ಸಾರಾಂಶ
ಹಿರೇಕೆರೂರು: ಒಂದು ಮಾದರಿ ಕೆರೆ ಜನ- ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಲ್ಮಾ ಬೊಗಳೆ ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ತಾಲೂಕಿನ ಚಿಕ್ಕೇರೂರು ಗ್ರಾಮದ ಬೆನಕನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹಲವಾರು ವರ್ಷಗಳಿಂದ ಗ್ರಾಮದ ಬೆನಕನ ಕೆರೆಯಲ್ಲಿ ಹೂಳು ತುಂಬಿದ್ದು, ಕೆರೆಯ ನೀರು ಮಲಿನವಾಗಿ ಉಪಯೋಗಕ್ಕೆ ಬಾರದ ರೀತಿಯಲ್ಲಿ ನಮ್ಮ ಕೆರೆ ಇತ್ತು. ಅದನ್ನು ನಮ್ಮ ಗ್ರಾಮಸ್ಥರು ಕೆರೆ ಅಭಿವೃದ್ಧಿಪಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬೇಡಿಕೆ ಸಲ್ಲಿಸಿದ್ದರಿಂದ ಕೆರೆ ಕಾಮಗಾರಿಗೆ ಮಂಜೂರಾತಿ ನೀಡಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಅನೇಕ ಕಾರ್ಯಕ್ರಮನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ನಶಿಸಿ ಹೋಗುತ್ತಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಕೆರೆ ಹೂಳೆತ್ತಿ ರಾಜ್ಯದಲ್ಲಿ 805 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 35 ಕೆರೆಗಳನ್ನು ಪುನರ್ ಚೇತನಗೊಳಿಸಲಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಶಿವರಾಜ ಹರಿಜನ ಮಾತನಾಡಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಡ ಜನರ ಮತ್ತು ಸಮುದಾಯ ಅಭಿವೃದ್ಧಿಗಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿಯೂ ಜನರಿಗೆ ಅನುಕೂಲವಾಗುತ್ತಿದೆ ಎಂದರು.ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ಎಂ., ಕೆರೆ ಸಮಿತಿಯ ಅಧ್ಯಕ್ಷ ಪರಮೇಶಪ್ಪ ಲೆಕ್ಕಪ್ಪಳ್ಳವರ, ಉಪಾಧ್ಯಕ್ಷ ಮಹೇಶ್ ಮುತ್ತಳ್ಳಿ, ಪಿಡಿಒ ವೀರನಗೌಡ ಪಾಟೀಲ, ದೊಡ್ಡಮಲ್ಲಪ್ಪ ಕಾರಗಿ, ಮಂಜುನಾಥ್ ಕಾರಗಿ, ಶಿವಾನಂದ ಬಣಕಾರ, ಕರಬಸಪ್ಪ ಬಣಕಾರ, ಮಲ್ಲಿಕಾರ್ಜುನ್ ಲೆಕ್ಕಪ್ಪಳ್ಳವರ, ಚಂದ್ರಪ್ಪ ದ್ಯಾಮನಗೌಡ, ಒಕ್ಕೂಟದ ಅಧ್ಯಕ್ಷೆ ಗೀತಾ ಹೊಸಗೌಡ್ರು, ಲತಾ ಡಮ್ಮಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಕೆರೆ ಸಮಿತಿಯ ಸರ್ವ ಸದಸ್ಯರು ಗ್ರಾಮಸ್ಥರು ಇದ್ದರು.ನಶ್ವರ ಬದುಕಿನಲ್ಲಿ ಶಿವನೊಬ್ಬನೇ ಸತ್ಯ
ಬ್ಯಾಡಗಿ: ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ವತಿಯಿಂದ ಪರಶಿವನ ಮಹಾರಥೋತ್ಸವ ಹಾಗೂ ಮೆರವಣಿಗೆ ನಡೆಯಿತು.ಬುಧವಾರ ಬೆಳಗ್ಗೆ 9ಕ್ಕೆ ಮುಪ್ಪಿನೇಶ್ವರ ಮಠದಿಂದ ಶಿವನ ಮೆರವಣಿಗೆ ಚಾಲನೆ ನೀಡಲಾಯಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಹೋದರಿ ಬಿ. ಸುರೇಖಾ ಅವರು, ನಶ್ವರ ಬದುಕಿನಲ್ಲಿ ಶಿವನೊಬ್ಬನೇ ಸತ್ಯ. ದೇಹ ತೊರೆದ ಮೇಲೆ ಆತ್ಮ ಶಿವನಲ್ಲಿಯೇ ಲೀನವಾಗುವುದು ಎಂಬ ಸತ್ಯವನ್ನು ಅರಿಯದೇ ಮನುಷ್ಯ ಬದುಕಿನ ಭವ ಬಂಧಗಳಲ್ಲಿ ಸಿಲುಕಿ ನರಳುತ್ತಿದ್ದಾನೆ ಎಂದರು.ನಂತರ ಮೆರವಣಿಗೆ ಪಟ್ಟಣದ ಮುಖ್ಯರಸ್ತೆ, ಸುಭಾಷ ಸರ್ಕಲ್, ಹಳೆ ಪುರಸಭೆ ಎಪಿಎಂಸಿ ರಸ್ತೆ ಮೂಲಕ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯ ತಲುಪಿತು.