರುಗಳ ಮಧ್ಯಾರಾಧನೆ ಪೂಜಾ ಕಾರ್ಯಗಳು ನಡೆದವು. ಬೆಳಗ್ಗೆ ಪಾದಪೂಜೆ, ಸಂಕಲ್ಪ, ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಶ್ರೀರಾಘವೇಂದ್ರ ಗುರುಸಾರ್ವಭೌಮರ ಪಲ್ಲಕ್ಕಿ ಉತ್ಸವ ಹಾಗೂ ಮಹಾರಥೋತ್ಸವ ಭಕ್ತರ ವೇಧಘೋಷದ ನಡುವೆ ದೇವಸ್ಥಾನದ ಸುತ್ತ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀವ್ಯಾಸರಾಜ ಮಠದ ಆವರಣದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.ಶ್ರೀರಾಘವೇಂದ್ರ ಗುರುಗಳ ಮಧ್ಯಾರಾಧನೆ ಪೂಜಾ ಕಾರ್ಯಗಳು ನಡೆದವು. ಬೆಳಗ್ಗೆ ಪಾದಪೂಜೆ, ಸಂಕಲ್ಪ, ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಶ್ರೀರಾಘವೇಂದ್ರ ಗುರುಸಾರ್ವಭೌಮರ ಪಲ್ಲಕ್ಕಿ ಉತ್ಸವ ಹಾಗೂ ಮಹಾರಥೋತ್ಸವ ಭಕ್ತರ ವೇಧಘೋಷದ ನಡುವೆ ದೇವಸ್ಥಾನದ ಸುತ್ತ ನಡೆಸಲಾಯಿತು.
ಬಳಿಕ ಕನಕಾಭಿಷೇಕ, ಅಷ್ಟಾವಧಾನ ಸೇವೆ ನಡೆಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಹಸ್ರಾರು ಮಂದಿ ಭಕ್ತರು ದೇವಳಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ದರ್ಶನ ಪಡೆದು ಪುನೀತರಾದರು. ಸಂಜೆ 7 ಗಂಟೆಗೆ ಶ್ರೀವರಾಹ ಹರಿವಿಠಲ ದಾಸರಿಂದ ರಾಘವೇಂದ್ರ ಮಹಿಮೆ ಪ್ರವಚನ ನಂತರ ಮಹಾಮಂಗಳಾರತಿ ನಡೆಯಿತು.ನಾಳೆ ನೇರ ಸಂದರ್ಶನಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆ.23 ರಂದು ವಿವಿಧ ಖಾಸಗಿ ಹಾಗೂ ಬ್ಯಾಂಕ್‌ನ ಹುದ್ದೆಗಳಿಗೆ ನಿರುದ್ಯೋಗಿಗಳ ಆಯ್ಕೆಗೆ ನೇರ ಸಂದರ್ಶನ ನಡೆಯಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲಮೋ ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಆಗಸ್ಟ್ 23ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ರೆಸ್ಯೂಮೆ/ಬಯೋಡೇಟಾಗಳೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08232-295124, ಮೊ-9164642684, ಮೊ-8970646629, ಮೊ-8660061488 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.