ಸಾರಾಂಶ
- ಗೃಹ, ಅಪಾರ್ಟ್ಮೆಂಟ್, ವಸತಿಯೇತರ ಬಳಕೆ ನೀರು ದರ 4 ಸ್ಲ್ಯಾಬ್‌ನಡಿ ಪರಿಷ್ಕರಣೆ- ಗೃಹ ಬಳಕೆಯ ಪ್ರತಿ ಲೀಟರ್‌ಗೆ ಕನಿಷ್ಠ 0.015 ನಿಂದ ಗರಿಷ್ಠ 1 ಪೈಸೆ ವರೆಗೆ ಏರಿಕೆ
---ದರ ಏರಿಕೆ ವಿವರ
- ಗೃಹ, ಅಪಾರ್ಟ್ಮೆಂಟ್, ವಸತಿಯೇತರ ಬಳಕೆ ನೀರು ದರ 4 ಸ್ಲ್ಯಾಬ್‌ನಡಿ ಪರಿಷ್ಕರಣೆ- ಗೃಹ ಬಳಕೆಯ ಪ್ರತಿ ಲೀಟರ್‌ಗೆ ಕನಿಷ್ಠ 0.015 ನಿಂದ ಗರಿಷ್ಠ 1 ಪೈಸೆ ವರೆಗೆ ಏರಿಕೆ
- ಅಪಾರ್ಟ್‌ಮೆಂಟ್‌ಗೆ 0.030 ನಿಂದ 1 ಪೈಸೆ, ವಾಣಿಜ್ಯ ಬಳಕೆಗೆ 1ರಿಂದ 1.50 ರು.- ಕೈಗಾರಿಕೆ/ಈಜುಕೊಳ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 90 ರು.ನಿಂದ 99 ರು.
- ಇನ್ನು ಹಾಲಿ 14 ರು. ಇದ್ದ ಸ್ಯಾನಿಟರಿ ನೀರಿನ ಶುಲ್ಕವನ್ನು 34 ರು.ಗೆ ಏರಿಸಿ ಆದೇಶ===
ಕನ್ನಡಪ್ರಭ ವಾರ್ತೆ ಬೆಂಗಳೂರುಕುಡಿಯುವ ನೀರಿನ ದರ ಏಪ್ರಿಲ್‌ನಿಂದಲೇ ಏರಿಕೆಯಾಗಲಿದ್ದು, ಪ್ರತಿ ಸಾವಿರ ಲೀಟರ್‌ಗೆ 1.50 ರು.ನಿಂದ 10 ರು.ವರೆಗೆ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾವೇರಿ ನೀರಿನ ದರ ಪರಿಷ್ಕರಣೆ ಅಧಿಕೃತ ಆದೇಶ ಗುರುವಾರ ಪ್ರಕಟಿಸಲಾಗುತ್ತಿದ್ದು, ಪ್ರತಿ ಲೀಟರ್‌ಗೆ ಗರಿಷ್ಠ 1 ಪೈಸೆ ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ಈ ಪ್ರಕಾರ, ಮಾಸಿಕ 8 ಸಾವಿರ ಲೀಟರ್ ಬಳಕೆದಾರರಿಗೆ 12 ರು, 50 ಸಾವಿರ ಲೀಟರ್ ಬಳಕೆದಾರರಿಗೆ 500 ರು. ಹೆಚ್ಚಳವಾಗಲಿದೆ ಎಂದು ವಿವರಿಸಿದರು.ಗೃಹ, ಅಪಾರ್ಟ್‌ಮೆಂಟ್ ಹಾಗೂ ವಸತಿಯೇತರ ಬಳಕೆಯ ನೀರಿನ ದರವನ್ನು ತಲಾ 4 ಸ್ಲ್ಯಾಬ್‌ನಡಿ ಪರಿಷ್ಕರಿಸಿದೆ. ಗೃಹ ಬಳಕೆಯ ಪ್ರತಿ ಲೀಟರ್‌ಗೆ ಕನಿಷ್ಠ 0.015 ನಿಂದ ಗರಿಷ್ಠ 1 ಪೈಸೆ ವರೆಗೆ ಹೆಚ್ಚಿಸಿದೆ. ಅಪಾರ್ಟ್‌ಮೆಂಟ್‌ಗೆ ಕನಿಷ್ಠ 0.030 ನಿಂದ ಗರಿಷ್ಠ 1 ಪೈಸೆ, ವಾಣಿಜ್ಯ ಬಳಕೆಗೆ 1 ಪೈಸೆಯಿಂದ 1.50 ಪೈಸೆ ಹೆಚ್ಚಿಸಿದೆ. ಕೈಗಾರಿಕೆ, ಈಜುಕೊಳ ಸೇರಿ ಸಗಟು ನೀರಿನ ಬಳಕೆದಾರರಿಗೆ ಸಾವಿರ ಲೀಟರ್‌ಗೆ 90 ರು.ನಿಂದ 99 ರು.ಗೆ ಹೆಚ್ಚಳ ಮಾಡಲಾಗಿದೆ.
