ಮಧ್ಯಾಹ್ನದ ಬಿಸಿಯೂಟದ ಅಕ್ಕಿ, ಸಿಲಿಂಡರ್‌ ಕಳ್ಳತನ

| Published : Dec 29 2024, 01:17 AM IST

ಸಾರಾಂಶ

ಅಡುಗೆ ಕೋಣೆಯ ಬೀಗ ಮುರಿದು ಅಕ್ಕಿ ಚೀಲ ಹಾಗೂ ಸಿಲಿಂಡರ್ ಕಳ್ಳತನ ಮಾಡಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಶಿಗ್ಗಾಂವಿ: ಅಡುಗೆ ಕೋಣೆಯ ಬೀಗ ಮುರಿದು ಅಕ್ಕಿ ಚೀಲ ಹಾಗೂ ಸಿಲಿಂಡರ್ ಕಳ್ಳತನ ಮಾಡಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.ಬೆಳಗ್ಗೆ ಎದ್ದು ಅಡುಗೆ ಸಿಬ್ಬಂದಿ ಬೀಗ ಒಡೆದಿರುವುದನ್ನ ನೋಡಿ ಗಾಬರಿಯಾಗಿದ್ದಾರೆ. ತಕ್ಷಣ ಶಾಲೆಯ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಕಾಪುರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.೫೦ ಕೆಜಿಯ ಒಂದು ಪ್ಯಾಕೆಟ್‌ ಅಕ್ಕಿ ಹಾಗೂ ಒಂದು ತುಂಬಿದ ಸಿಲಿಂಡರ್‌ನ್ನು ಕಳ್ಳತನ ಮಾಡಿದ್ದಾರೆ.ನಂತರ ಹೋತನಳ್ಳಿ ಪ್ರೌಢಶಾಲೆಯಲ್ಲಿಯೂ ಕೂಡಾ ಒಂದು ತುಂಬಿದ ಸಿಲಿಂಡರ್ ಕಳ್ಳತನ ನಡೆದಿದೆ ಎನ್ನಲಾಗಿದೆ. ಅಲ್ಲದೆ ಕೆಲ ದಿನಗಳ ಹಿಂದೆನೂ ಕೂಡಾ ಅಂದಲಗಿಯಲ್ಲಿ ಕೂಡಾ ಸಿಲಿಂಡ್‌ರ ಕಳ್ಳತನ ನಡೆದಿದೆ. ತಾಲೂಕಿನ ಬಂಕಾಪುರ ಪೊಲೀಸರು ಪ್ರಕರಣ ಕುರಿತು ತನಿಖೆ ನಡೆಸಿದ್ದಾರೆ.

ಹುಲಿಕಟ್ಟಿ ಹಾಗೂ ಹೋತನಳ್ಳಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕಳ್ಳತನ ಜರುಗಿದ್ದು ಅಲ್ಲದೆ ಕೆಲ ದಿನಗಳ ಹಿಂದೆಯೂ ಕೂಡಾ ಅಂದಲಗಿ ಗ್ರಾಮದ ಶಾಲೆಯಲ್ಲಿಯೂ ಕೂಡಾ ಸಿಲಿಂಡರ್ ಕಳ್ಳತನ ಮಾಡಿದ್ದಾರೆ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಈ ಕುರಿತು ಬಂಕಾಪೂರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದರ ಕುರಿತು ಬಂಕಾಪೂರ ಪೊಲೀಸರು ತನಿಖೆಯನ್ನು ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.