ಸಾರಾಂಶ
ಕನಕಪುರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕನಕಪುರದ ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿಯ ವೆನ್ನಿ 300 ಮೀಟರ್ ಓಟದಲ್ಲಿ ಚಿನ್ನ, ಸಮೀಕ್ಷಾ ಚಿನ್ನ, ಶಶಾಂಕ್ ಬೆಳ್ಳಿ,200 ಮೀಟರ್ ಓಟದಲ್ಲಿ ಪ್ರಿಯಾಂಕಾ ಚಿನ್ನ, ಹೃತಿಕ್ ಕೃಷ್ಣ ಬೆಳ್ಳಿ ಹಾಗೂ 60 ಮೀಟರ್ ಓಟದಲ್ಲಿ ಪ್ರಿಯಾಂಕಾ ಬೆಳ್ಳಿ ಪದಕ ಗೆದ್ದಿದ್ದಾರೆ.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ರಾಷ್ಟ್ರೀಯ ಪಬ್ಲಿಕ್ ಶಾಲಾ ವತಿಯಿಂದ ಗ್ರಾಸ್ ರೂಟ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹಾರೋಹಳ್ಳಿ ಶಾಖೆಯ ನಿಹಾಲ್ 30 ಹಾಗೂ 50 ಮೀಟರ್ ಓಟದ ಸ್ಪರ್ಧೆ ಮತ್ತು 50 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನ, ಟೆನಿಸ್ ಬಾಲ್ ಥ್ರೋ ನಲ್ಲಿ ಬೆಳ್ಳಿ ಪದಕದ ಜೊತೆ ವಯಕ್ತಿಕ ಚಾಂಪಿಯನ್ ಟ್ರೋಫಿ, ಇಶ್ಚಿತಾ ಎ.ಗೌಡ 50 ಮೀಟರ್ ಓಟ ಹಾಗೂ 50 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನ, ಟೆನಿಸ್ ಬಾಲ್ ಥ್ರೋ ನಲ್ಲಿ ಬೆಳ್ಳಿ, 20 ಮೀಟರ್ ಪ್ರಾಗ್ ಜಂಪ್ ನಲ್ಲಿ ಬೆಳ್ಳಿ, 30 ಮೀಟರ್ ಪ್ರಾಗ್ ಜಂಪ್ ನಲ್ಲಿ ಚಿನ್ನದ ಪದಕ ಜೀವಿತ್ 60 ಮೀಟರ್ ಓಟದಲ್ಲಿ ಚಿನ್ನ 200 ಮೀಟರ್ ಓಟದಲ್ಲಿ ಬೆಳ್ಳಿ, 80 ಮೀಟರ್ ಹರ್ಡಲ್ಸ್ ನಲ್ಲಿ ಕಂಚಿನ ಪದಕದ ಜೊತೆಗೆ 12 ವರ್ಷದೊಳಗಿನ ಕ್ರೀಡಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪದಕ ಶಮೀಕಾ 60 ಮೀಟರ್ ಓಟದಲ್ಲಿ ಬೆಳ್ಳಿ, 200ಮೀಟರ್ ಓಟದಲ್ಲಿ ಚಿನ್ನದ ಪದಕ, ಪ್ರಿಯಾಂಕಾ ಟಿ.ಎಂ 60 ಮೀಟರ್ ಓಟದಲ್ಲಿ ಚಿನ್ನ, 200 ಹಾಗೂ 50 ಮೀಟರ್ ಓಟದಲ್ಲಿ ಬೆಳ್ಳಿ, ಲಾಂಗ್ ಜಂಪ್ ನಲ್ಲಿ ಕಂಚು ಹಾಗೂ ಟೆನಿಸ್ ಬಾಲ್ ಥ್ರೋ ನಲ್ಲಿ ಚಿನ್ನದ ಪದಕದ ಜೊತೆಗೆ ವಯಕ್ತಿಕ ಚಾಂಪಿಯನ್ ಪದಕವನ್ನುಗೆದ್ದಿರುವ ಮಕ್ಕಳ ಸಾಧನೆಯನ್ನು ಅಕಾಡೆಮಿ ಅಧ್ಯಕ್ಷ ಕೆ. ವಿ. ಆನಂದ್ ಹಾಗೂ ಪದಾಧಿಕಾರಿಗಳು, ಪೋಷಕರು ಅಭಿನಂದಿಸಿದ್ದಾರೆ.