ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ

| Published : Dec 16 2024, 12:48 AM IST

ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದಿಂದಲೇ ನಿಯಮಿತವಾಗಿ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು. ಮಕ್ಕಳು ಎಲ್ಲಾ ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಿ, ಸೋಲು- ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿ, ಚಿಕ್ಕವರಿದ್ದಾಗಲೇ ಕ್ರೀಡೆಯನ್ನು ಜೀವನದಲ್ಲಿ ರೂಪಿಸಿಕೊಂಡರೆ ಮುಂದೆ ದೇಹ ಆರೋಗ್ಯವಾಗಿರುತ್ತದೆ. ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ, ಸಂತ ಫಿಲೋಮಿನ ಶಾಲೆಯ ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಕೆಲಸ ನಾನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಬಾಲ್ಯದಿಂದಲೇ ನಿಯಮಿತವಾಗಿ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.

ನಗರದ ಸಂತ ಫಿಲೋಮಿನ ಶಾಲಾ ಆವರಣದಲ್ಲಿ ಜಿಲ್ಲಾ ಕ್ರೈಸ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಕಲ್ಯಾಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ ಉದ್ಘಾಟನೆ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ನಾನು ನಿಮ್ಮ ಮುಂದೆ ಸಂಸದನಾಗಿ, ವ್ಯಕ್ತಿಯಾಗಿ ಬಂದು ನಿಂತಿದ್ದೇನೆ ಎಂದರೆ ಕ್ರೈಸ್ತ ಶಾಲೆಯಲ್ಲಿ ಓದಿರುವುದೇ ಕಾರಣ. ನಾನು ಚಿಕ್ಕ ವಯಸ್ಸಿನಿಂದಲೂ ಮೈಸೂರಿನ ಸಂತ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಕ್ರೈಸ್ತ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಶಿಸ್ತು ಮತ್ತು ಬದ್ಧತೆ ಸಿಗುತ್ತದೆ ಎಂಬುದಕ್ಕೆ ನಾನೇ ಒಂದು ಸಾಕ್ಷಿಯಾಗಿದ್ದೇನೆ. ಈ ಕ್ರಿಸ್ಮಸ್ ಹಬ್ಬ ಬಂದರೆ ನನಗೆ ತುಂಬ ಸಂತೋಷವಾಗುತ್ತದೆ. ಈಗ ಸಂಸದನಾಗಿ ರಾಜಕೀಯಕ್ಕೆ ಬಂದಿದ್ದು, ಇದಕ್ಕಿಂತ ಮೊದಲು ಪ್ರತಿ ಕ್ರಿಸ್ಮಸ್ ಹಬ್ಬಕ್ಕೆ ಸಿಗುತ್ತಿದ್ದ ರಜೆ ವೇಳೆ ಮನೆಗೆ ಹೋಗುತ್ತಿದ್ದೆನು. ಕ್ರೈಸ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಕಲ್ಯಾಣ ಸಂಸ್ಥೆಯಿಂದ ಮೊದಲ ಬಾರಿಗೆ ಇಂತಹ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ಉತ್ತಮವಾಗಿದೆ ಎಂದರು.

