ಕಡೂರು ಶಾಲಾ ಮಕ್ಕಳಿಗೆ ರೈತರ ಭೂಮಿಯಲ್ಲಿ ಕೃಷಿ ಮಾಹಿತಿ

| Published : Feb 16 2025, 01:46 AM IST

ಸಾರಾಂಶ

ನಾಡಿನ ಜನರಿಗೆ ಅನ್ನ ನೀಡುವ ಅನ್ನದಾತ ರೈತನು ಬೆವರಿಳಿಸಿ ದುಡಿಯುವ ಶ್ರಮದಿಂದ ಆಹಾರ ಉತ್ಪಾದನೆ ಹೇಗೆ ಮಾಡುತ್ತಾರೆ ಎಂಬುದನ್ನು ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿತೆ ತೋರುವ ಮೂಲಕ ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಶಾಲಾ ಮಕ್ಕಳು ಸಾಕ್ಷಿಯಾದರು.

ಪ್ರಜ್ಞಾ ಸೆಂಟ್ರಲ್‌ ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ । ಬಿತ್ತನೆ ಚಟುವಟಿಕೆಗಳ ಪ್ರಾತ್ಯಕ್ಷಿಕೆ ಮೂಲಕ ಅರಿವು, ಜಾಗೃತಿ

ಕನ್ನಡಪ್ರಭ ವಾರ್ತೆ ಕಡೂರು

ನಾಡಿನ ಜನರಿಗೆ ಅನ್ನ ನೀಡುವ ಅನ್ನದಾತ ರೈತನು ಬೆವರಿಳಿಸಿ ದುಡಿಯುವ ಶ್ರಮದಿಂದ ಆಹಾರ ಉತ್ಪಾದನೆ ಹೇಗೆ ಮಾಡುತ್ತಾರೆ ಎಂಬುದನ್ನು ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿತೆ ತೋರುವ ಮೂಲಕ ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಶಾಲಾ ಮಕ್ಕಳು ಸಾಕ್ಷಿಯಾದರು.

ಪಟ್ಟಣದ ಹೊರ ವಲಯದಲ್ಲಿರುವ ಪ್ರಜ್ಞಾ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳನ್ನು ತೋಟಗಳಿಗೆ ಕರೆದೊಯ್ದುು ರೈತರು ಮಾಡುವ ಕೃಷಿ ಬಗ್ಗೆ ಮಕ್ಕಳಿಂದಲೇ ಕೃಷಿ ಚಟುವಟಿಕೆ ಮಾಡಿಸಿ ಬೆಳೆ ಬೆಳೆಯುವ ಬಗ್ಗೆ ಅರಿವು ಮಾಡಿಸಲಾಯಿತು.

ಕೃಷಿ ವಿಜ್ಞಾನಿ ತಾಲೂಕಿನ ಬಿಸಲೇಹಳ್ಳಿಯ ಬಿ.ವೈ ನಟರಾಜ್ ಮಕ್ಕಳಿಗೆ ಗೊಬ್ಬರ ಮಾಡುವುದು, ಬೀಜ ಹಾಕುವುದು ಹಾಗೂ ಸೋಯಿಂಗ್ ಮಾಡುವ ವಿವಿಧ ಹಂತಗಳ ಕೃಷಿ ಚಟುವಟಿಕೆಗಳನ್ನು ಶಾಲೆಯ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಂದಲೇ ಮಾಡಿಸಿದರು. ರೈತರು ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಜಮೀನುಗಳಲ್ಲಿ ದುಡಿಯುವ ಮೂಲಕ ಕುಟುಂಬ ನಿರ್ವಹಣೆ ಮಾಡುವ ರೈತರ ಕಷ್ಟದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂಭಂದ ವಿಜ್ಞಾನಿ ನಟರಾಜ್, ವಿದ್ಯಾರ್ಥಿಗಳಿಗೆ ಗೊಬ್ಬರ, ಬೀಜ ಪರಿಚಯಿಸಿ ಕೃಷಿ ಪದ್ಧತಿಯನ್ನು ತಿಳಿಸಿ ರೈತರ ಅನುಭವಿಸುವ ಕಷ್ಟಗಳನ್ನು ಮಕ್ಕಳಿಗೆ ತಿಳಿಸಿ, ಮಣ್ಣಿನ ಮಹತ್ವ ನೀರಿನ ಪ್ರಾಮುಖ್ಯತೆ ಅರಿತು ಲಭ್ಯವಿರುವ ಸಂಪನ್ಮೂಲಗಳಿಂದಲೇ ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೆಯುವ ಪದ್ಧತಿಯನ್ನು ಮಕ್ಕಳಿಗೆ ತಿಳಿಸಿದರು.

