ಕನ್ನಡಪ್ರಭ ವಾರ್ತೆ ಗುಬ್ಬಿ

ವಸಂತ ನರಸಾಪುರಕ್ಕೆ 14000 ಎಕರೆಯನ್ನು ನೀಡಿದ್ದು, ಅಲ್ಲಿ ಹಲವಾರು ಯುವಕರಿಗೆ ಉದ್ಯೋಗ ದೊರಕಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದರು. ಹೇಳಿದರು. ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾಭಿವೃದ್ಧಿ ಸಂಘದ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ನನ್ನ ಅನುದಾನದಿಂದ ಹಣ ಬಿಡುಗಡೆ ಮಾಡಿಕೊಡುತ್ತೇನೆ. ಅಗ್ನಿವಂಶ ಸಮಾಜದಲ್ಲಿ ಹುಟ್ಟಿದ ವ್ಯಕ್ತಿಗಳು ಅತಿ ನಿಪುಣರು ಹಾಗೂ ತಮ್ಮ ಸಮಾಜದ ಕೆಲಸ ಕಾರ್ಯಗಳನ್ನು ಚಾಣಾಕ್ಷತೆಯಿಂದ ಮಾಡಿಸಿಕೊಳ್ಳುತ್ತಾರೆ.‌ ಮಹನೀಯರ ಜಯಂತಿಯನ್ನು ಆಚರಿಸುವುದು ಅವರು ನಡೆದು ಬಂದ ದಾರಿ ಹಾಗೂ ಅವರ ತತ್ವಗಳನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ. ಮಹಾತ್ಮರು ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮೂಡುಪಿಟ್ಟಿರುತ್ತಾರೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತೀಯತೆಯನ್ನು ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಅಂತ ಅಂಥವರ ಪಟ್ಟಿಯಲ್ಲಿ ಅಗ್ನಿ ಬನ್ನಿರಾಯಸ್ವಾಮಿಯು ಸೇರುತ್ತಾರೆ. ಆದ್ದರಿಂದ ಅಗ್ನಿ ಬನ್ನಿರಾಯ ಸ್ವಾಮಿಯನ್ನು ತಿಗಳ ಸಮಾಜದವರು ಪೂಜಿಸುತ್ತಾ ಬಂದಿದ್ದಾರೆ. ಎಂದು ಹೇಳಿದರು.ಮುಖಂಡರಾದ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ಅಗ್ನಿವಂಶ ಸಮಾಜದವರು ತಮ್ಮ ಮಕ್ಕಳುಗಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಉದ್ಯೋಗ ಅಲಂಕರಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಲರಾಮಯ್ಯ, ಚಂದ್ರಶೇಖರ್ ಬಾಬು, ಅರ್ಜುನ್ ಬಿಎಸ್ ನಾಗರಾಜು, ಸಾಗರನಳ್ಳಿ ನಂಜೇಗೌಡರು ಈ ಸಂದರ್ಭದಲ್ಲಿ ಮಾತನಾಡಿದರು. ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಎವಿಕೆ ಸಮುದಾಯದ ಭವನದವರೆಗೆ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ವಿಗ್ರಹವನ್ನು ಬೆಳ್ಳಿರಥದಲ್ಲಿ ಕೂರಿಸಿ ಆಕರ್ಷಕ 201 ಕುಂಭಗಳೊಂದಿಗೆ ಡಂಕವಾದ್ಯ ವೀರಗಾಸೆ ನೃತ್ಯ, ನಂದಿಧ್ವಜ ಕುಣಿತ, ಮಂಗಳವಾದ್ಯ, ಹಲವು ಸಾಂಸ್ಕೃತಿಕ ಜಾನಪದ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಬೃಹತ್ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಜ್ಜಿಗೆ, ಪಾನಕ, ಹೆಸರು ಬೇಳೆ, ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಎನ್ ಬೆಟ್ಟಸ್ವಾಮಿ, ಕೃಷ್ಣಪ್ಪ, ಕಳ್ಳಿಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ, ಹುಚ್ಚಗೌಡ್ರು, ಬಸವರಾಜು, ಹನುಮಂತಯ್ಯ, ಜಿಬಿ ಮಲ್ಲಪ್ಪ ಉಪಾಧ್ಯಕ್ಷರಾದ ಎನ್.ಸಿ. ಶಿವಣ್ಣ, ಪಿ.ಟಿ ಸಣ್ಣರಂಗಯ್ಯ, ಜಂಟಿ ಕಾರ್ಯದರ್ಶಿ ಜಿ ಬಿ ನಾಗರಾಜು, ಜೆಸಿ ಲೋಕೇಶ್ ಬಾಬು,ಟಿ ವೈ ಯೋಗಾನಂದಕುಮಾರ್, ರಾಜಣ್ಣ, ರಾಮಚಂದ್ರಯ್ಯ, ಉಂಡೆ ರಾಮಯ್ಯ, ಲಕ್ಕಣ್ಣ, ಸಣ್ಣ ಹನುಮಂತಯ್ಯ, ಕುಂಬಿನರಸಯ್ಯ, ಮುಳಕಟ್ಟಯ್ಯ, ಹಾಗೂ ಇತರ ಪದಾಧಿಕಾರಿಗಳು, 18 ಕೋಮಿನ ಮುಖಂಡರುಗಳು ಮತ್ತಿತರರು ಭಾಗವಹಿಸಿದ್ದರು.

28 ಜಿ ಯು ಬಿ 2

ಗುಬ್ಬಿ ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ ಸಮಾರಂಭ ನಡೆಯಿತು.