ಶೇ.100 ಗುರಿ ಸಾಧನೆಗೆ ಮುಂದಾಗಿ: ಪರಂ ಸಲಹೆ

| Published : Dec 21 2023, 01:16 AM IST

ಶೇ.100 ಗುರಿ ಸಾಧನೆಗೆ ಮುಂದಾಗಿ: ಪರಂ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಕ್‌ನಿಂದ ‘ಎ ’ ಶ್ರೇಣಿ ಪಡೆದಿರುವ ಸಾಹೆ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಶೇ.70 ರಷ್ಟು ಪ್ರಾಧ್ಯಾಪಕರು ಸಂಶೋಧನೆಯಲ್ಲಿ ತೊಡಗಿದ್ದು, ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡಲು ಶೇ. 100 ರಷ್ಟು ಗುರಿ ಸಾಧಿಸಲು ಮುಂದಾಗುವಂತೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಾಧ್ಯಾಪಕರಿಗೆ ಸಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನ್ಯಾಕ್‌ನಿಂದ ‘ಎ+’ ಶ್ರೇಣಿ ಪಡೆದಿರುವ ಸಾಹೆ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಶೇ.70 ರಷ್ಟು ಪ್ರಾಧ್ಯಾಪಕರು ಸಂಶೋಧನೆಯಲ್ಲಿ ತೊಡಗಿದ್ದು, ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡಲು ಶೇ. 100 ರಷ್ಟು ಗುರಿ ಸಾಧಿಸಲು ಮುಂದಾಗುವಂತೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಾಧ್ಯಾಪಕರಿಗೆ ಸಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ ಕರೆ ನೀಡಿದರು.

ನಗರದಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಕಂಪ್ಯೂಟರ್ ಪ್ರಯೋಗಾಲಯಗಳ ಉದ್ಘಾಟನೆ ಮಾಡಿ, ಪ್ರಾಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ, ಸೈಬರ್‌ ಕ್ರೈಂ, ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್ ಅಧ್ಯಯನಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಉಂಟಾಗುತ್ತಿದೆ. ಹಾಗಾಗಿ ತರಬೇತಿ ಮತ್ತು ಕಾರ್ಯಾಗಾರಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಜ್ಞರಿಂದ ತರಬೇತಿ ಪಡೆದುಕೊಳ್ಳಲು ಸೂಕ್ತ ಪ್ರಯೋಗಾಲಯ ನಿರ್ಮಾಣ ಮಾಡುವುದರ ಮೂಲಕ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಂಸ್ಥೆ ಮುಂದಾಗಿದೆ ಎಂದರು.

ಸಾಹೆ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಶೇ 70 ಮಂದಿ ಪ್ರಾಧ್ಯಾಪಕರು ಪಿ ಎಚ್ ಡಿ ಅಧ್ಯಯನ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತವಾದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು. ಜೊತೆಗೆ ಅವರಿಗೆ ತರಬೇತಿಗೆ ಅನುಕೂಲವಾಗಲಿದೆ. ಮುಂದಿನ ದಿನದಲ್ಲಿ ಉನ್ನತ ದರ್ಜೆಯ ಉದ್ಯೋಗವನ್ನುಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ನುಡಿದರು.

ಉಪನ್ಯಾಸ ಮಾಡುವುದಕ್ಕೆ ಸೀಮಿತವಾಗದೆ ತಮ್ಮ ಇಚ್ಚಿಯುಳ್ಳ ಕೇತ್ರದಲ್ಲಿ ಸಂಶೋಧನೆ ಮತ್ತು ಪ್ರಬಂಧ ಮಂಡನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳುವಂತೆ ಪ್ರಾಧ್ಯಾಪಕರಲ್ಲಿ ಮನವಿ ಮಾಡಿದ ಅವರು ನಮ್ಮ ಸಂಸ್ಥೆಗೆ ವಿದೇಶಿ ಶಿಕ್ಷಣ ತಜ್ಞರ ತಂಡ ಭೇಟಿ ನೀಡಿಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿದೆ. ಅವರ ನೆರವು-ಸಹಕಾರವನ್ನು ಪಡೆದುಕೊಳ್ಳಲಾಗುವುದು. ಸಂಸ್ಥೆಯಲ್ಲಿ ಅಭಿವೃದ್ಧಿ ಮತ್ತು ಪ್ರಗತಿ ತೃಪ್ತಿದಾಯಕವಾಗಿದೆ. ಇಲ್ಲಿಗೆ ನಿಲ್ಲದೆಇನ್ನಷ್ಟು ಶೈಕ್ಷಣಿಕ ಕ್ರಾಂತಿಯ ಕೆಲಸ ಮಾಡುವ ಕಾರ್ಯಪ್ರಜ್ಞೆ ಅಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂಎಸ್.ರವಿಪ್ರಕಾಶ್, ಸಾಹೆ ವಿಶ್ವವಿದ್ಯಾಲಯದ ಕುಲಪತಿಯ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಡೀನ್‌ ರೇಣುಕಾಲತಾ, ಪ್ರೊ.ಮಂಜುಳಾ, ಉದ್ಯೋಗ ನೇಮಕಾತಿ ಮತ್ತು ತರಬೇತಿ ವಿಭಾಗದ ಡಾ.ಆಶೋಕ ಮೆಹ್ತಾ, ಎಸ್ಟೇಟ್‌ ಅಧಿಕಾರಿ ಶಿವರಾಜು ಹಾಜರಿದ್ದರು.