ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ಧಿಕಲಿಸಿ: ಕೃಷ್ಣಪ್ಪ

| Published : Mar 06 2024, 02:15 AM IST

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ಧಿಕಲಿಸಿ: ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಎಂದೆಂದೂ ರೈತ ವಿರೋಧಿಯೇ. ಹಾಗಾಗಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ತನಕ ರೈತರ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ ಕಾಂಗ್ರೆಸ್ ಸರ್ಕಾರ ಎಂದೆಂದೂ ರೈತ ವಿರೋಧಿಯೇ. ಹಾಗಾಗಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ತನಕ ರೈತರ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತ ವಿರೋಧಿಯಾಗಿರುವ ಈ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಲು ಲೋಕಸಭಾ ಚುನಾವಣೆ ಸಕಾಲ. ರೈತಾಪಿಗಳು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ಬುದ್ಧಿ ಕಲಿಸಿ ಎಂದು ಕರೆ ನೀಡಿದರು.

ರಾಜ್ಯದ ೧೩ ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಕೊಬ್ಬರಿಗೆ ೧೫ ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಪ್ರತಿಭಟನೆ ಮಾಡಿದರೂ ಸಹ ಬಜೆಟ್ ನಲ್ಲಿ ಕೊಬ್ಬರಿ ಬೆಳೆಗಾರರ ಪರವಾಗಿ ಯಾವುದೇ ಘೋಷಣೆ ಮಾಡಿಲ್ಲ. ರೈತರ ಹೋರಾಟಗಳಿಗೂ ಬೆಲೆ ನೀಡುತ್ತಿಲ್ಲ.

ಈ ಸರ್ಕಾರ ಕೇವಲ ಗ್ಯಾರಂಟಿಗಳಲ್ಲಿ ಮುಳುಗಿ ಹೋಗಿದೆ. ೫೬ ಸಾವಿರ ಕೋಟಿ ರು. ಗ್ಯಾರಂಟಿಗಳಿಗೆ ನೀಡುತ್ತಿದೆ. ರಾಜ್ಯದ ಅಭಿವೃದ್ಧಿಯನ್ನು ಮರೆತಿದೆ. ಗ್ಯಾರಂಟಿಗಳು ಈಗಾಗಲೇ ಹಳಸಾಗುತ್ತಿದೆ ಎಂದು ಛೇಡಿಸಿದರು. ಈ ವೇಳೆಗಾಗಲೇ ಕೊಬ್ಬರಿ ಬೆಲೆ ಕುಸಿತದ ಬಗ್ಗೆ ನಾನು ಹೋರಾಟ ಹಮ್ಮಿಕೊಳ್ಳಬೇಕಿತ್ತು. ಆದರೆ ಬಜೆಟ್ ನಲ್ಲಿ ಸರ್ಕಾರ ರೈತರ ಪರ ನಿಲ್ಲುವುದೆಂಬ ನಂಬಿಕೆ ಇತ್ತು. ಅದು ಹುಸಿಯಾಗಿದೆ. ಮುಂಬರುವ ದಿನಗಳಲ್ಲಿ ಕೊಬ್ಬರಿ ಬೆಲೆಯನ್ನು ೧೫ ಸಾವಿರ ನಿಗದಿ ಮಾಡಲು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಂ.ಟಿ.ಕೃಷ್ಣಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಾಜು, ಮುಖಂಡರಾದ ಪರಮೇಶ್, ವಿಜೇಂದ್ರಕುಮಾರ್, ಜೆಡಿಎಸ್ ಪಕ್ಷದ ವಕ್ತಾರ ವೆಂಕಟಪುರ ಯೋಗೀಶ್, ಮಂಗಿಗುಪ್ಪೆ ಬಸವರಾಜು, ಮುನಿಯೂರು ರಂಗಸ್ವಾಮಿ, ಪುಟ್ಟರಾಜು ಇತರರು ಇದ್ದರು.