ಸಂಸತ್ ಚುನಾವಣೆ ನಂತರ ಸೆಂಟ್ ಫಿಲೋಮಿನ ಚರ್ಚ್‌ಗೆ ಇದು ನನ್ನ ಮೊದಲ ಭೇಟಿಯಾಗಿದ್ದು, ಫಾದರ್‌ ಪ್ಯಾಟ್ರಿಕ್ ಜೆ. ರಾವ್ ಅವರ ಆಶೀರ್ವಾದ ಹಾಗೂ ಎಲ್ಲರ ಆಶೀರ್ವಾದದಿಂದ ಇಂದು ಸಂಸದನಾಗಿ ಬಂದಿದ್ದೇನೆ. ಕ್ರೈಸ್ತ ಧರ್ಮದ ಏಳಿಗೆಗಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ಮಸ್ ಎಂದರೆ ಯೇಸುವಿನ ಜನುಮದಿನವಾಗಿದೆ. ಇದೊಂದು ಪವಿತ್ರವಾದ ದಿನ ಎಂದು ಹೇಳಬಹುದು. ಮೊದಲು ಶಿಕ್ಷಣ ಕೊಟ್ಟವರನ್ನು ಮರೆಯಬಾರದು, ಹೆತ್ತ ತಾಯಿಯನ್ನು ಮರೆಯಬಾರದು. ಅನ್ನ ಕೊಟ್ಟವರನ್ನು ಮರೆಯಬಾರದು. ಅದೇ ರೀತಿ ನಾನು ಸಾಯುವವರೆಗೂ ಸಂತ ಜೋಸೇಫ್ ಶಾಲೆಯನ್ನು ಮರೆಯಲಾರೆ ತಿಳಿಸಿದರು.

ಮಕ್ಕಳು ಎಲ್ಲಾ ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಿ, ಸೋಲು- ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿ, ಚಿಕ್ಕವರಿದ್ದಾಗಲೇ ಕ್ರೀಡೆಯನ್ನು ಜೀವನದಲ್ಲಿ ರೂಪಿಸಿಕೊಂಡರೆ ಮುಂದೆ ದೇಹ ಆರೋಗ್ಯವಾಗಿರುತ್ತದೆ. ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ, ಸಂತ ಫಿಲೋಮಿನ ಶಾಲೆಯ ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಕೆಲಸ ನಾನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ವಿವಿಧ ಭಾಗಗಳಿಂದ ಆಗಮಿಸಿದ್ದ ಶಾಲಾ ಮಕ್ಕಳ ಕ್ರೀಡೆಯನ್ನು ಶಾಲೆಯ ಆವರಣದಲ್ಲಿ ನಡೆಸಲಾಯಿತು. ರನ್ನಿಂಗ್ ರೇಸ್, ಗುಂಡು ಎಸೆತ, ಲಾಂಗ್ ಜಂಪ್ ಇತರೆ ಕ್ರೀಡೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸಂತ ಅಂತೋಣಿ ದೇವಾಲಯ ಹಾಗೂ ಕ್ರೈಸ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಗೌರವಾಧ್ಯಕ್ಷ ರೆ ಫಾದರ್ ಪ್ಯಾಟ್ರಿಕ್ ಜೆ. ರಾವ್, ಸಂಸ್ಥೆ ಪೋಷಕ ಅಧ್ಯಕ್ಷರಾದ ಫಾದರ್ ವಿನಿತ್ ಸ್ವರೂಪ್, ಡಾನ್ ಬೋಸ್ಕೋ ನಿರ್ದೇಶಕ ಫಾದರ್ ಆಂಡ್ರೊಸ್, ಜೀವನಾಧಾರ ಕೇಂದ್ರದ ನಿರ್ದೇಶಕಿ ಸಿಸ್ಟರ್ ಬೀನ್, ಜಿಲ್ಲಾ ಕ್ರೈಸ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಕಲ್ಯಾಣ ಸಂಸ್ಥೆ ಅಧ್ಯಕ್ಷ ಜೆ.ಐ. ನಿರಂಜನ್ ರಾಜ್, ಪಾಲನ ಸಮಿತಿ ಕಾರ್ಯದರ್ಶಿ ಸಜ್ಜನ್ ರಾಜ್, ಕಾಂಗ್ರೆಸ್ ಮುಖಂಡ ಹರೀಶ್ ಇತರರು ಉಪಸ್ಥಿತರಿದ್ದರು. ಜ್ಞಾನ ಪ್ರಕಾಶ್ ಪ್ರಾಸ್ತಾವಿಕ ನುಡಿ ನುಡಿದರು. ಸೌಮ್ಯ ಸ್ವಾಗತಿಸಿದರು.

------

ಫೋಟೋ: 15ಎಚ್ಎಸ್ಎನ್3 :

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೇಯಸ್‌ ಪಟೇಲ್‌.