ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಎಚ್ಚೆತ್ತು ಬಸ್‌ ವ್ಯವಸ್ಥೆ

| Published : Jul 21 2024, 01:19 AM IST

ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಎಚ್ಚೆತ್ತು ಬಸ್‌ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ: ಸಮೀಪದ ವೀರೇಶ ನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ವೀರೇಶನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ, ಮತ್ತು ಕೆಲವು ಬಸ್ ನಿಲ್ಲುಸುತ್ತಿಲ್ಲ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ನಾಲತವಾಡ: ಸಮೀಪದ ವೀರೇಶ ನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ವೀರೇಶನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ, ಮತ್ತು ಕೆಲವು ಬಸ್ ನಿಲ್ಲುಸುತ್ತಿಲ್ಲ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ತೆರಳಿ ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ಈ ರೀತಿ ಸಮಸ್ಯೆ ಆಗದಂತೆ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮಾನವಿ ಮಾಡಿದ್ದರು. ವಿದ್ಯಾರ್ಥಿಗಳು ಕೂಡ ಅಧಿಕಾರಿಗಳ ಮನವಿ ಸ್ಪಂದಿಸಿ ಹೋರಾಟ ಕೈಬಿಟ್ಟಿದ್ದರು.ಅಧಿಕಾರಿಗಳು ಸ್ಪಂದನೆ: ಪದೇ ಪದೇ ವೀರೇಶನಗರ ಗ್ರಾಮದ ವಿದ್ಯಾಥಿಗಳು ಬಸ್ಸಿನ ತೊಂದರೆ ಇದೆ ಎಂದು ಹೋರಾಟ ನಡೆಸುತ್ತಿದ್ದರು. ಆದ್ದರಿಂದ ಮಕ್ಕಳಿಗೆ ಶಾಲಾ ಸಮಯಕ್ಕೆ ಸರಿಯಾಗಿ ತೆರಳಲು ಮತ್ತು ಮರಳಿ ಗ್ರಾಮಕ್ಕೆ ಬರಲು ಶಾಲಾ ಸಮಯಕ್ಕೆ ಒಂದು ವಿಶೇಷ ಬಸ್ ಮಂಜೂರು ಮಾಡಿದ್ದೇವೆ. ಬೆಳಗ್ಗೆ ಶಾಲಾ ಸಮಯಕ್ಕೆ ಕರೆದುಕೊಂಡು ಬಂದು ಶಾಲೆ ಬಿಟ್ಟ ನಂತರ ಗ್ರಾಮಕ್ಕೆ ತರಳಲು ಈ ಬಸ್ ನಿಯೋಜನೆ ಮಾಡಿದ್ದಾಗಿ ಮುದ್ದೇಬಿಹಾಳ ಸಾರಿಗೆ ಘಟಕದ ವ್ಯವಸ್ಥಾಪಕ ಎ.ಎಚ್.ಮದಭಾವಿ ತಿಳಿಸಿದರು.