ಶಾಲೆಗೆ ಬರುವ ಮಕ್ಕಳಲ್ಲಿ ಕೃಷಿ ಕುಟುಂಬದಿಂದ ಬಂದಂತಹವರಾಗಿದ್ದರು ಕೂಡ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಬೆಳೆವ ಬಗೆ ತಿಳಿಸಿ ನಿಮ್ಮ ತಂದೆ ತಾಯಿಗಳು ಬೆಳೆ ಬೆಳೆಯುವ ಸಮಯದಲ್ಲಿ ಪಡುವ ಕಷ್ಟದ ಬಗ್ಗೆ ಮಕ್ಕಳು ತಿಳಿಯಬೇಕು. ಆ ಮೂಲಕ ಮಕ್ಕಳಿಗೆ ಕುಟುಂಬದ ಹಿರಿಯರ ಸಂಕಷ್ಟಗಳನ್ನು ಆರಿಯಬೇಕು ಎಂದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದ್ರರಾಜನಾಯ್ಕ ಶಾಲೆಯ ಆಡಳಿತ ಮಂಡಳಿ ಮಕ್ಕಳಲ್ಲಿ ಕೃಷಿ ಚಟುವಟಿಕೆಗಳು ಕುರಿತು ತೋರಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರೈತರ ಬದುಕು ಸದಾ ಸಂಕಷ್ಟದಲ್ಲಿ ಇರುತ್ತದೆ. ಅನ್ನದಾತನ ಕುರಿತು ನಾವು ಪ್ರತಿ ಭಾರಿ ಸ್ಮರಿಸಬೇಕು. ರೈತ ದುಡಿಯುವುದನ್ನು ಕೈಬಿಟ್ಟರೆ ನಾವೆಲ್ಲ ಉಪವಾಸ ಬೀಳಬೇಕಾದೀತು.. ಅಂತಹ ಎಚ್ಚರಿಕೆಗಳನ್ನು ಇಟ್ಟುಕೊಂಡು ಕೃಷಿ ಮಾಡುವ ರೈತರಿಗೆ ಗೌರವ ನೀಡಬೇಕೆಂದರು.

ಶಾಲೆಯ ಶಿಕ್ಷಕರಾದ ಚೈತ್ರ, ಸೌಮ್ಯ, ಬಿ.ಎಸ್. ಉಷಾ, ಮಾರುತಿ, ಮಂಜುನಾಥ್, ಮಧುಶಾಲಿನಿ, ಆದರ್ಶ, ಬಿ ಆಶಾ, ಸಿಬ್ಬಂದಿ ಇರ್ಷಾದ್ ಮತ್ತಿತರರು ಇದ್ದರು.

ನಮಗೆ ಕೃಷಿ ಪರಿಚಯ ಮಾಡಿರುವುದು ಸಂತೋಷ ತಂದಿದೆ. ನಮ್ಮ ಪೋಷಕರು ನಮ್ಮ ಮಗ ಅಥವಾ ಮಗಳು ಕಲಿತು ಉತ್ತಮ ಸ್ಥಾನಕ್ಕೆ ಹೋಗಲಿ ಎಂದು ಅಪೇಕ್ಷೆ ಪಡುವ ಮೂಲಕ ನಮ್ಮ ಕಷ್ಟ ಮಕ್ಕಳಿಗೆ ಬಾರದಿರಲಿ ಎಂದು ಎಂಜಿನಿಯರ್, ಡಾಕ್ಟರ್ ಆಗಲಿ ಕಷ್ಟಪಡುತ್ತಿದ್ದಾರೆ. ರೈತ ಬೆಳೆದರೆ ಮಾತ್ರ ನಾಡಿಗೆ ಅನ್ನ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಆಹಾರಕ್ಕೆ ಕೊರತೆ ಬರಬಹುದು. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

ಪ್ರತೀಜ್ಞಾ, 9ನೇ ತರಗತಿ, ಪ್ರಜ್ಞಾ ಸೆಂಟ್ರಲ್ ಶಾಲೆ.