ಸ್ಯಾನಿಟರಿ ನೀರಿನ ದರ ಭಾರೀ ಏರಿಕೆ:ಕುಡಿಯುವ ನೀರಿನ ದರ ಏರಿಕೆಗಿಂತ, ಸ್ಯಾನಿಟರಿ ನೀರಿನ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಈವರೆಗೆ ಬಳಕೆ ಮಾಡುವ ನೀರಿನ ದರಕ್ಕೆ ಶೇ.25ರಷ್ಟು ಸ್ಯಾನಿಟರಿ ನೀರಿಗೆ ಶುಲ್ಕ ವಿಧಿಸಲಾಗಿತ್ತು. ಅದನ್ನು ಏಕಾಏಕಿ ಶೇ.50ಕ್ಕೆ ಹೆಚ್ಚಿಸಲಾಗಿದೆ. 14 ರು. ಸ್ಯಾನಿಟರಿ ನೀರಿನ ಶುಲ್ಕ ಪಾವತಿ ಮಾಡುತ್ತಿದ್ದವರು, ಇದೀಗ 34 ರು. ಪಾವತಿಸಬೇಕಾಗಲಿದೆ.
ಉದಾಹರಣೆ: ಗೃಹ ಬಳಕೆಯ ಗರಿಷ್ಠ 8 ಸಾವಿರ ಲೀಟರ್ ಬಳಕೆದಾರರು, ಈವರೆಗೆ 56 ರು. ನೀರಿನ ದರ, 30 ಮೀಟರ್ ದರ ಹಾಗೂ ಸ್ಯಾನಿಟರಿ ನೀರಿನ ದರ 14 ರು. ಸೇರಿ ಮಾಸಿಕ ಒಟ್ಟು 100 ರು. ಪಾವತಿಸಬೇಕಾಗಿತ್ತು. ಪರಿಷ್ಕೃತ ದರ ಜಾರಿಗೆ ಬಂದರೆ ಹೆಚ್ಚುವರಿ 32 ರು. ಸೇರಿಸಿ ಒಟ್ಟು132 ರು. ಪಾವತಿಸಬೇಕಾಗಲಿದೆ. ಒಂದು ವೇಳೆ ಕೊಳವೆ ಬಾವಿ ಹೊಂದಿದ್ದರೆ 100 ರು. ಸೇರಿಸಿ 232 ರು. ಪಾವತಿಸಬೇಕಾಗಲಿದೆ. ಇದು, ನೀರಿನ ಬಳಕೆ ಹಾಗೂ ಮೀಟರ್ ದರದ ಆಧಾರದಲ್ಲಿ ವ್ಯತ್ಯಾಸವಾಗಲಿದೆ.-----
ವಸತಿ ಬಳಕೆಯ ನೀರಿನ ದರ ಏರಿಕೆ ವಿವರ (ಪ್ರತಿ ಸಾವಿರ ಲೀಟರ್)ಸ್ಲ್ಯಾಬ್‌ನೀರಿನ ಬಳಕೆ(ಲೀಟರ್)ಹಳೇ ದರಪರಿಷ್ಕೃತ ದರಏರಿಕೆ ಮೊತ್ತ1ನೇ ಸ್ಲ್ಯಾಬ್0-8,0007 ರು.8.50 ರು.1.50 ರು.2ನೇ ಸ್ಲ್ಯಾಬ್8,001-25,00011 ರು.14 ರು.3 ರು.3ನೇ ಸ್ಲ್ಯಾಬ್25.001-50,00026 ರು.34 ರು.8 ರು.
4ನೇ ಸ್ಲ್ಯಾಬ್50,001+ಬಳಕೆ45 ರು.55 ರು.10 ರು.------------
ವಾಣಿಜ್ಯ ನೀರಿನ ಬಳಕೆ ದರ ಪರಿಷ್ಕರಣೆ (ಪ್ರತಿ ಸಾವಿರ ಲೀಟರ್)ಸ್ಲ್ಯಾಬ್‌ನೀರಿನ ಬಳಕೆ(ಲೀಟರ್)ಹಳೇ ದರಪರಿಷ್ಕೃತ ದರಏರಿಕೆ ಮೊತ್ತ1ನೇ ಸ್ಲ್ಯಾಬ್0- 10,00050 ರು.60 ರು.10 ರು.
2ನೇ ಸ್ಲ್ಯಾಬ್10,001-25,00057 ರು.70 ರು.13 ರು.3ನೇ ಸ್ಲ್ಯಾಬ್25,001- 50,00065 ರು.80 ರು.15 ರು.4ನೇ ಸ್ಲ್ಯಾಬ್50,001ದಿಂದ 75,00076 ರು.91 ರು.15 ರು.5ನೇ ಸ್ಲ್ಯಾಬ್750,001 ರಿಂದ 1 ಲಕ್ಷ87 ರು.99 ರು.12 ರು.
