ಕೃಷಿ ಇಲಾಖೆಯ ಪಬ್ಲಿಕ್ ಆ್ಯಪ್ ರೈತರಿಗೆ ಉಪಯುಕ್ತ: ಕೆ.ಎಸ್.ಆನಂದ್

| Published : Oct 19 2025, 01:00 AM IST

ಸಾರಾಂಶ

ಕಡೂರುರೈತ ಬಾಂಧವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಆ್ಯಪ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಕೃಷಿ ಇಲಾಖೆ ಚಾನಲ್‍ನ್ನು ರೈತರು ಸೇರಬಹುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಂಚನಹಳ್ಳಿ ಸಭೆಯಲ್ಲಿ ಕೃಷಿ ಇಲಾಖೆಯ ವಾಟ್ಸ್ಯಾಪ್ ಪಬ್ಲಿಕ್ ಚಾನಲ್‍ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ರೈತ ಬಾಂಧವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಆ್ಯಪ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಕೃಷಿ ಇಲಾಖೆ ಚಾನಲ್‍ನ್ನು ರೈತರು ಸೇರಬಹುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆಯಿಂದ ಪ್ರಾರಂಭಿಸಿದ ವಾಟ್ಸ್ಯಾಪ್ ಪಬ್ಲಿಕ್ ಚಾನಲ್‍ ಉದ್ಘಾಟಿಸಿ ಮಾತನಾಡಿ, ಚಾನಲ್‍ನಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳಾದ ಬೆಳೆವಿಮೆ, ಬೆಳೆ ಸಮೀಕ್ಷೆ, ಕೃಷಿ ಭಾಗ್ಯ, ಸಮಗ್ರ ಕೃಷಿ ಪದ್ಧತಿ,ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹೇಳಿದರು.ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಂ.ಅಶೋಕ್, ಕೃಷಿ ಇಲಾಖೆಯಿಂದ ರೈತರನ್ನು ತಲುಪಲು ಪ್ರಾರಂಭ ಮಾಡಿರುವ ವಾಟ್ಸ್ಯಾಪ್ ಪಬ್ಲಿಕ್ ಚಾನಲ್ ಉತ್ತಮ ಪ್ರಯತ್ನವಾಗಿದ್ದು ರೈತರು ಹೆಚ್ಚಿನ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು. ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಪಂಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ಶೀಲಾ ರವಿಕುಮಾರ್, ಸದಸ್ಯರಾದ ರೂಪಾ, ರೇಖಾ,ರಂಗನಾಥ, ಮರುಳಪ್ಪ, ಶಾರದಮ್ಮ, ಲತಾ ಮಣಿ ಕೃಷಿ ಅಧಿಕಾರಿ ಹರಿಪ್ರಸಾದ್, ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಊರಿನ ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು. 17ಕೆಕೆಡಿಯು3

ಕಡೂರು ಕೃಷಿ ಇಲಾಖೆ ಹೊರತಂದಿರುವ ವಾಟ್ಸ್ಯಾಪ್ ಪಬ್ಲಿಕ್ ಚಾನಲ್‍ನ್ನು ಶಾಸಕ ಕೆ.ಎಸ್.ಆನಂದ್ ಬಿಡುಗಡೆ ಮಾಡಿದರು.