ಸಾರಾಂಶ
ಮಂಡ್ಯದ ಕೆರಗೋಡು ಕೇಂದ್ರದಲ್ಲಿ ಭಗವಾಧ್ವಜ ಹಾರಿಸುವ ವೇಳೆ ಅದನ್ನು ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಹಿಂದುತ್ವ ಅಳಿಸಬಹುದು ಅನ್ನೋದು ನಿಮ್ಮ ಕನಸು ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ: ಮಂಡ್ಯದ ಕೆರಗೋಡು ಕೇಂದ್ರದಲ್ಲಿ ಭಗವಾಧ್ವಜ ಹಾರಿಸುವ ವೇಳೆ ಅದನ್ನು ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಹಿಂದುತ್ವ ಅಳಿಸಬಹುದು ಅನ್ನೋದು ನಿಮ್ಮ ಕನಸು ಎಂದು ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ. ಇನ್ನಾದರೂ ನಿಮ್ಮ ಧೋರಣೆ ಸರಿಪಡಿಸಿಕೊಳ್ಳಿ, ಭಗವಾಧ್ವಜ ಹಾರಿಸಿದ್ದನ್ನು ಇಳಿಸಿ ರಾಷ್ಟ್ರ ಧ್ವಜ ಹಾರಿಸಿ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಆಗಿದೆ. ಹಿಂದುತ್ವವನ್ನು ಕಾಂಗ್ರೆಸ್ ಬಿಟ್ಟು ದೇಶದ ಎಲ್ಲ ಧರ್ಮಗಳು ಒಪ್ಪಿಕೊಂಡಿದೆ ಎಂದು ಹೇಳಿದರು.ನಿತೀಶ್ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಇಂಡಿಯಾ ಒಕ್ಕೂಟದ ಮುಖಂಡರುಗಳು ಬೇಸತ್ತು ಹೊರಗೆ ಬರುತ್ತಿದ್ದಾರೆ. ಇಂಡಿಯಾ ಒಕ್ಕೂಟ ತುಂಡಾದ ಮೇಲೆ ಹೆಚ್ಚಿಗೆ ಅವಕಾಶ ಸಿಕ್ಕುತ್ತಿದೆ. ಬಿಜೆಪಿಯಲ್ಲಿ ಘರ್ ವಾಪ್ಸಿ ವಿಚಾರ. ನಮ್ಮ ಮನೆಯನ್ನು ಬಿಟ್ಟು ಹೋದವರ ವಾಪಸ್ ಕರೆಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸಮಿತಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಶಾಮನೂರು ಶಿವಶಂಕರಪ್ಪ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆ ಮಾಡಿದ ಪುಣ್ಯದ ಕೆಲಸ ನಮಗೆ ಆಶೀರ್ವಾದವಾಗಿ ಲಭಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.- - - -29ಎಸ್‌ಎಂಜಿಕೆಪಿ09: ಸಂಸದ ಬಿ.ವೈ.ರಾಘವೇಂದ್ರ