----ಅಪಾರ್ಟ್‌ಮೆಂಟ್‌ಸ್ಲ್ಯಾಬ್ (ಪ್ರತಿ ಸಾವಿರ ಲೀಟರ್)ಸ್ಲ್ಯಾಬ್‌ನೀರಿನ ಬಳಕೆ(ಲಕ್ಷ ಲೀಟರ್)ಹಳೇ ದರಪರಿಷ್ಕೃತ ದರಏರಿಕೆ ಮೊತ್ತ1ನೇ ಸ್ಲ್ಯಾಬ್0-222 ರು.30 ರು.8 ರು.2ನೇ ಸ್ಲ್ಯಾಬ್2 -522 ರು.60 ರು.38 ರು.3ನೇ ಸ್ಲ್ಯಾಬ್5-1022 ರು.100 ರು.78 ರು.4ನೇ ಸ್ಲ್ಯಾಬ್10 ಲಕ್ಷಕ್ಕಿಂತ ಅಧಿಕ22 ರು.100 ರು.78 ರು.----ಗೃಹ ಬಳಕೆಯ ಪರಿಷ್ಕೃತ ದರ ಸ್ಲ್ಯಾಬ್ ಆಧಾರದ ಅಂದಾಜುವಿವರ0-8 ಸಾವಿರ8 ರಿಂದ 25 ಸಾವಿರ25 ರಿಂದ 50 ಸಾವಿರ50 ಸಾವಿರಕ್ಕೆ
ನೀರಿನ ಶುಲ್ಕ68 ರು.112 ರು.-350 ರು.850 ರು.-1700 ರು.2,750 ರು.+ಸ್ಯಾನಿಟರಿ ನೀರಿನ ಶುಲ್ಕ 3456 ರು.-175 ರು.425 ರು.-850 ರು.1375 ರು.+ಮೀಟರ್ ಶುಲ್ಕ30 ರು.50 ರು.75 ರು.150 ರು.ಒಟ್ಟು132 ರು.218 ರು.-575 ರು.1350ರು.-2,625 ರು.4275 ರು.+
ಪ್ರತಿ ವರ್ಷ ಶೇ.3 ರಷ್ಟು ಏರಿಕೆಗೆ ಪ್ರಸ್ತಾವನೆಹಲವು ವರ್ಷದ ಬಳಿಕ ಏಕಾಏಕಿ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗಲಿದೆ. ಜತೆಗೆ, ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಏಪ್ರಿಲ್‌ನಿಂದ ನೀರಿನ ದರ ಶೇ.3 ರಷ್ಟು ಏರಿಕೆಗೆ ತೀರ್ಮಾನಿಸಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕರೆ ಪ್ರತಿ ವರ್ಷ ಶೇ.3 ರಷ್ಟು ದರ ಏರಿಕೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಡಾ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಶೇ.50 ರಷ್ಟು ಹೊರೆ ಕಡಿಮೆರಾಜ್ಯ ಸರ್ಕಾರಕ್ಕೆ ಪ್ರತಿ ಲೀಟರ್‌ಗೆ 8 ಪೈಸೆಯಿಂದ 15 ಪೈಸೆ ವರೆಗೆ ಏರಿಕೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನಗರದ ಶಾಸಕರೊಂದಿಗೆ ಸಭೆಯಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರ ಜಲಮಂಡಳಿಗೆ ನೀಡಿತ್ತು. ಜಲಮಂಡಳಿ ನಿರ್ದೇಶಕರ ಸಭೆ ನಡೆಸಿ ಗರಿಷ್ಠ 1 ಪೈಸೆ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ದರ ಏರಿಕೆಯಿಂದ ಜಲಮಂಡಳಿ ಆರ್ಥಿಕ ಹೊರೆ ಶೇ.50 ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಜಲಮಂಡಳಿ ಬಾಕಿ ವಸೂಲಿಗೂ ಒಟಿಎಸ್ಆಸ್ತಿ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ಜಾರಿಗೊಳಿಸಿದ ಒನ್ ಟೈಮ್ ಸೆಟಲ್ಮೆಂಟ್(ಒಟಿಎಸ್) ಯೋಜನೆ ಜಾರಿಗೆ ಇದೀಗ ಬೆಂಗಳೂರು ಜಲಮಂಡಳಿಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. 700 ಕೋಟಿ ರು. ನೀರಿನ ಬಾಕಿ ಬರಬೇಕಿದೆ. ಬಡ್ಡಿ ಹಾಗೂ ದಂಡ ಕಡಿತಗೊಳಿಸಿ ಬಾಕಿ ಪಾವತಿಗೆ 2 ತಿಂಗಳು ಅವಕಾಶ ನೀಡಲು ಪ್ರಸ್ತಾವ ಸಲ್ಲಿಕೆ ಮಾಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.